ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನ ಸೆಮಿಫೈನಲ್ ಹಾಕಿ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಅರ್ಜೆಂಟೀನಾ ವಿರುದ್ಧ 2-1 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದೆ. ಇದೀಗ ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ನಾಳೆ ಸೆಣಸಾಟ ನಡೆಸಲಿದೆ. ತಂಡ ಸೋಲುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಹಾಕಿ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ಹಾಗೂ ಕೋಚ್ ಜೋರ್ಡ್ ಮರಿಜಿನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಸೋಲಿನಿಂದ ನಿರಾಸೆಗೊಳಗಾಗಬೇಡಿ ಎಂದು ಧೈರ್ಯ ತುಂಬಿದ್ದಾರೆ.
-
One of the things we will remember #Tokyo2020 for is the stupendous performance by our Hockey teams.
— Narendra Modi (@narendramodi) August 4, 2021 " class="align-text-top noRightClick twitterSection" data="
Today and through the Games, our Women’s Hockey team played with grit and showcased great skill. Proud of the team. Best of luck for the game ahead and for future endeavours.
">One of the things we will remember #Tokyo2020 for is the stupendous performance by our Hockey teams.
— Narendra Modi (@narendramodi) August 4, 2021
Today and through the Games, our Women’s Hockey team played with grit and showcased great skill. Proud of the team. Best of luck for the game ahead and for future endeavours.One of the things we will remember #Tokyo2020 for is the stupendous performance by our Hockey teams.
— Narendra Modi (@narendramodi) August 4, 2021
Today and through the Games, our Women’s Hockey team played with grit and showcased great skill. Proud of the team. Best of luck for the game ahead and for future endeavours.
ಸೋಲು - ಗೆಲುವು ತಂಡದ ಭಾಗವಾಗಿದ್ದು, ಅರ್ಜೇಂಟೀನಾ ವಿರುದ್ಧದ ಸೋಲಿನಿಂದ ನಿರಾಸೆಗೊಳಗಾಗಬೇಡಿ. ತಂಡದ ಪ್ರದರ್ಶನದಿಂದ ಇಡೀ ಭಾರತ ಹೆಮ್ಮೆ ಪಟ್ಟಿದೆ ಎಂದು ತಿಳಿಸಿದ್ದಾರೆ. ಪಂದ್ಯ ಆರಂಭಗೊಳ್ಳುತ್ತಿದ್ದಂತೆ ರಾಣಿ ರಾಂಪಾಲ್ ಪಡೆ 1 ಗೋಲು ಗಳಿಕೆ ಮಾಡಿ ಮುನ್ನಡೆ ಪಡೆದುಕೊಂಡಿತ್ತು. ಇದಾದ ಬಳಿಕ ಸವಾರಿ ಮಾಡಿದ ಅರ್ಜೇಂಟಿನಾ 2 ಗೋಲು ಗಳಿಕೆ ಮಾಡಿ ಮುನ್ನಡೆ ಪಡೆದುಕೊಂಡಿತು. ಇದಾದ ಬಳಿಕ ಭಾರತದ ಮಹಿಳಾ ತಂಡ ಯಾವುದೇ ಗೋಲು ಗಳಿಕೆ ಮಾಡಲು ಶಕ್ತವಾಗಲಿಲ್ಲ. ಹೀಗಾಗಿ ಸೋಲು ಕಾಣುವಂತಾಯಿತು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಕೊನೆ ಕ್ಷಣದಲ್ಲಿ ಎಡವಿ ಪದಕ ವಂಚಿತರಾಗುತ್ತಿದ್ದಾರೆ. ಇಂದು ಬೆಳಗ್ಗೆ ನಡೆದ ಪಂದ್ಯದಲ್ಲೂ ಲವ್ಲಿನಾ ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಇದಾದ ಬಳಿಕ ಕುಸ್ತಿಯಲ್ಲಿ ದೀಪಕ್ ಕೂಡ ಸೆಮೀಸ್ನಲ್ಲಿ ಸೋಲು ಕಂಡಿದ್ದು, ಇದೀಗ ಕಂಚಿನ ಪದಕಕ್ಕಾಗಿ ಸೆಣಸಾಡಲಿದ್ದಾರೆ.
ಇದನ್ನೂ ಓದಿರಿ: ಮಳೆ ತಂದಿಟ್ಟ ಆಪತ್ತು: ಮನೆ ಕುಸಿದು ಒಂದೇ ಕುಟುಂಬದ 7 ಮಂದಿ ಸಮಾಧಿ!
ಭಾರತ ಈಗಾಗಲೇ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ, ಬ್ಯಾಡ್ಮಿಂಟನ್ ಹಾಗೂ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದು, ಕುಸ್ತಿಯಲ್ಲಿ ಭಾರತದ ರವಿ ಕುಮಾರ್ ದಹಿಯಾ ಫೈನಲ್ಗೆ ಲಗ್ಗೆ ಹಾಕಿ ಭಾರತಕ್ಕೆ ಬೆಳ್ಳಿ ಖಚಿತಪಡಿಸಿದ್ದಾರೆ.