ಅಬುಧಾಬಿ: ಟಿ20 ವಿಶ್ವಕಪ್ನ ಸೂಪರ್ 12ರ ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಸೆಣೆಸುತ್ತಿದ್ದು, ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಈ ಪಂದ್ಯ ನಿರ್ಣಾಯಕ ಅಲ್ಲದಿದ್ದರೂ, ಈ ಹಿಂದಿನ ವಿಶ್ವಕಪ್ ಪಂದ್ಯಗಳಲ್ಲಿ ಪ್ರಬಲವಾಗಿ ಕಾದಾಡಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೆ, ಆಸ್ಟ್ರೇಲಿಯಾದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.
-
Toss update from Abu Dhabi 📰
— T20 World Cup (@T20WorldCup) November 6, 2021 " class="align-text-top noRightClick twitterSection" data="
Australia will field first. #T20WorldCup | #AUSvWI | https://t.co/YEQqoRudxN pic.twitter.com/dzTJc29osO
">Toss update from Abu Dhabi 📰
— T20 World Cup (@T20WorldCup) November 6, 2021
Australia will field first. #T20WorldCup | #AUSvWI | https://t.co/YEQqoRudxN pic.twitter.com/dzTJc29osOToss update from Abu Dhabi 📰
— T20 World Cup (@T20WorldCup) November 6, 2021
Australia will field first. #T20WorldCup | #AUSvWI | https://t.co/YEQqoRudxN pic.twitter.com/dzTJc29osO
ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ವೆಸ್ಟ್ ಇಂಡೀಸ್ನಲ್ಲಿ ರವಿ ರಾಂಪಾಲ್ ಬದಲಿಗೆ ಹೆಡನ್ ವಾಲ್ಶ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೇನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿನಿಸ್, ಮ್ಯಾಥ್ಯೂ ವೇಡ್ (ವಿಕೀ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಕ್ರಿಸ್ ಗೇಲ್, ಎವಿನ್ ಲೆವಿಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್ (ವಿಕೀ), ಕೀರಾನ್ ಪೊಲಾರ್ಡ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಆ್ಯಂಡ್ರೆ ರಸೆಲ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಹೆಡನ್ ವಾಲ್ಶ್
ಇದನ್ನೂ ಓದಿ: ನೆಹ್ರಾ, ಧವನ್, ಪಂತ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಕೋಚಿಂಗ್ ನೀಡಿದ್ದ ತಾರಕ್ ಸಿನ್ಹಾ ನಿಧನ