ಮೆಲ್ಬೋರ್ನ್: ಭಾರತದ ಸ್ಟಾರ್ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಆಸ್ಟ್ರೇಲಿಯಾ ಓಪನ್ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
46 ವರ್ಷ ವಯಸ್ಸಿನಲ್ಲಿ ಉಮ್ಮಸ್ಸು ಕಳೆದುಕೊಳ್ಳದ ಪೇಸ್ ಲತ್ವಿಯಾದ ಜಲೇನಾ ಒಸ್ತಾಪೆಂಕೊ ಜೊತೆಗೂಡಿ ಮೊದಲ ಸುತ್ತಿನ ಪಂದ್ಯದಲ್ಲಿ ಅತಿಥೇಯ ರಾಷ್ಟ್ರದ ಸ್ಟಾರ್ಮ್ ಸ್ಯಾಂಡರ್ಸ್ ಮತ್ತು ಮಾರ್ಕ್ ಪೊಲ್ಮಾನ್ಸ್ ವಿರುದ್ಧ 6-7,6-3,10-6ರಲ್ಲಿ ಅಂತರದಲ್ಲಿ ಗೆದ್ದು ಬೀಗಿದರು.
18 ಡಬಲ್ಸ್ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಜಯಸಿರುವ ಲಿಯಾಂಡರ್ ಪೇಸ್ ಮೊದಲ ಸೆಟ್ನಲ್ಲಿ ಕಹಿ ಅನುಭವಿಸಿದರೂ ಮುಂದಿನ ಎರಡು ಸೆಟ್ಗಳ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿ ಎರಡನೇ ಸುತ್ತಿಗೆ ಪ್ರವೇಶ ಪಡೆದರು.
ಇನ್ನು ಭಾರತದ ಮತ್ತೊಬ್ಬ ಆಟಗಾರ ರೋಹನ್ ಬೋಪಣ್ಣ ಕೂಡ ಮಿಕ್ಸಡ್ ಡಬಲ್ಸ್ನಲ್ಲಿ ನಾಡಿಯಾ ಕಿಚೆನೊಕ್ ಜೊತೆಗೂಡಿ ಎರಡನೇ ಸುತ್ತಿನ ಪಂದ್ಯದಲ್ಲಿ ನಿಕೋಲ್ ಮೆಲಿಕರ್ ಮತ್ತು ಬ್ರೂನೊ ಸೊವಾರೆಸ್ ಜೋಡಿಯನ್ನು 6-4, 7-6)4)ರಲ್ಲಿ ಅಂತರದಲ್ಲಿ ಮಣಿಸಿ ತೃತೀಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.