ನ್ಯೂಯಾರ್ಕ್: ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಅಮೆರಿಕಾದ ಪ್ರಬಲ ಸೆರೆನಾ ವಿಲಿಯಮ್ಸ್ ಎದುರು ಕೆನಡಾದ ಹದಿಹರೆಯದ 19 ವರ್ಷದ ಚೆಲುವೆ ಬಿಯಾಂಕಾ ಆಂಡ್ರಿಸ್ಕು ಕಣಕ್ಕಿಳಿದು ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಮೊದಲ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
-
Sealed with a kiss 😘🏆@Bandreescu_ | #USOpen | #WomenWorthWatching pic.twitter.com/XNAq0ZkqD5
— US Open Tennis (@usopen) September 7, 2019 " class="align-text-top noRightClick twitterSection" data="
">Sealed with a kiss 😘🏆@Bandreescu_ | #USOpen | #WomenWorthWatching pic.twitter.com/XNAq0ZkqD5
— US Open Tennis (@usopen) September 7, 2019Sealed with a kiss 😘🏆@Bandreescu_ | #USOpen | #WomenWorthWatching pic.twitter.com/XNAq0ZkqD5
— US Open Tennis (@usopen) September 7, 2019
ಫೈನಲ್ ಪಂದ್ಯದಲ್ಲಿ ವಿಲಿಯಮ್ಸ್ ವಿರುದ್ಧ 6-3, 7-5 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿ ಚೊಚ್ಚಲ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಸಹ ಸೆರೆನಾ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದರು.
-
Teen queen 💋#USOpen | #WomenWorthWatching pic.twitter.com/yKyucG6AtE
— US Open Tennis (@usopen) September 7, 2019 " class="align-text-top noRightClick twitterSection" data="
">Teen queen 💋#USOpen | #WomenWorthWatching pic.twitter.com/yKyucG6AtE
— US Open Tennis (@usopen) September 7, 2019Teen queen 💋#USOpen | #WomenWorthWatching pic.twitter.com/yKyucG6AtE
— US Open Tennis (@usopen) September 7, 2019
19ರ ಹರೆಯದ ಬಿಯಾಂಕಾ ಸೆಮಿಫೈನಲ್ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿ ಬೆನ್ಸಿಕ್ ಅವರನ್ನು 7-6 (7/3), 7-5ರ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶ ಪಡೆದುಕೊಂಡಿದ್ದರೆ, 37ರ ಹರೆಯದ ಸೆರೆನಾ,ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ವಿರುದ್ಧ 6-3, 6-1ರ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ್ದರು.