ETV Bharat / sports

ನೋಡಿ: ಡ್ರೆಸ್ಸಿಂಗ್​ ರೂಮ್​ನಲ್ಲಿ ರವಿಶಾಸ್ತ್ರಿ ಭಾವನಾತ್ಮಕ ವಿದಾಯ ಭಾಷಣ

ವಿದೇಶಿ ಪ್ರವಾಸದ ವೇಳೆ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ತಂಡ ಅತ್ಯುತ್ತಮ ಸಾಧನೆ ಮಾಡಿದೆ. ಪ್ರತಿಯೊಬ್ಬ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರವಿಶಾಸ್ತ್ರಿ ಹೇಳಿದರು.

ravi shastri emotional message on dressing room
ರವಿಶಾಸ್ತ್ರಿ ಭಾವನಾತ್ಮಕ ವಿದಾಯ ಭಾಷಣ
author img

By

Published : Nov 9, 2021, 3:39 PM IST

ಭಾರತ ಮತ್ತು ನಮೀಬಿಯಾ ಮಧ್ಯೆ ಸೋಮವಾರ ನಡೆದ ಪಂದ್ಯ ಹಲವು ಭಾವನಾತ್ಮಕ ವಿಚಾರಗಳಿಂದ ಕೂಡಿತ್ತು. ಟೀಂ ಇಂಡಿಯಾ ಕೋಚ್​ ಆಗಿದ್ದ ರವಿಶಾಸ್ತ್ರಿ ತಮ್ಮ 4 ವರ್ಷಗಳ ಅವಧಿಯನ್ನು ಪೂರ್ಣ ಮಾಡಿದರೆ, ಟಿ20 ಪಂದ್ಯಗಳ ನಾಯಕತ್ವಕ್ಕೆ ಬ್ಯಾಟಿಂಗ್​ ಕಿಂಗ್ ವಿರಾಟ್​ ಕೊಹ್ಲಿ ವಿದಾಯ ಹೇಳಿದರು.

ಭಾರತ ಮತ್ತು ನಮೀಬಿಯಾ ಪಂದ್ಯ ಮುಕ್ತಾಯದ ಬಳಿಕ ಭಾರತ ತಂಡದ ಡ್ರೆಸ್ಸಿಂಗ್​ ರೂಮ್​ಗೆ ಬಂದ ರವಿಶಾಸ್ತ್ರಿ ಆಡಿದ ವಿದಾಯದ ಮಾತುಗಳು ಎಲ್ಲರ ಹೃದಯವನ್ನು ಭಾರವಾಗಿಸಿವೆ.

"ವಿಶ್ವಕಪ್​ ಜಯಿಸುವಲ್ಲಿ ತಂಡ ವಿಫಲವಾಗಿರುವುದು ಬೇಸರ ತಂದಿದೆ. ಆದರೆ, ಭಾರತ ತಂಡದ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತ ಇನ್ನಷ್ಟು ಉತ್ತಮವಾಗಿ ಬೆಳೆಯಲಿದೆ. ವಿದೇಶಿ ಪ್ರವಾಸದ ವೇಳೆ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ತಂಡ ಅತ್ಯುತ್ತಮ ಸಾಧನೆ ಮಾಡಿದೆ. ಪ್ರತಿಯೊಬ್ಬ ಆಟಗಾರರ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಇನ್ನು ಮುಂದಿನ ಪಂದ್ಯಗಳಿಗೆ 'ಆಲ್​ ದ ಬೆಸ್ಟ್​' ಎಂದು ಹೇಳಿ ತಮ್ಮ ವಿದಾಯ ಭಾಷಣವನ್ನು ಮಾಡಿದ್ದಾರೆ.

ಬಳಿಕ ತಂಡದ ಎಲ್ಲ ಸದಸ್ಯರು ರವಿಶಾಸ್ತ್ರಿ ಅವರನ್ನು ಆಲಂಗಿಸಿಕೊಂಡು ಬೀಳ್ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.