ETV Bharat / sports

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಹೈಜಂಪ್​ನಲ್ಲಿ ಬೆಳ್ಳಿ ಗೆದ್ದ ನಿಷಾದ್​ ಕುಮಾರ್​

ಭಾನುವಾರ ನಡೆದ ಪುರುಷರ ಹೈ ಜಂಪ್ ಟಿ46 ವಿಭಾಗದಲ್ಲಿ 2.06 ಮೀಟರ್​ ದೂರ ಜಿಗಿಯುವ ಮೂಲಕ ಏಷ್ಯಾದ ದಾಖಲೆಯೊಂದಿಗೆ ನಿಶಾದ್​ ಬೆಳ್ಳಿಪದಕ ಕೊರಳಿಗೇರಿಸಿಕೊಂಡರು.

Nishad Kumar wins silver in High Jump T47 at Tokyo
ನಿಷಾದ್​ ಕುಮಾರ್​ಗೆ ಬೆಳ್ಳಿ ಪದಕ
author img

By

Published : Aug 29, 2021, 5:44 PM IST

Updated : Aug 29, 2021, 5:51 PM IST

ಟೋಕಿಯೋ: ಭಾರತಕ್ಕೆ ಭಾನುವಾರ ಪ್ಯಾರಾಲಿಂಪಿಕ್ಸ್​ನಲ್ಲಿ ಶುಭದಿನವಾಗಿದೆ. ಬೆಳಿಗ್ಗೆ ಭಾವಿನಾಬೆನ್​ ಪಟೇಲ್​ ಟೇಬಲ್​ ಟೆನಿಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದರು. ಇದೀಗ ಹೈಜಂಪ್​ನಲ್ಲಿ ನಿಷಾದ್ ಕುಮಾರ್​ ದೇಶಕ್ಕೆ 2ನೇ ಬೆಳ್ಳಿಪದಕ ತಂದುಕೊಟ್ಟಿದ್ದಾರೆ.

ಭಾನುವಾರ ನಡೆದ ಪುರುಷರ ಹೈ ಜಂಪ್ ಟಿ46 ವಿಭಾಗದಲ್ಲಿ 2.06 ಮೀಟರ್​ ಜಿಗಿಯುವ ಮೂಲಕ ಏಷ್ಯಾದ ದಾಖಲೆಯೊಂದಿಗೆ ನಿಷಾದ್​ ಬೆಳ್ಳಿಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇದು ಹೈಜಂಪ್ ವಿಭಾಗದಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ದೊರೆತ 2ನೇ ಪದಕವಾಗಿದೆ. 2012ರಲ್ಲಿ ಕರ್ನಾಟಕದ ಗಿರೀಶ್​ ಲಂಡನ್​ ಒಲಿಂಪಿಕ್ಸ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಇದು ಆ ಕ್ರೀಡಾಕೂಟದಲ್ಲಿ ಭಾರತಕ್ಕೆ ಸಂದಿದ್ದ ಏಕೈಕ ಪದಕವಾಗಿತ್ತು.

​ಅಮೆರಿಕಾದ ರೋಡ್​ರಿಕ್​ ಟೌನ್​ಸೆಂಡ್​ ರಾಬರ್ಟ್ಸ್​ 2.15 ಮೀಟರ್​ ಜಿಗಿದು ಚಿನ್ನದ ಪದಕ ಪಡೆದರು. ಅಮೆರಿಕಾದ ಡೇವಿಡ್ ವೈಸ್​ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಭಾನುವಾರ ಬೆಳಿಗ್ಗೆ ಟೇಬಲ್​ ಟೆನಿಸ್​ನಲ್ಲಿ ಭಾವಿನಾಬೆನ್ ಪಟೇಲ್​ ಫೈನಲ್​ ಪಂದ್ಯದಲ್ಲಿ ಸೋಲು ಕಂಡರೂ ಭಾರತಕ್ಕೆ ಟೇಬಲ್​ ಟೆನಿಸ್​ನಲ್ಲಿ ಮೊದಲ ಪ್ಯಾರಾಲಿಂಪಿಕ್ಸ್ ಪದಕ ತಂದುಕೊಟ್ಟಿದ್ದರು.

Last Updated : Aug 29, 2021, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.