ಪ್ಯಾರೀಸ್: ವಿಶ್ವ ಟೆನ್ನಿಸ್ನ ಅಗ್ರ ಶ್ರೇಯಾಂಕದ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ನ 2 ನೇ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಪಡೆದು ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮೊದಲ ಶ್ರೇಯಾಂಕದ ಸರ್ಬಿಯನ್ ಆಟಗಾರ ಗುರುವಾರ ಲಿತುವೇನಿಯಾದ ರಿಕಾರ್ಡಸ್ ಬೆರಂಕಿಸ್ ವಿರುದ್ಧ 6-1,6-2, 6-3, 6-2 ಸೆಟ್ಗಳ ಅಂತರದಲ್ಲಿ ಮಣಿಸಿದರು.
ಫಿಲಿಪ್ ಚಾಟ್ರಿಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಲವು ನಿಬಂಧನೆಗಳೊಡನೆ 33 ವರ್ಷದೊಳಗಿನ ವೀಕ್ಷಕರಿಗೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
-
7⃣0⃣ career wins at RG 🥳@DjokerNole races past Berankis 6-1 6-2 6-2 to advance to the third round in a tidy 1 hour and 23 minutes.#RolandGarros pic.twitter.com/NW679IlnAx
— Roland-Garros (@rolandgarros) October 1, 2020 " class="align-text-top noRightClick twitterSection" data="
">7⃣0⃣ career wins at RG 🥳@DjokerNole races past Berankis 6-1 6-2 6-2 to advance to the third round in a tidy 1 hour and 23 minutes.#RolandGarros pic.twitter.com/NW679IlnAx
— Roland-Garros (@rolandgarros) October 1, 20207⃣0⃣ career wins at RG 🥳@DjokerNole races past Berankis 6-1 6-2 6-2 to advance to the third round in a tidy 1 hour and 23 minutes.#RolandGarros pic.twitter.com/NW679IlnAx
— Roland-Garros (@rolandgarros) October 1, 2020
ಜೋಕೊವಿಕ್ ಮೊದಲ ಸೆಟ್ ಅನ್ನು ಕೇವಲ 22 ನಿಮಿಷಗಳಲ್ಲಿ ಗೆದ್ದುಕೊಂಡರು. ನಂತರ ಎರಡನೇ ಸೆಟ್ನಲ್ಲಿ ಸ್ವಲ್ಪ ಪ್ರತಿರೋಧ ಎದುರಿಸಿ ಗೆದ್ದರು. ಕೊನೆಯ ಸೆಟ್ನಲ್ಲಿ ಬೆರಂಕಿಸ್ ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಬಂದು ಆಡಿದರೂ ಪರಿಣಾಮಕಾರಿ ಎನಿಸಲಿಲ್ಲ. ಈ ಪಂದ್ಯ 83 ನಿಮಿಷಗಳಲ್ಲಿ ಅಂತ್ಯಗೊಂಡಿತು.
ಇನ್ನು 2ನೇ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಜೋಕೊವಿಕ್, ಈ ಮೂಲಕ ತಮ್ಮ 18 ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿಯುವ ಹಂಬಲದಲ್ಲಿದ್ದಾರೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಅವರು 2 ಸುತ್ತುಗಳಲ್ಲಿ ಎದುರಾಳಿಗೆ ಕೇವಲ 10 ಗೇಮ್ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.
ಫ್ರೆಂಚ್ ಓಪನ್ನಲ್ಲಿ 70 ನೇ ಗೆಲುವು ಸಾಧಿಸಿರುವ ಜೋಕೊವಿಕ್, ಮುಂದಿನ ಸುತ್ತಿನಲ್ಲಿ ಕೊಲಂಬಿಯಾದ ಡೇನಿಯಲ್ ಇಲಾಹಿ ಗ್ಯಾಲನ್ ವಿರುದ್ಧ ಸೆಣಸಾಡಲಿದ್ದಾರೆ.