ಬರ್ಲಿನ್: ವಿವಾದಾತ್ಮಕವಾಗಿ ಫ್ರೆಂಚ್ ಓಪನ್ನಿಂದ ಹೊರಬಂದಿದ್ದ ಜಪಾನ್ ಸ್ಟಾರ್ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಮುಂಬರುವ ಬರ್ಲಿನ್ ಓಪನ್ನಿಂದಲೂ ಹೊರಬಂದಿದ್ದಾರೆ.
ಫ್ರೆಂಚ್ ಓಪನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದ ನಂತರ ಆಯೋಜಕರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ದಿಕ್ಕರಿಸಿದ್ದರು. ಈ ತಪ್ಪಿಗಾಗಿ ಆಯೋಜಕರು 15 ಸಾವಿರ ಯುಎಸ್ ಡಾಲರ್ ಮೊತ್ತದ ದಂಡವನ್ನು ವಿಧಿಸಿ ಮುಂದೆ ಇಂತಹ ತಪ್ಪುಗಳನ್ನು ಮಾಡದಿರುವಂತೆ ಎಚ್ಚರಿಸಿದ್ದರು.
ಆದರೆ, ವಿಶ್ವದ ನಂಬರ್ 2 ಆಟಗಾರ್ತಿ ಬರ್ಲಿನ್ ಓಪನ್ ಟೂರ್ನಿಯಿಂದಲೂ ಹಿಂದೆ ಸರಿದಿದ್ದಾರೆ. ಆಯೋಜಕರು ಈ ಸಂಗತಿಯನ್ನು ಖಾತರಿಪಡಿಸಿದ್ದಾರೆ. ಇದಲ್ಲದೇ ವಿಂಬಲ್ಡನ್ ಓಪನ್ನಿಂದಲೂ ಹೊರಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
"ನಾವು ಒಸಾಕ ಅವರು ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಹಿತಿಯನ್ನು ಪಡೆದಿದ್ದೇವೆ. ಅವರು ತಮ್ಮ ಮ್ಯಾನೇಜ್ಮೆಂಟ್ನೊಡನೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಬರ್ಲಿನ್ ಓಪನ್ ವಕ್ತಾರರೊಬ್ಬರು ತಿಳಿಸಿದ್ದಾರೆ.