ETV Bharat / sports

ಆಸ್ಟ್ರೇಲಿಯಾ ಓಪನ್:​ ಹಾಲಿ ಚಾಂಪಿಯನ್​ ಒಸಾಕ ಮಣಿಸಿದ 15 ವರ್ಷದ ಕೊಕೊ ಗೌಫ್!​

ವಿಲಿಯಮ್ಸ್​ ಸಹೋದರಿಯರ ಹಾದಿಯಲ್ಲಿರುವ ಅಮೆರಿಕದ 15 ವರ್ಷದ ಗೌಫ್​ ತಮ್ಮ ಮೊದಲ ವಿಂಬಲ್ಡನ್​ ಚಾಂಪಿಯನ್​ಶಿಪ್​ನಲ್ಲಿ ವೀನಸ್​ ವಿಲಿಯಮ್ಸ್​ಗೆ ಶಾಕ್​​ ನೀಡಿದ್ದರು. ಮತ್ತೆ ಆಸ್ಟ್ರೇಲಿಯಾ ಓಪನ್​ನ ಮೊದಲ ಸುತ್ತಿನಲ್ಲಿ ಮತ್ತೆ ವೀನಸ್​ರನ್ನು ಮಣಿಸಿದ್ದ ಗೌಫ್​ ಮೂರನೇ ಸುತ್ತಿನ ಪಂದ್ಯದಲ್ಲಿ 22 ವರ್ಷದ  2 ಗ್ರಾಂಡ್​ಸ್ಲಾಮ್​ ವಿನ್ನರ್​ ಒಸಾಕರನ್ನು 6-3, 6-4ರ ಅಂತರದಲ್ಲಿ ಮಣಿಸಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

Australian Open 2020
ಹಾಲಿ ಚಾಂಪಿಯನ್​ ಒಸಾಕರನ್ನು ಮಣಿಸಿದ ಕೊಕೊ ಗೌಫ್​
author img

By

Published : Jan 25, 2020, 12:46 PM IST

ಮೆಲ್ಬೋರ್ನ್​: ಅಮೆರಿಕದ ಉದಯೋನ್ಮುಖ ಟೆನ್ನಿಸ್​ ಆಟಗಾರ್ತಿ ಕೊಕೊ ಗೌಫ್​ ಆಸ್ಟ್ರೇಲಿಯಾ ಓಪನ್​ನಲ್ಲಿ ಹಾಲಿ ಚಾಂಪಿಯನ್​ ಹಾಗೂ ವಿಶ್ವದ 4ನೇ ಶ್ರೇಯಾಂಕ ಹೊಂದಿರುವ ಜಪಾನ್​ನ ನವೋಮಿ ಒಸಾಕ ಅವರನ್ನು ನೇರ ಸೆಟ್​ಗಳ ಅಂತರದಿಂದ ಮಣಿಸುವ ಮೂಲಕ ಟೆನ್ನಿಸ್​ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ.

ವಿಲಿಯಮ್ಸ್​ ಸಹೋದರಿಯರ ಹಾದಿಯಲ್ಲಿರುವ ಅಮೆರಿಕದ 15 ವರ್ಷದ ಗೌಫ್​ ತಮ್ಮ ಮೊದಲ ವಿಂಬಲ್ಡನ್​ ಚಾಂಪಿಯನ್​ಶಿಪ್​ನಲ್ಲಿ ವೀನಸ್​ ವಿಲಿಯಮ್ಸ್​ಗೆ ಆಘಾತ​​ ನೀಡಿದ್ದರು. ಆಸ್ಟ್ರೇಲಿಯಾ ಓಪನ್​ನ ಮೊದಲ ಸುತ್ತಿನಲ್ಲಿ ಮತ್ತೆ ವೀನಸ್​ರನ್ನು ಮಣಿಸಿದ್ದ ಗೌಫ್​ ಮೂರನೇ ಸುತ್ತಿನ ಪಂದ್ಯದಲ್ಲಿ 22 ವರ್ಷದ 2 ಗ್ರಾಂಡ್​ಸ್ಲಾಮ್​ ವಿನ್ನರ್​ ಒಸಾಕರನ್ನು 6-3, 6-4ರ ಅಂತರದಲ್ಲಿ ಮಣಿಸಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ನವೋಮಿ ಒಸಾಕ-ಕೊಕೊ ಗೌಫ್​ ನಡುವಿನ ಪಂದ್ಯ

ಎರಡು ವರ್ಷದ ಹಿಂದೆ ಜೂನಿಯರ್​ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಕ್ಕೆ ಇಂದು ಇಲ್ಲಿದ್ದೇನೆ ಎಂದು ಪಂದ್ಯ ಗೆದ್ದ ನಂತರ ತಮ್ಮ ಸಾಧನೆಯ ಬಗ್ಗೆ ಗೌಫ್​ ಸಂತಸ ವ್ಯಕ್ತಪಡಿಸಿದ್ದರು.

ಈ ಪಂದ್ಯಕ್ಕೂ ಮುನ್ನ ಅಮೆರಿಕದ ಟೆನ್ನಿಸ್​ ದಂತಕತೆ ಸೆರೆನಾ ವಿಲಿಯಮ್ಸನ್​ ಅವರಿಂದ ತರಬೇತಿ ಪಡೆದಿದ್ದರಿಂದ ಒಸಾಕರನ್ನು ಎದುರಿಸಲು ಸಾಧ್ಯವಾಯಿತು ಎಂದು ಅವರು ಗೌಫ್​ ತಿಳಿಸಿದ್ದಾರೆ. ನ್ಯೂಯಾರ್ಕ್‌ ಓಪನ್​ನಲ್ಲಿ ಒಸಾಕ ವಿರುದ್ಧ ಗೌಫ್​ ಸೋಲು ಕಂಡಿದ್ದರು.

ಪ್ರಧಾನ ಸುತ್ತಿಗೆ ತಲುಪಿರುವ ಗೌಫ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಅಥವಾ ಚೀನಾದ ಝಾಂಗ್ ಶುಐ ಅವರನ್ನು ಎದುರಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.