ETV Bharat / sports

ಹುತಾತ್ಮರಾದ ಯೋಧರಿಗೆ ಮೌನಾಚರಣೆ ಸಲ್ಲಿಸಿ ಪ್ರತಿಭಟನೆ ಮುಂದುವರಿಸಿದ ಕುಸ್ತಿಪಟುಗಳು

author img

By

Published : Apr 27, 2023, 12:09 PM IST

ಜಂತರ್ ಮಂತರ್​ನಲ್ಲಿ ಐದನೇ ದಿನವೂ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿದೆ. ಬುಧವಾರ ರಾತ್ರಿ ಕುಸ್ತಿಪಟುಗಳು ಕ್ಯಾಂಡಲ್ ಮಾರ್ಚ್ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.

Women Wrestlers Protest  Wrestlers take out candle march at Jantar Mantar  Wrestlers take out candle march  ಹುತಾತ್ಮರಾದ ಯೋಧರಿಗೆ ಮೌನಾಚರಣೆ ಸಲ್ಲಿಸಿ ಪ್ರತಿಭಟನೆ  ಪ್ರತಿಭಟನೆ ಮುಂದುವರಿಸಿದ ಕುಸ್ತಿಪಟುಗಳು  ಜಂತರ್ ಮಂತರ್​ನಲ್ಲಿ ಐದನೇ ದಿನವೂ ಕುಸ್ತಿಪಟುಗಳ ಪ್ರತಿಭಟನೆ  ಬುಧವಾರ ರಾತ್ರಿ ಕುಸ್ತಿಪಟುಗಳು ಕ್ಯಾಂಡಲ್ ಮಾರ್ಚ್  ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳು ಧರಣಿ  ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ  ಫೆಡರೇಶನ್ ಅಧ್ಯಕ್ಷ ಭೂಷಣ್ ಶರಣ್ ಸಿಂಗ್ ವಿರುದ್ಧ ತನಿಖೆ  ರಾಜ್ಯಪಾಲ ಸತ್ಯಪಾಲ್ ಮಲಿಕ್​
ಐದನೇ ದಿನವೂ ಕುಸ್ತಿಪಟುಗಳ ಪ್ರತಿಭಟನೆ

ನವದೆಹಲಿ: ಕಳೆದ ನಾಲ್ಕು ದಿನಗಳಿಂದ ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳು ಧರಣಿ ಕುಳಿತಿದ್ದು, ಇಂದು ಐದನೇ ದಿನವಾಗಿದೆ. ಕುಸ್ತಿಪಟುಗಳು ಬುಧವಾರ ತಡರಾತ್ರಿ ಜಂತರ್ ಮಂತರ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಧರಣಿಯಲ್ಲಿ ಕುಳಿತಿದ್ದ ಕುಸ್ತಿಪಟುಗಳು ಛತ್ತೀಸ್‌ಗಢದ ದಾಂತೇವಾಡದಲ್ಲಿ ಹುತಾತ್ಮರಾದ ಯೋಧರಿಗೆ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ, ಕುಸ್ತಿಪಟುಗಳು ತಮ್ಮ ಮಾತನ್ನು ಪ್ರಧಾನಿ ಕೂಡ ಆಲಿಸಬೇಕು ಎಂದರು. ಕುಸ್ತಿಪಟುಗಳು ತಮ್ಮ ಕುಂದು ಕೊರತೆಗಳನ್ನು ಪ್ರಧಾನಿ ಬಳಿ ಹೇಳಿಕೊಳ್ಳಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.

ಓದಿ: ದೇಶಕ್ಕಾಗಿ ಪದಕ ಗೆಲ್ಲಲೇ ಬೇಕು: 4ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ತರಬೇತಿ ಆರಂಭಿಸಿದ ಕುಸ್ತಿಪಟುಗಳು

ಕುಸ್ತಿ ಫೆಡರೇಶನ್ ಅಧ್ಯಕ್ಷ ಭೂಷಣ್ ಶರಣ್ ಸಿಂಗ್ ವಿರುದ್ಧ ತನಿಖೆಗೆ ಒತ್ತಾಯಿಸಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ವಿನೇಶ್‌ ಫೊಗಟ್‌, ರವಿ ದಹಿಯಾ ಹಾಗೂ ಸಾಕ್ಷಿ ಮಲಿಕ್‌ ಸೇರಿದಂತೆ ಅನೇಕರು ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ರಾಜಕಾರಣಿಗಳು ಮತ್ತು ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.

ನಿನ್ನೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್​ ಸಹ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದರು. ಭೇಟಿ ವೇಳೆ ಮಾತನಾಡಿದ ಸತ್ಯಪಾಲ್ ಮಲಿಕ್, ಕ್ರೀಡೆಯಲ್ಲಿ ತಮ್ಮ ಸಾಧನೆ ಮತ್ತು ಯಶಸ್ವಿಯಿಂದ ದೇಶದಲ್ಲಿ ಗೌರವವನ್ನು ಪಡೆದಿದ್ದ ಕ್ರೀಡಾಪಟುಗಳು ಈಗ ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಹೋರಾಟವು ಕೊನೆಗೊಳ್ಳುವವರೆಗೂ ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು. ಜಂತರ್ - ಮಂತರ್ ರಸ್ತೆಯಲ್ಲಿಯೇ ಕುಸ್ತಿಪಟುಗಳು ಅಖಾಡಕ್ಕಿಳಿದಿದ್ದು, ಬೆಳಗ್ಗೆಯಿಂದಲೇ ಅಭ್ಯಾಸ ನಡೆಸುತ್ತಿದ್ದಾರೆ.

"ಪ್ರಧಾನಿ ಮೋದಿ ಸರ್, ಬೇಟಿ ಬಚಾವೋ ಮತ್ತು ಬೇಟಿ ಪಢಾವೋ ಬಗ್ಗೆ ಮಾತನಾಡುತ್ತಾರೆ. ಪ್ರತಿಯೊಬ್ಬರ ಮನ್ ಕಿ ಬಾತ್​ ಅನ್ನು ಕೇಳುತ್ತಾರೆ. ನಮ್ಮ ಮನ್ ಕಿ ಬಾತ್ ಕೇಳಲು ಆಗುವುದಿಲ್ಲವೇ?, ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸುತ್ತಾರೆ. ನಮಗೆ ಗೌರವವನ್ನು ನೀಡುತ್ತಾರೆ. ನಮ್ಮನ್ನು ಅವರ ಹೆಣ್ಣುಮಕ್ಕಳು ಎಂದು ಕರೆಯುತ್ತಾರೆ. ಇಂದು ಅವರು ನಮ್ಮ ಮನ್ ಕಿ ಬಾತ್ ಅನ್ನು ಕೇಳಬೇಕೆಂದು ನಾವು ಅವರಿಗೆ ಮನವಿ ಮಾಡುತ್ತೇವೆ'' ಎಂದು ನಿನ್ನೆ ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿದರು.

ಕುಸ್ತಿಪಟುಗಳು ಬುಧವಾರ ರಾತ್ರಿ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮತ್ತು ಅದರ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಓದಿ: ದಯವಿಟ್ಟು ನಮ್ಮ 'ಮನ್ ಕಿ ಬಾತ್' ಕೇಳಿ: ಪ್ರಧಾನಿ ಮೋದಿಗೆ ಕುಸ್ತಿಪಟುಗಳ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.