ನವದೆಹಲಿ: ಸ್ವಿಟ್ಜರ್ಲೆಂಡ್ನ ಟೆನಿಸ್ ತಾರೆ ರೋಜರ್ ಫೆಡರರ್ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. ಗಾಯದ ಕಾರಣ ತಾವೂ ಮಹಾ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ಮಂಗಳವಾರ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಫೆಡರರ್, ಗ್ರಾಸ್ ಆವೃತ್ತಿಯಲ್ಲಿ ಆಡುವಾಗ ದುರಾದೃಷ್ಟವಶಾತ್ ಮಂಡಿ ನೋವು ಮತ್ತೆ ಕಾಣಿಸಿಕೊಂಡಿದೆ. ಹಾಗಾಗಿ ನಾನು ಟೋಕಿಯೋ ಒಲಿಂಪಿಕ್ ಗೇಮ್ನಿಂದ ಅನಿವಾರ್ಯವಾಗಿ ಹಿಂದಿ ಸರಿಯಲು ಒಪ್ಪಿಕೊಳ್ಳಬೇಕಿದೆ ಎಂದು ಬರೆದುಕೊಂಡಿದ್ದಾರೆ.
- — Roger Federer (@rogerfederer) July 13, 2021 " class="align-text-top noRightClick twitterSection" data="
— Roger Federer (@rogerfederer) July 13, 2021
">— Roger Federer (@rogerfederer) July 13, 2021
20 ಗ್ರ್ಯಾಂಡ್ ಸ್ಲಾಮ್ ವಿಜೇತ ಹಲವು ಮಂಡಿ ಶಸ್ತ್ರಚಿಕಿತ್ಸೆಯ ನಂತರ 2020ರ ಆವೃತ್ತಿಯನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡಿದ್ದರು. ದೋಹಾ ಓಪನ್ ಮೂಲಕ ಟೆನಿಸ್ಗೆ ಮರಳಿದರಾದರೂ ಎರಡನೇ ಸುತ್ತಿನಲ್ಲಿ ಸೋಲು ಕಂಡು ಹೊರಬಿದ್ದಿದ್ದರು. ನಂತರ ಜೆನಿವಾ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ಹೊರಬಂದರೆ, ಫ್ರೆಂಚ್ ಓಪನ್ನಲ್ಲಿ ಮೂರು ಸುತ್ತಿನ ಗೆಲುವಿನ ಬಳಿಕ ವಿಂಬಲ್ಡನ್ನಲ್ಲಿ ಆಡವುದಕ್ಕಾಗಿ ತಾವೂ ಕ್ಲೇ ಕೋರ್ಟ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು.
39 ವರ್ಷದ ಸ್ವಿಸ್ ಸ್ಟಾರ್ ವಿಂಬಲ್ಡನ್ ಕ್ವಾರ್ಟರ್ ಫೈನಲ್ನಲ್ಲಿ ಪೋಲೆಂಡ್ನ ಹ್ಯೂಬರ್ಟ್ ಹರ್ಕಜ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದ್ದರು.
ಇನ್ನು ಇದಕ್ಕೂ ಮೊದಲು ಸ್ಪೇನ್ನ ರಾಫೆಲ್ ನಡಾಲ್ ಕೂಡ ವೈಯಕ್ತಿಕ ಕಾರಣ ನೀಡಿ ಟೋಕಿಯೋದಿಂದ ಹಿಂದೆ ಸರಿದರೆ, ಮಹಿಲಾ ಲೆಜೆಂಡ್ ಸೆರೆನಾ ವಿಲಿಯಮ್ಸ್ ಯಾವುದೇ ನಿರ್ದಿಷ್ಟ ಕಾರಣ ಹೇಳದೆ ಒಲಿಂಪಿಕ್ಸ್ ಗೇಮ್ಸ್ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ - ವಿಂಬಲ್ಡನ್ ಚಾಂಪಿಯನ್ಶಿಪ್ ಆಡದಿರಲು ರಾಫೆಲ್ ನಡಾಲ್ ನಿರ್ಧಾರ