ಅಬುಧಾಬಿ: ಅಸಲಂಕಾ ಮತ್ತು ನಿಸ್ಸಾಂಕ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಶ್ರಿಲಂಕಾ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್ಗಳಿಸಿದ್ದು, ವಿಂಡೀಸ್ಗೆ 190 ರನ್ಗಳ ಗುರಿ ನೀಡಿತ್ತು. ಬೃಹತ್ ಮೊತ್ತವನ್ನು ಬೆನ್ನತ್ತುವ ಭರದಲ್ಲಿ ವಿಂಡೀಸ್ ತಂಡ ಎಡವಿದ್ದು, ರನ್ಗಳಿಂದ ಸೋಲು ಕಂಡಿತು. ಈ ಸೋಲಿನ ಮೂಲಕ ವಿಂಡೀಸ್ ತಂಡ ಟೂರ್ನಿಯಿಂದ ಹೊರ ನಡೆಯಿತು.
ಶ್ರೀಲಂಕಾ ಇನ್ನಿಂಗ್ಸ್: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರಿಲಂಕಾ ಮೊದಲ ವಿಕೆಟ್ಗೆ 42 ರನ್ಗಳ ಜೊತೆಯಾಟ ನೀಡಿತು. ಕುಸಾಲ್ ಪೆರೆರಾ 21 ಎಸೆತಗಳಲ್ಲಿ 29 ರನ್ಗಳಿಸಿ ಔಟಾದರು. ಪೆರೆರಾ ಔಟಾಗುತ್ತಿದ್ದಂತೆ ಕ್ರೀಸ್ಗೆ ಆಗಮಿಸಿದ ಅಸಲಂಕಾ 2ನೇ ವಿಕೆಟ್ಗೆ 91 ರನ್ಗಳ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ನಿಸ್ಸಾಂಕ 41 ಎಸೆತಗಳಲ್ಲಿ 5 ಬೌಂಡರಿ ಸಹಿತ 51 ರನ್ಗಳಿಸಿ ಡ್ವೇನ್ ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಅಸಲಂಕಾ 41 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 68 ರನ್ಗಳಿಸಿ 19ನೇ ಓವರ್ನಲ್ಲಿ ರಸೆಲ್ ಬೌಲಿಂಗ್ನಲ್ಲಿ ಹೆಟ್ಮಾಯರ್ಗೆ ಕ್ಯಾಚ್ ನೀಡಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಶನಕ ಕೇವಲ 14 ಎಸೆತಗಳಲ್ಲಿ 25 ರನ್ಗಳಿಸಿ ಶ್ರೀಲಂಕಾ ತಂಡ ಬೃಹತ್ ಮೊತ್ತ ದಾಖಲಿಸುವುದಕ್ಕೆ ಪ್ರಮುಖ ಪಾತ್ರವಹಿಸಿದರು. ಒಟ್ನಲ್ಲಿ ಶ್ರೀಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು 189 ರನ್ಗಳನ್ನು ಗಳಿಸಿತು.
ವೆಸ್ಟ್ ಇಂಡೀಸ್ ಪರ ಆಂಡ್ರೆ ರಸೆಲ್ 4 ಓವರ್ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಬ್ರಾವೋ 42ಕ್ಕೆ1 ವಿಕೆಟ್ ಪಡೆದರೂ ದುಬಾರಿಯಾದರು. ರಾಂಪಾಲ್ 37, ಹೋಲ್ಡರ್ 37 ರನ್ ಬಿಟ್ಟುಕೊಟ್ಟರು.
-
Sri Lanka end their campaign on a high 👏#T20WorldCup | #WIvSL | https://t.co/TzDpr9B1SV pic.twitter.com/SexCF3st3P
— ICC (@ICC) November 4, 2021 " class="align-text-top noRightClick twitterSection" data="
">Sri Lanka end their campaign on a high 👏#T20WorldCup | #WIvSL | https://t.co/TzDpr9B1SV pic.twitter.com/SexCF3st3P
— ICC (@ICC) November 4, 2021Sri Lanka end their campaign on a high 👏#T20WorldCup | #WIvSL | https://t.co/TzDpr9B1SV pic.twitter.com/SexCF3st3P
— ICC (@ICC) November 4, 2021
ವೆಸ್ಟ್ ಇಂಡೀಸ್ ಇನ್ನಿಂಗ್ಸ್: ಶ್ರೀಲಂಕಾ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ವಿಂಡೀಸ್ ತಂಡ ಕ್ರಿಸ್ ಗೇಲ್ (1 ರನ್)ಮತ್ತು ಎವಿನ್ ಲೆವಿಸ್ (8 ರನ್) ವಿಕೆಟ್ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಬಳಿಕ ಬಂದ ರೋಸ್ಟನ್ ಚೇಸ್ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ 9 ರನ್ಗಳನ್ನು ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಬಳಿಕ ಬಂದ ಹೆಟ್ಮೆಯರ್ ಅದ್ಭುತ ಪ್ರದರ್ಶನ ನೀಡಿದರು. ಕೇವಲ 54 ಎಸೆತಗಳಲ್ಲಿ 4 ಸಿಕ್ಸರ್, 8 ಬೌಂಡರಿಗಳ ನೆರವಿನಿಂದ 84 ರನ್ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಆದ್ರೆ ಬಳಿಕ ಬಂದ ಆಟಗಾರರು ಉತ್ತಮ ಪ್ರದರ್ಶನ ನೀಡದೇ ತಂಡದ ಪರ ಆಂಡ್ರೆ ರಸೆಲ್ 2 ರನ್, ಕೀರಾನ್ ಪೊಲಾರ್ಡ್ ಶೂನ್ಯ, ಜೇಸನ್ ಹೋಲ್ಡರ್ 8 ರನ್, ಡ್ವೇನ್ ಬ್ರಾವೋ 2 ರನ್ ಗಳಿಸಿ ಪೆವಿಲಿಯನ್ ಹಾದಿ ತುಳಿದರು. ಇನ್ನು ಅಕೇಲ್ ಹೊಸೈನ್ 1 ರನ್ ಕಲೆ ಹಾಕುವ ಮೂಲಕ ಅಜೇಯರಾಗಿ ಉಳಿದರು.
ಒಟ್ನಲ್ಲಿ ವಿಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 169 ರನ್ಗಳನ್ನು ಕಲೆ ಹಾಕುವ ಮೂಲಕ ಶ್ರೀಲಂಕಾ ವಿರುದ್ಧ 20 ರನ್ಗಳ ಸೋಲು ಕಂಡಿತು. ಈ ಸೋಲಿನ ಮೂಲಕ ವೆಸ್ಟ್ ಇಂಡೀಸ್ ತಂಡ ಟೂರ್ನಿಯಿಂದ ಹೊರ ಬಿತ್ತು.
ಶ್ರೀಲಂಕಾ ಪರ ಬಿನೂರ ಫೆರ್ನಾಂಡೋ, ಚಾಮಿಕಾ ಕರುಣಾರತ್ನೆ ಮತ್ತು ಹಸರಂಗ ತಲಾ ಎರಡು ವಿಕೆಟ್ಗಳನ್ನ ಪಡೆದು ಮಿಂಚಿದರು. ನಾಯಕ ದಾಸುನ್ ಶನಕ ಮತ್ತು ದುಷ್ಮಂತ ಚಮೀರ ತಲಾ ಒಂದೊಂದು ವಿಕೆಟ್ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣರಾದರು.