ETV Bharat / sports

17ನೇ ಗ್ರ್ಯಾಂಡ್​ಸ್ಲಾಮ್​ ಗೆದ್ಮೇಲೆ ಮತ್ತೆ ಮೊದಲ ರ್‍ಯಾಂಕ್​ಗೇರಿದ ಜೊಕೊವಿಕ್​..

ಕಳೆದ ವಾರ ಮುಕ್ತಾಯವಾದ ಆಸ್ಟ್ರೇಲಿಯಾ ಓಪನ್​ನಲ್ಲಿ ಆಸ್ಟ್ರೀಯಾದ ಡೊಮಿನಿಕ್​ ಥೀಮ್​ ಅವರನ್ನು ಮಣಿಸಿ ತಮ್ಮ 8ನೇ ಆಸ್ಟ್ರೇಲಿಯನ್ ಓಪನ್​ ಹಾಗೂ 17 ನೇ ಗ್ರ್ಯಾಂಡ್​ಸ್ಲಾಮ್​ ಗೆದ್ದುಕೊಂಡಿದ್ದ ಜೊಕೊವಿಕ್​ ಇದೀಗ 3 ತಿಂಗಳ ಬಳಿಕ ಮತ್ತೆ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ನೊವಾಕ್​   ಜೊಕೊವಿಕ್​
ನೊವಾಕ್​ ಜೊಕೊವಿಕ್​
author img

By

Published : Feb 3, 2020, 3:58 PM IST

ಲಂಡನ್​: 8ನೇ ಬಾರಿ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಗೆದ್ದ ಸರ್ಬಿಯಾದ ನೊವಾಕ್​ ಜೊಕೊವಿಕ್​ 3 ತಿಂಗಳ ಬಳಿಕ ಮತ್ತೆ ನಂಬರ ಒನ್​ ಸ್ಥಾನಕ್ಕೇರಿದ್ದಾರೆ.

ಜೊಕೊವಿಕ್​ ಕಳೆದ ವಾರ ಮುಕ್ತಾಯವಾದ ಆಸ್ಟ್ರೇಲಿಯಾ ಓಪನ್​ನಲ್ಲಿ ಆಸ್ಟ್ರೀಯಾದ ಡೊಮಿನಿಕ್​ ಥೀಮ್​ ಅವರನ್ನು ಮಣಿಸಿ ತಮ್ಮ 8 ನೇ ಆಸ್ಟ್ರೇಲಿಯನ್ ಓಪನ್​ ಹಾಗೂ 17ನೇ ಗ್ರ್ಯಾಂಡ್​ಸ್ಲಾಮ್​ ಗೆದ್ದುಕೊಂಡಿದ್ದರು. ಇದೀಗ 3 ತಿಂಗಳ ಬಳಿಕ ಮತ್ತೆ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಜೊಕೊವಿಕ್​ ಕಳೆದ 10 ಸೀಸನ್​ಗಳಲ್ಲಿ (2011-16, 2018-2-) 9 ಆವೃತ್ತಿಗಳಲ್ಲಿ ಮೊದಲ ಸ್ಥಾನದಲ್ಲೇ ಇದ್ದಂತಾಗಿದೆ. ಈ ಮೂಲಕ ವೃತ್ತಿ ಜೀವನದಲ್ಲಿ 276ನೇ ವಾರ ನಂಬರ್​ ಒನ್ ಆಟಗಾರನಾಗಿರಲಿದ್ದಾರೆ. ಸ್ವಿಟ್ಜರ್​ಲೆಂಡ್​ನ ರೋಜರ್​ ಫೆಡರರ್​ 310 ವಾರಗಳ ಕಾಲ ನಂಬರ 1ನೇ ಶ್ರೇಯಾಂಕದಲ್ಲಿ ಕಳೆದಿರುವ ದಾಖಲೆ ಹೊಂದಿದ್ದಾರೆ.

ಜೊಕೊವಿಕ್​ 2011ರಲ್ಲಿ ಜೂನ್​ 24 ರಂದು ಮೊದಲ ಬಾರಿಗೆ ನಂಬರ್​​ 1 ರ್‍ಯಾಂಕ್ ಪಡೆದಿದ್ದರು. ನಂತರ 2012ರಲ್ಲಿ 54 ವಾರಗಳು, 2013ರಲ್ಲಿ 48 ವಾರಗಳು, 2014-2016ರವರೆಗೆ ಬರೋಬ್ಬರಿ 122 ವಾರಗಳು, 2018-19ರಲ್ಲಿ 52 ವಾರಗಳ ಕಾಳ ನಂಬರ್​ 1 ಆಟಗಾರನಾಗಿದ್ದಾರೆ. ಕಳೆದ ನವೆಂಬರ್​ನಲ್ಲಿ ನಡಾಲ್​ ಜೊಕೊವಿಕ್​ ಹಿಂದಿಕ್ಕಿ ನಂಬರ್​ ಒನ್​ ಸ್ಥಾನ ಪಡೆದಿದ್ದರು. ಇದೀಗ ಆಸ್ಟ್ರೇಲಿಯಾ ಓಪನ್ ಚಾಂಪಿಯನ್​ ಆಗುವ ಮೂಲಕ ಟೆನ್ನಿಸ್​ನಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.