ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಸಾಧಕರಿಗೆ ಈಗಾಗಲೇ ಆಯಾ ರಾಜ್ಯಗಳು ಭರ್ಜರಿ ಉಡುಗೊರೆ ನೀಡಿದ್ದು, ಇದರ ಮಧ್ಯೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಬಹುಮಾನ ಘೋಷಣೆ ಮಾಡಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಟ್ಟು ಏಳು ಪದಕ ಗೆದ್ದಿದ್ದು, ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ ಸಾಧನೆ ಮಾಡಿದ್ದಾರೆ. ಉಳಿದಂತೆ ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು ದೇಶದ ಪಾಲಾಗಿವೆ. ಇದೀಗ ಬಿಸಿಸಿಐ ನಗದು ಬಹುಮಾನ ಪ್ರಕಟಿಸಿ, ಟ್ವೀಟ್ ಮಾಡಿದೆ.
-
INR 1 Cr. - 🥇 medallist @Neeraj_chopra1
— Jay Shah (@JayShah) August 7, 2021 " class="align-text-top noRightClick twitterSection" data="
50 lakh each - 🥈 medallists @mirabai_chanu & Ravi Kumar Dahiya
25 lakh each – 🥉 medallists @Pvsindhu1, @LovlinaBorgohai, @BajrangPunia
INR 1.25 Cr. – @TheHockeyIndia men's team @SGanguly99| @ThakurArunS| @ShuklaRajiv
">INR 1 Cr. - 🥇 medallist @Neeraj_chopra1
— Jay Shah (@JayShah) August 7, 2021
50 lakh each - 🥈 medallists @mirabai_chanu & Ravi Kumar Dahiya
25 lakh each – 🥉 medallists @Pvsindhu1, @LovlinaBorgohai, @BajrangPunia
INR 1.25 Cr. – @TheHockeyIndia men's team @SGanguly99| @ThakurArunS| @ShuklaRajivINR 1 Cr. - 🥇 medallist @Neeraj_chopra1
— Jay Shah (@JayShah) August 7, 2021
50 lakh each - 🥈 medallists @mirabai_chanu & Ravi Kumar Dahiya
25 lakh each – 🥉 medallists @Pvsindhu1, @LovlinaBorgohai, @BajrangPunia
INR 1.25 Cr. – @TheHockeyIndia men's team @SGanguly99| @ThakurArunS| @ShuklaRajiv
ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಬಿಸಿಸಿಐ 1 ಕೋಟಿ ರೂ. ನಗದು ನೀಡಿದ್ದು, ಉಳಿದಂತೆ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚನು ಹಾಗೂ ರವಿ ಕುಮಾರ್ ದಹಿಯಾಗೆ ತಲಾ 50 ಲಕ್ಷ ರೂ. ಹಾಗೂ ಕಂಚಿನ ಪದಕ ಗೆದ್ದಿರುವ ಪಿ.ವಿ. ಸಿಂಧು, ಲವ್ಲಿನಾ ಹಾಗೂ ಬಜರಂಗ್ ಪೂನಿಯಾಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ಕಂಚಿನ ಪದಕ ಗೆದ್ದಿರುವ ಭಾರತದ ಪುರುಷರ ಹಾಕಿ ತಂಡಕ್ಕೂ ಬಿಸಿಸಿಐ ಬಹುಮಾನ ನೀಡಿದ್ದು, ಒಟ್ಟಿಗೆ 1ಕೋಟಿ 25 ಲಕ್ಷ ರೂ. ನೀಡುವುದಾಗಿ ಹೇಳಿದೆ. ಉಳಿದಂತೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಆನಂದ್ ಮಹೀಂದ್ರಾ XUV 700 ಕಾರು ಗಿಪ್ಟ್ ಘೋಷಿಸಿದೆ.
ಇದನ್ನೂ ಓದಿರಿ: ಪಾಣಿಪತ್ to ಟೋಕಿಯೋ.. ಚಿನ್ನದ ಪದಕ ಗೆದ್ದ ರೈತನ ಮಗನ ಸಾಧನೆಯ ಹಾದಿ ಹೀಗಿತ್ತು!
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಟ್ಟು 7 ಪದಕ ಗೆದ್ದಿದ್ದು, ಈ ಹಿಂದೆ 2012ರಲ್ಲಿ ನಿರ್ಮಾಣಗೊಂಡಿದ್ದ ಸಾಧನೆ ಬ್ರೇಕ್ ಮಾಡಿದೆ.
ಮಣಿಪುರ ಸರ್ಕಾರದಿಂದ 1 ಕೋಟಿ ರೂ. ನಗದು
ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಮಣಿಪುರ ಸರ್ಕಾರ 1 ಕೋಟಿ ರೂ. ನಗದು ಬಹುಮಾನ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಬಿರೇನ್ ಸಿಂಗ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಭಾರತೀಯ ಒಲಿಂಪಿಕ್ಸ್ ಸಮಿತಿ 75 ಲಕ್ಷ ರೂ. ನಗದು ನೀಡಿದೆ.
ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
-
#WATCH | During a phone call, PM Narendra Modi congratulates javelin thrower Neeraj Chopra who won #Gold medal at #TokyoOlympics today pic.twitter.com/rGwiTJmx4U
— ANI (@ANI) August 7, 2021 " class="align-text-top noRightClick twitterSection" data="
">#WATCH | During a phone call, PM Narendra Modi congratulates javelin thrower Neeraj Chopra who won #Gold medal at #TokyoOlympics today pic.twitter.com/rGwiTJmx4U
— ANI (@ANI) August 7, 2021#WATCH | During a phone call, PM Narendra Modi congratulates javelin thrower Neeraj Chopra who won #Gold medal at #TokyoOlympics today pic.twitter.com/rGwiTJmx4U
— ANI (@ANI) August 7, 2021
ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.