ದುಬೈ : ಐಸಿಸಿ ಟಿ-20 ವಿಶ್ವಕಪ್(ICC T20 World Cup)ನಲ್ಲಿ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಟೂರ್ನಾಮೆಂಟ್ ತಂಡದ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಯಾವುದೇ ಭಾರತೀಯ ಆಟಗಾರ ಸ್ಥಾನ ಪಡೆದುಕೊಂಡಿಲ್ಲ.
ಐಸಿಸಿ ಟೂರ್ನಾಮೆಂಟ್ (ICC Team of the Tournament)ತಂಡದಲ್ಲಿ ಪಾಕಿಸ್ತಾನದ ಬಾಬರ್ ಆಜಂಗೆ ನಾಯಕ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ.
-
The @upstox Most Valuable Team of the Tournament has been announced 🌟
— T20 World Cup (@T20WorldCup) November 15, 2021 " class="align-text-top noRightClick twitterSection" data="
Does your favourite player feature in the XI?
Read: https://t.co/PpfCbFDTSH pic.twitter.com/ucJn0cIs1c
">The @upstox Most Valuable Team of the Tournament has been announced 🌟
— T20 World Cup (@T20WorldCup) November 15, 2021
Does your favourite player feature in the XI?
Read: https://t.co/PpfCbFDTSH pic.twitter.com/ucJn0cIs1cThe @upstox Most Valuable Team of the Tournament has been announced 🌟
— T20 World Cup (@T20WorldCup) November 15, 2021
Does your favourite player feature in the XI?
Read: https://t.co/PpfCbFDTSH pic.twitter.com/ucJn0cIs1c
ಉಳಿದಂತೆ ಶ್ರೀಲಂಕಾದ ಅಸಲಂಕಾ 4ನೇ ಸ್ಥಾನ,ದಕ್ಷಿಣ ಆಫ್ರಿಕಾದ ಮರ್ಕ್ರಾಮ್ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ಕ್ರಮವಾಗಿ 5 ಹಾಗೂ 6ನೇ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ಶ್ರೀಲಂಕಾದ ಹಸರಂಗ,ಆಸ್ಟ್ರೇಲಿಯಾದ ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್, ಟ್ರೆಂಟ್ ಬೊಲ್ಟ್, ಆನ್ರಿಚ್ ನಾರ್ಟ್ಜ್ ಹಾಗೂ ಶಾಹಿನ್ ಆಫ್ರಿದಿ ತಂಡದಲ್ಲಿದ್ದಾರೆ.
ಐಸಿಸಿ ಟೂರ್ನಾಮೆಂಟ್ ತಂಡ : ಡೇವಿಡ್ ವಾರ್ನರ್, ಜೋಸ್ ಬಟ್ಲರ್ (WK), ಬಾಬರ್ ಅಜಮ್ (ಕ್ಯಾಪ್ಟನ್), ಅಸಲಂಕಾ, ಮಾರ್ಕ್ರಾಮ್, ಮೊಯಿನ್ ಅಲಿ, ವನಿಂದು ಹಸರಂಗಾ, ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್, ಟ್ರೆಂಟ್ ಬೌಲ್ಟ್, ಆನ್ರಿಚ್ ನಾರ್ಟ್ಜೆ, ಶಾಹೀನ್ ಅಫ್ರಿದಿ.
ಇದನ್ನೂ ಓದಿರಿ: ಗೆಲುವಿನ ಸಂಭ್ರಮಾಚರಣೆಯಲ್ಲಿ ಆಸ್ಟ್ರೇಲಿಯಾ ಆಟಗಾರರು; ಶೂದಿಂದ ತಂಪು ಪಾನೀಯ ಕುಡಿದ ವಿಡಿಯೋ ವೈರಲ್
ಐಸಿಸಿ ಟಿ-20 ಕ್ರಿಕೆಟ್(ICC T20 World Cup) ಟೂರ್ನಾಮೆಂಟ್ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 289 ರನ್, ಬಟ್ಲರ್ 269 ರನ್ ಗಳಿಸಿದ್ದಾರೆ. ಪಾಕ್ನ ಬಾಬರ್ ಆಜಂ 303 ರನ್ ಗಳಿಕೆ ಮಾಡಿದ್ದಾರೆ.
ವಿಶೇಷವೆಂದರೆ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರಿಷಭ್ ಪಂತ್ ಸೇರಿದಂತೆ ಯಾವುದೇ ಪ್ಲೇಯರ್ಸ್ ಅವಕಾಶ ಪಡೆದಿಲ್ಲ. ಪ್ರಸಕ್ತ ಸಾಲಿನ ಐಸಿಸಿ ಟಿ-20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ(Team India Cricket) ಆಡಿರುವ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿ, ಎರಡು ಪಂದ್ಯಗಳಲ್ಲಿ ಸೋಲು ಕಂಡು ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು.