ಬೆಲ್ಗ್ರೇಡ್(ಸರ್ಬಿಯಾ): ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ಆಗಿರುವ ನೊವಾಕ್ ಜೋಕೊವಿಕ್ ಅವರ ಕ್ರೀಡಾ ಸೇವೆಯನ್ನು ಪರಿಗಣಿಸಿ ಸರ್ಬಿಯಾ ಸರ್ಕಾರ ದೊಡ್ಡ ಗೌರವ ನೀಡಿದೆ. ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಇದನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಗಳನ್ನು ಕಳುಹಿಸುವಾಗ ಬಳಸಬಹುದಾಗಿದೆ. ಜೋಕೊವಿಕ್ ಈ ಗೌರವಕ್ಕೆ ಪಾತ್ರರಾದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೋಕೊವಿಕ್ ಟೆನಿಸ್ ಜಗತ್ತಿನ ಪ್ರತಿಷ್ಠಿತ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ 7ನೇ ಬಾರಿ ವರ್ಷದ ಕೊನೆಯಲ್ಲಿ ನಂಬರ್ ಒನ್ ಶ್ರೇಯಾಂಕ ಉಳಿಸಿಕೊಳ್ಳುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.
ಅತಿ ಹೆಚ್ಚು ವಾರಗಳ ಕಾಲ ಪುರುಷರ ಎಟಿಪಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಉಳಿಸಿಕೊಂಡ ದಾಖಲೆಯು ಸರ್ಬಿಯನ್ ಸ್ಟಾರ್ ಹೆಸರಿನಲ್ಲಿದೆ. ನೊವಾಕ್ 2021ರಲ್ಲಿ 3 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದಿದ್ದಾರೆ. ಯುಎಸ್ ಓಪನ್ನಲ್ಲಿ ಫೈನಲ್ ತಲುಪಿದರೂ ರಷ್ಯಾದ ಡೇನಿಲ್ ಮಡ್ವಡೆವ್ ವಿರುದ್ಧ ಸೋಲು ಕಂಡು 21ನೇ ಗ್ರ್ಯಾಂಡ್ ಸ್ಲಾಮ್ ತಪ್ಪಿಸಿಕೊಂಡಿದ್ದರು.
ನನ್ನದೇ ಆದ ಸರ್ಬಿಯನ್ ಸ್ಟಾಂಪ್ ಸ್ವೀಕರಿಸಲು ಗೌರವ ಎನಿಸುತ್ತಿದೆ. ಈ ಅಪರೂಪದ ಉಡುಗೊರೆಗಾಗಿ ನನ್ನ ದೇಶಕ್ಕೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಇದರಲ್ಲೇ ನಾನು ವಿನಮ್ರನಾಗಿದ್ದೇನೆ ಎಂದು ಜೋಕೊವಿಕ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ABSD ಕಲಿತ ತಂಡದಲ್ಲಿ ಮತ್ತೆ ಆಡುವ ಆಸೆಯಿದೆ : ಸಿಎಸ್ಕೆ ಸೇರುವ ಬಯಕೆ ವ್ಯಕ್ತಪಡಿಸಿದ ಅಶ್ವಿನ್