ಮಸ್ಕತ್ : ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ, ನವನೀತ್ ಕೌರ್ ಮತ್ತು ಶರ್ಮಿಳಾ ದೇವಿ ತಲಾ ಎರಡು ಗೋಲುಗಳ ನೆರವಿನಿಂದ ಶುಕ್ರವಾರ ಇಲ್ಲಿ ನಡೆದ ಮಹಿಳಾ ಏಷ್ಯಾಕಪ್ ಹಾಕಿ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ 9-0 ಗೋಲುಗಳಿಂದ ಮಲೇಷ್ಯಾವನ್ನು ಮಣಿಸಿತು.
ಪಂದ್ಯಾವಳಿ ಗೆಲ್ಲಲು ಮತ್ತು ವರ್ಷದ ನಂತರ ನಡೆಯಲಿರುವ ವಿಶ್ವಕಪ್‌ನಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಬಯಸುತ್ತಿರುವ ಭಾರತ, ಪ್ರಬಲ ಪ್ರದರ್ಶನದೊಂದಿಗೆ ಬಂದಿದೆ. ಮೊದಲ ಕ್ವಾರ್ಟರ್‌ನಲ್ಲಿ ಮೂರು ಮತ್ತು ಎರಡನೇ ಹಂತದಲ್ಲಿ ಒಂದು ಬಾರಿ ಗೋಲು ಗಳಿಸಿ 4-0ದಿಂದ ಮುನ್ನಡೆ ಸಾಧಿಸಿತು. ಇನ್ನುಳಿದ ಅರ್ಧ ಆಟದಲ್ಲಿ ಭಾರತ ತಂಡ ಐದು ಗೋಲು ಗಳಿಸಿ ಮಲೇಷ್ಯಾ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಓದಿ: ಮುಂಬೈನ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ಭಾರತ ತಂಡ ಕಳೆದ 17 ಪಂದ್ಯಗಳಲ್ಲಿ ಮಲೇಷ್ಯಾ ವಿರುದ್ಧ ಎಂದಿಗೂ ಸೋತಿಲ್ಲ. ಭಾರತೀಯರು ಆರಂಭದಿಂದ ಮುನ್ನುಗ್ಗುತ್ತಿದ್ದು, ಪಂದ್ಯದುದ್ದಕ್ಕೂ ಮಲೇಷಿಯನ್ನರನ್ನು ಒತ್ತಡದಲ್ಲಿಟ್ಟರು. ಒಟ್ಟಾರೆ ಇದು ಉತ್ತಮ ಪ್ರದರ್ಶನವಾಗಿದ್ದು, ಭಾನುವಾರ ನಡೆಯಲಿರುವ ಏಷ್ಯನ್ ಗೇಮ್ಸ್ ವಿಜೇತ ಜಪಾನ್ ವಿರುದ್ಧದ ಮುಂದಿನ ಪಂದ್ಯಕ್ಕೆ ಇದು ಉತ್ತೇಜನ ನೀಡಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ