ಟೋಕಿಯೋ(ಜಪಾನ್): ಒಲಿಂಪಿಕ್ಸ್‌ನ ಟೇಬಲ್ ಟೆನ್ನಿಸ್ ಮಹಿಳಾ ಸಿಂಗಲ್ಸ್‌ನಲ್ಲಿ ಭರವಸೆ ಮೂಡಿಸಿದ್ದ ಭಾರತದ ತಾರಾ ಆಟಗಾರ್ತಿ ಮನಿಕಾ ಬಾತ್ರ 3ನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದರು. ಆಸ್ಟ್ರೇಲಿಯಾದ ಸೋಫಿಯಾ ಪೋಲ್ಕನೋವ ವಿರುದ್ಧ ಅವರು 4-0 (11-8, 11-2, 11-5, 11-7) ಅಂತರದ ನೇರ ಸೆಟ್‌ಗಳಿಂದ ನಿರಾಶೆ ಮೂಡಿಸಿದ್ದಾರೆ.
ಒಲಿಂಪಿಕ್ಸ್‌ನ ಟೇಬಲ್ ಟೆನ್ನಿಸ್‌ನಲ್ಲಿ 3ನೇ ಸುತ್ತಿಗೆ ಪ್ರವೇಶ ಪಡೆದಿದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಮನಿಕಾ ಬಾತ್ರ ಭಾಜನರಾಗಿದ್ದರು. ಬಾತ್ರ ಅವರು ಈ ಹಿಂದಿನ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟನ್ನ ಟಿನ್ ಟಿನ್ ಹೋ ಅವರನ್ನು 4-0ಯಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದರು.
26 ವರ್ಷದ ಟೇಬಲ್ ಟೆನ್ನಿಸ್ ತಾರೆ, ವಿಶ್ವ ಶ್ರೇಯಾಂಕದಲ್ಲಿ 63ನೇ ಸ್ಥಾನದಲ್ಲಿದ್ದಾರೆ. 2020ರಲ್ಲಿ ಇವರಿಗೆ ಭಾರತ ಸರ್ಕಾರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇದನ್ನೂ ಓದಿ: Olympics: ಸಿಂಗಲ್ಸ್ ಟೇಬಲ್ ಟೆನಿಸ್ನಲ್ಲಿ ಶುಭಾರಂಭ ಮಾಡಿದ ಸುತಿರ್ಥ, ಮನಿಕಾ
1995ರ ಜೂನ್ 15 ರಂದು ದೆಹಲಿಯಲ್ಲಿ ಜನಿಸಿದ್ದ ಮನಿಕಾ, 2018ರ ಕಾಮನಲ್‌ವೆಲ್ತ್ ಗೇಮ್‌ನ ಮಿಕ್ಸ್ಡ್ ಡಬಲ್ಸ್, ಮಹಿಳಾ ಡಬಲ್ಸ್, ಮಹಿಳಾ ಸಿಂಗಲ್ಸ್ ಹಾಗೂ 2018ರ ಏಷ್ಯನ್ ಗೇಮ್‌ನ ಮಿಕ್ಸ್ಡ್ ಡಬಲ್ಸ್‌ನಲ್ಲಿ ಭಾಗವಹಿಸಿದ್ದರು.