ಚೆನ್ನೈ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮಂಗಳವಾರ ಹೈಜಂಪ್ ಟಿ63 ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಮರಿಯಪ್ಪನ್ ತಂಗವೇಲು ಅವರಿಗೆ ತಮಿಳುನಾಡು ಸರ್ಕಾರ 2 ಕೋಟಿ ರೂಪಾಯಿಗಳ ನಗದು ಬಹುಮಾನ ಪ್ರಕಟಿಸಿದೆ.
ಮಂಗಳವಾರ ನಡೆದ ಹೈಜಂಪ್ ಟಿ63 ಫೈನಲ್ಸ್ನಲ್ಲಿ ತಂಗವೇಲು 1.86 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಜಿಗಿದಿದ್ದರು. ಇದೇ ಸ್ಪರ್ಧೆಯಲ್ಲಿ ಶರದ್ ಕುಮಾರ್ ಕಂಚು ಗೆದ್ದು ದೇಶದ ಪದಕ ಸಂಖ್ಯೆಯನ್ನು 10ಕ್ಕೇರಿಸಿದ್ದರು.
ತಮಿಳುನಾಡಿನ ಚಿನ್ನದ ಮಗ 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಈ ವರ್ಷ ಬೆಳ್ಳಿ ಸಾಧನೆ ಮಾಡಿದ್ದಾರೆ. ಟೋಕಿಯೋದಲ್ಲಿ ಬೆಳ್ಳಿ ಗೆದ್ದಿರುವ ಸಾಧನೆಯನ್ನು ಮೆಚ್ಚಿ ತಂಗವೇಲು ಅವರಿಗೆ ನಗದು ಬಹುಮಾನ ರೂಪಾಯಿ ನೀಡಲಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
"ಟೋಕಿಯೊ 2020 ಪ್ಯಾರಾಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರಿಸುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಹೈಜಂಪ್‌ನಲ್ಲಿ ಸತತ 2 ನೇ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ನಮ್ಮ ತಮಿಳುನಾಡಿನ ಸ್ಟಾರ್ ತಿರು ಮರಿಯಪ್ಪನ್ ತಂಗವೇಲು, ಕಂಚುಗೆದ್ದ ಶರದ್ ಕುಮಾರ್ ಹಾಗೂ ಶೂಟಿಂಗ್‌ನಲ್ಲಿ ಕಂಚಿನ ಸಾಧನೆ ಮಾಡಿದ ಸಿಂಗರಾಜ್ ಅದಾನ ಅವರಿಗೆ ಅಭಿನಂದನೆಗಳು" ಎಂದು ಸ್ಟಾಲಿನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಹರಿಯಾಣ ಸರ್ಕಾರದಿಂದ ಸುಮಿತ್ಗೆ 6 ಕೋಟಿ ರೂ., ಕಥುನಿಯಾಗೆ 4 ಕೋಟಿ ರೂ. ಘೋಷಣೆ
ಪ್ಯಾರಾಲಿಂಪಿಕ್ಸ್ 'ಚಿನ್ನ' ಅವಿನ ಲೇಖಾರಾಗೆ ಆನಂದ್ ಮಹೀಂದ್ರಾ ಭರ್ಜರಿ ಗಿಫ್ಟ್