ಇಂಡಿಯನ್ ವೆಲ್ಸ್ : ವಿಶ್ವ ಶ್ರೇಯಾಂಕದಲ್ಲಿ 26ನೇ ಸ್ಥಾನದಲ್ಲಿರುವ ಗ್ರೇಟ್ ಬ್ರಿಟನ್ನ ಕ್ಯಾಮರಾನ್ ನೋರಿ ಬಿಎನ್ಬಿ ಪಾರಿಬಸ್ ಮಾಸ್ಟರ್ಸ್(ಇಂಡಿಯನ್ ವೆಲ್ಸ್) ಫೈನಲ್ ಪಂದ್ಯದಲ್ಲಿ ಜಾರ್ಜಿಯಾದ ನಿಕೊಲೋಸ್ ಬಸಿಲಾಶ್ವಿಲಿ ವಿರುದ್ಧ ಗೆಲುವು ಸಾಧಿಸುವ ಮೂಲಕ 2010ರ ಬಳಿಕ ಅಗ್ರ 25 ಶ್ರೇಯಾಂಕದ ಆಟಗಾರರನ್ನು ಹೊರತು ಪಡಿಸಿ ಈ ಪ್ರಶಸ್ತಿ ಗೆದ್ದ ಮೊದಲ ಪುರುಷ ಟೆನಿಸ್ ಪ್ಲೇಯರ್ ಎನಿಸಿಕೊಂಡರು.
ನೋರಿ ಫೈನಲ್ ಪಂದ್ಯದಲ್ಲಿ 3-6, 6-4, 6-1ರ ಅಂತರದಲ್ಲಿ 29ನೇ ಶ್ರೇಯಾಂಕದ ನಿಕೋಲಸ್ ಬಸಿಲಾಶ್ವಿಲಿ ಅವರನ್ನು ಮಣಿಸಿ ವೃತ್ತಿ ಜೀವನದ ಬಹುದೊಡ್ಡ ಪ್ರಶಸ್ತಿ ಗೆದ್ದರು. ಇದು ಈ ಋತುವಿನಲ್ಲಿ ಅವರ 6ನೇ ಫೈನಲ್ ಆಗಿದೆ. 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.
ನೋರಿ ಈ ಪ್ರಶಸ್ತಿ ಗೆದ್ದ ಮೊದಲ ಬ್ರಿಟೀಷ್ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಇಂಡಿಯನ್ ವೆಲ್ಸ್ ಗೆಲ್ಲುವ ಮೂಲಕ ಎಟಿಪಿ ಶ್ರೇಯಾಂಕದಲ್ಲಿ 16ನೇ ಸ್ಥಾನಕ್ಕೆ ಬಡ್ತಿ ಪಡೆದ ನೋರಿ ಬ್ರಿಟನ್ನ ನಂಬರ್ 1 ಟೆನಿಸ್ ಪ್ಲೇಯರ್ ಎನಿಸಿದರು. ಮಹಿಳೆಯರ ವಿಭಾಗದಲ್ಲಿ ಸ್ಪೇನ್ನ ಪವುಲಾ ಬರೋಸ 7-6, 2-6, 7-6ರಲ್ಲಿ ಬೆಲಾರಸ್ನ ವಿಕ್ಟೋರಿಯಾ ಅಜರಂಕಾ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆದರು.
ಇದನ್ನು ಓದಿ:ಫ್ರಾನ್ಸ್ನಲ್ಲಿ ನಡೆದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಭವಾನಿ ದೇವಿ