ಮೆಲ್ಬೋರ್ನ್: ಭಾರತದ ಡಬಲ್ಸ್ನ ಅತ್ಯುತ್ತಮ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕಣಕಾಲು ನೋವಿಗೆ ಒಳಗಾಗಿರುವ ಕಾರಣ ಮಿಕ್ಸಡ್ ಡಬಲ್ಸ್ನಿಂದ ಹಿಂದೆ ಸರಿದಿದ್ದಾರೆ.
ಆಸ್ಟ್ರೇಲಿಯಾ ಓಪನ್ನ ಡಬಲ್ಸ್ನಲ್ಲಿ ಮೂರು ಬಾರಿ ರನ್ನರ್ ಅಪ್ ಹಾಗೂ ಒಮ್ಮೆ ಚಾಂಪಿಯನ್ ಆಗಿರುವ ಸಾನಿಯಾ ಮಿರ್ಜಾ ಎರಡು ವರ್ಷದ ಬಳಿಕ ಟೆನ್ನಿಸ್ಗೆ ಮರಳಿದ್ದರು. ಕಳೆದ ವಾರ ಮಿಗಿದ ಹೋಬರ್ಟ್ ಚಾಂಪಿಯನ್ಶಿಪ್ನಲ್ಲಿ ಉಕ್ರೇನ್ ನಾಡಿಯ ಕಿಚೊನೆಕ್ ಜೊತೆಗೂಡಿ ಚಾಂಪಿಯನ್ ಆಗಿದ್ದರು.
ಹೋಬರ್ಟ್ ಇಂಟರ್ನ್ಯಾಷನಲ್ ಫೈನಲ್ ವೇಳೆ ಕಣಕಾಲು ನೋವಿನಿಂದ ಬಳಲಿದ್ದರಿಂದ ಬುಧವಾರ ನಡೆಯಬೇಕಿದ್ದ ಮಿಶ್ರ ಡಬಲ್ಸ್ನಿಂದ ಹೊರಗುಳಿದರು. ಸಾನಿಯಾ ಭಾರತ ರೋಹನ್ ಬೋಪಣ್ಣ ಜೊತೆಗೂಡಿ ಸ್ಪರ್ಧಿಸಬೇಕಿತ್ತು. ಗಾಯದ ಕಾರಣ ಇದೀಗ ಟೂರ್ನಿಯಿಂದ ಹೊರಬಿದ್ದಂತಾಗಿದೆ.
ಸಾನಿಯಾ ಮಿರ್ಜಾ ಉಕ್ರೇನ್ನ ನಾಡಿಯ ಕಿಚೆನೊಕ್ ಜೊತೆ ಗುರುವಾರ ಮಹಿಳೆಯರ ಡಬಲ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಇಂಡೋ-ಉಕ್ರೇನಿಯನ್ ಜೋಡಿ ಮೊದಲ ಸುತ್ತಿನಲ್ಲಿ ಚೀನಾದ ಕ್ಷಿನ್ಯುನ್ ಹನ್ ಮತ್ತು ಲಿನ್ ಜು ಜೋಡಿಯನ್ನು ಎದುರಿಸಲಿದೆ.