ಮೆಲ್ಬೋರ್ನ್: ಮಾಜಿ ವಿಶ್ವಚಾಂಪಿಯನ್ ವೀನಸ್ ವಿಲಿಯಮ್ಸ್ ಪಾದದ ನೋವಿಗೆ ಒಳಗಾಗಿ ಆಸ್ಟ್ರೇಲಿಯನ್ ಓಪನ್ 2ನೇ ಸುತ್ತಿನ ಪಂದ್ಯದಲ್ಲೇ ಸಾರಾ ಇರಾನಿ ವಿರುದ್ಧ 6-1,6-0 ಅಂತರದಲ್ಲಿ ಸೋಲು ಕಂಡು ನಿರ್ಗಮಿಸಿದ್ದಾರೆ.
7 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದಿರುವ ಅಮೆರಿಕಾದ ಆಟಗಾರ್ತಿ ಮೊದಲ ಸುತ್ತಿನಲ್ಲಿ 1-5ರಲ್ಲಿ ಹಿನ್ನಡೆ ಅನುಭವಿಸಿದ್ದ ವೇಳೆ ಪಾದದ ನೋವಿಗೆ ತುತ್ತಾದರು. ಪಾದದ ಚಿಕಿತ್ಸೆಯನ್ನು ಪಡೆಯುವ ಮೊದಲು ಕಣ್ಣೀರಿಡುತ್ತಲೇ ಆಡಿದ್ದ ವೀನಸ್ಗೆ ನಂತರ ಮೊಣಕಾಲು ನೋವು ಕೂಡ ಅವರನ್ನು ಬಾಧಿಸಿತು.
ಆದರೂ ಪಂದ್ಯದಿಂದ ಹಿಂದೆ ಸರಿಯದೇ ಚಿಕಿತ್ಸೆ ಪಡೆದು ಆಡಿದರಾದರೂ, ಇಟಲಿಯ ಸಾರಾ ಇರಾನಿಗೆ ಯಾವುದೇ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಇರಾನಿ ಎರಡೂ ಸೆಟ್ಗಳಲ್ಲಿ ಪ್ರಾಬಲ್ಯ ಸಾಧಿಸಿ ಮೂರನೇ ಸುತ್ತಿಗೆ ತೇರ್ಗಡೆ ಹೊಂದಿದರು.
ಆಸ್ಟ್ರೇಲಿಯನ್ ಓಪನ್ನಲ್ಲಿ 40 ವರ್ಷದ ವೀನಸ್ ಅತ್ಯಂತ ಹಿರಿಯ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಇದು ಅವರ 21 ಟೂರ್ನಿಯಾಗಿದ್ದು, ಅತಿ ಹೆಚ್ಚು ಬಾರಿ ಮೆಲ್ಬೋರ್ನ್ನಲ್ಲಿ ಆಡಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಜೊತೆಗೆ ಇದು ಅವರ 88ನೇ ಗ್ರ್ಯಾಂಡ್ಸ್ಲಾಮ್ನಲ್ಲಿ ಭಾಗವಹಿಸಿದಂತಾಗಿದೆ. ಓಪನ್ ಎರಾದಲ್ಲಿ ಮಹಿಳೆಯರ ಪಾಲಿನ ಗರಿಷ್ಠ ಬಾರಿ ಕಾಣಿಸಿಕೊಂಡ ಪ್ಲೇಯರ್ ಎನಿಸಿಕೊಂಡಿದ್ದಾರೆ.
ಇದನ್ನು ಓದಿಆಸ್ಟ್ರೇಲಿಯನ್ ಓಪನ್.. ಟಿಯಾಫೋ ಮಣಿಸಿ 3ನೇ ಸುತ್ತು ಪ್ರವೇಶಿಸಿದ ಜೋಕೊವಿಕ್..