ಭಾನುವಾರ ನಡೆದ ಯುಎಸ್ ಓಪನ್ ಟೆನ್ನಿಸ್ ಫೈನಲ್ ಪಂದ್ಯದಲ್ಲಿ ನೋವಾಕ್ ಜೊಕೊವಿಕ್ ಆಘಾತಕಾರಿ ಸೋಲು ಅನುಭವಿಸಿದ್ದರು. ಈ ಪಂದ್ಯದಲ್ಲಿ ನೋವಾಕ್ ಅವರು ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 6-4, 6-4, 6-4 ನೇರ ಸೆಟ್ಗಳಿಂದ ಸೊಲೋಪ್ಪಿಕೊಂಡಿದ್ದರು.
-
MOOD 😞 #USOpen #Novak #Djokovic #Medvedev #usopenespn pic.twitter.com/3BlHfktqvb
— Freaknoise! (@Freaknoisemusic) September 12, 2021 " class="align-text-top noRightClick twitterSection" data="
">MOOD 😞 #USOpen #Novak #Djokovic #Medvedev #usopenespn pic.twitter.com/3BlHfktqvb
— Freaknoise! (@Freaknoisemusic) September 12, 2021MOOD 😞 #USOpen #Novak #Djokovic #Medvedev #usopenespn pic.twitter.com/3BlHfktqvb
— Freaknoise! (@Freaknoisemusic) September 12, 2021
ಈ ಪಂದ್ಯದ ಕೊನೆಯ ಪಾಯಿಂಟ್ ಕಳೆದುಕೊಂಡಾಗ ಅವರು ತಮ್ಮ ಸಹನೆ ಕಳೆದುಕೊಂಡಿದ್ದು, ಸಿಟ್ಟಿನಲ್ಲಿ ರಾಕೆಟ್ ಅನ್ನು ನೆಲಕ್ಕೆ ಹೊಡೆದು ಮುರಿದು ಹಾಕಿದರು. ಪಂದ್ಯದ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ತಮ್ಮಿಂದಾದ ಪ್ರಮಾದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳುವುದಾಗಿ ತಿಳಿಸಿದರು.
ಡ್ಯಾನಿಲ್ ಮೆಡ್ವೆಡೆವ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಅಮೆರಿಕನ್ ಒಪನ್ ಟೆನ್ನಿಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಮೆಡ್ವೆಡೆವ್ ಆಶ್ಚರ್ಯಕರ ರೀತಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಜೊಕೊವಿಕ್ ಅವರನ್ನು ಮಣಿಸಿದ್ದು, ವಿಶ್ವದ ನಂಬರ್ ಒನ್ ಆಟಗಾರನ 21 ಗ್ರ್ಯಾಂಡ್ ಸ್ಲಾಮ್ ಗೆಲುವಿನ ಆಸೆಗೆ ತಣ್ಣೀರೆರಚಿದ್ದಾರೆ.
ಈಗಾಗಲೇ ಟೆನಿಸ್ ದಿಗ್ಗಜರಾದ ಫೆಡರರ್ ಹಾಗೂ ನಡಾಲ್ ತಲಾ 20 ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಜೊಕೊವಿಕ್ ಜತೆ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ.