ರೋಮ್ : ವಿಶ್ವದ 2ನೇ ಶ್ರೇಯಾಂಕದ ಟೆನಿಸ್ ಆಟಗಾರ ರಾಫೆಲ್ ನಡಾಲ್ ಶನಿವಾರ ನಡೆದ ಇಟಾಲಿಯನ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕಾದ ರೀಲಿ ಒಪೆಲ್ಕಾ ವಿರುದ್ಧ ಸುಲಭ ಜಯ ಸಾಧಿಸಿ 12ನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 20 ಗ್ರ್ಯಾಂಡ್ ಸ್ಲಾಮ್ ಒಡೆಯ, ಒಪೆಲ್ಕಾ ವಿರುದ್ಧ 6-4, 6-4ರ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಇದು ಅವರ ಪಾಲಿನ 12ನೇ ಸೆಮಿಫೈನಲ್ ಆಗಿದ್ದು, 9 ಬಾರಿ ಚಾಂಪಿಯನ್ ಆಗಿದ್ದಾರೆ.
ನಡಾಲ್ ಕೇವಲ ಒಂದು ಜಯ ಸಾಧಿಸಿದರೆ 36ನೇ ಬಾರಿ ಎಟಿಪಿ ಮಾಸ್ಟರ್ಸ್ 1000 ಪಂದ್ಯ ಗೆದ್ದ ದಾಖಲೆಗೆ ಪಾತ್ರರಾಗಲಿದ್ದಾರೆ. ಅಲ್ಲದೇ 4ನೇ ಬಾರಿ ಪ್ರಮುಖ ಟೂರ್ನಿಗಳನ್ನು 10ಕ್ಕೂ ಹೆಚ್ಚು ಬಾರಿ ಗೆದ್ದ ದಾಖಲೆ ಕೂಡ ಅವರ ಹೆಸರಿಗೆ ಸೇರಲಿದೆ.
ಈಗಾಗಲೇ ಸ್ಪೇನಿನ ಸ್ಟಾರ್ ಪ್ಲೇಯರ್ ಈಗಾಗಲೇ 13 ಫ್ರೆಂಚ್ ಓಪನ್, 12 ಬಾರಿ ಬಾರ್ಸಿಲೋನಾ ಟ್ರೋಫಿ ಮತ್ತು 11 ಬಾರಿ ಮಾಂಟೆ ಕಾರ್ಲೊ ಟ್ರೋಫಿ ಜಯಿಸಿದ್ದಾರೆ. ಈ ಗೆಲುವಿನೊಂದಿಗೆ ಮಣ್ಣಿನ ಅಂಕಣದಲ್ಲಿ 500ನೇ ಪಂದ್ಯವನ್ನಾಡಿದ ಮೈಲಿಗಲ್ಲಿಗೂ ನಡಾಲ್ ಪಾತ್ರರಾದರು.
ಮಣ್ಣಿನ ಅಂಕಣದ ದೊರೆ ಎಂದೇ ಕರೆಸಿಕಕೊಳ್ಳುವ ಅವರು 458 ಗೆಲುವು 42 ಸೋಲು ಕಂಡಿದ್ದಾರೆ. ಇವರ ಯಶಸ್ಸಿನ ದರ 91.6 ಇದ್ದರೆ, 2ನೇ ಸ್ಥಾನದಲ್ಲಿರುವ ಗಿಲ್ಲೆರ್ಮೊ ವಿಲಾಸ್ 79.7 (681-173)2ನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಮೊದಲ ಶ್ರೇಯಾಂಕದ ನೊವಾಕ್ ಜೋಕೊವಿಕ್ ಕೂಡ ಶನಿವಾರ ಗ್ರೀಕ್ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು 4-6, 7-5, 7-5 ಸೆಟ್ಗಳಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇವರು ನಾಳೆ ಇಟಲಿಯ ಲೊರೆಂಜೊ ಸೋನೆ ಅವರನ್ನು ಎದುರಿಸಲಿದ್ದಾರೆ.
ಇದನ್ನು ಓದಿ: ಇಟಾಲಿಯನ್ ಓಪನ್: ಸೆಮಿಗೆ ಎಂಟ್ರಿಕೊಟ್ಟ ಜೋಕೊವಿಕ್ಗೆ ಪೈನಲ್ನಲ್ಲಿ ನಡಾಲ್ ಎದುರಾಳಿ?