ETV Bharat / sports

ಉಕ್ರೇನ್ ನಿರಾಶ್ರಿತರಿಗೆ ಗುಡ್​ ನ್ಯೂಸ್​.. ವಿಂಬಲ್ಡನ್​ ಟೆನಿಸ್​ ಪಂದ್ಯಗಳಿಗೆ ಉಚಿತ ಟಿಕೆಟ್​

ರಷ್ಯಾದ ದಾಳಿಯಿಂದಾಗಿ ದೇಶ ತೊರೆದ ಉಕ್ರೇನಿಯನ್​ ಜನರಿಗೆ ವಿಂಬಲ್ಡನ್​ ಟೆನಿಸ್​ ಟೂರ್ನಿಯಲ್ಲಿ ಉಚಿತ ಟಿಕೆಟ್​ ಮತ್ತು 250,000 ಪೌಂಡ್​ ಹಣ ದೇಣಿಗೆ ನೀಡಲು ನಿರ್ಧರಿಸಲಾಗಿದೆ.

ಉಕ್ರೇನ್ ನಿರಾಶ್ರಿತರಿಗೆ ವಿಂಬಲ್ಡನ್​ ಟೆನಿಸ್​ ಪಂದ್ಯಗಳಿಗೆ ಉಚಿತ ಟಿಕೆಟ್​

author img

By

Published : Jun 25, 2022, 3:51 PM IST

ಲಂಡನ್: ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್​ನ​ ಕೋಟ್ಯಂತರ ಜನರು ದೇಶ ತೊರೆದು ಹಲವು ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬ್ರಿಟನ್​ ಸೇರಿದಂತೆ ವಿವಿಧೆಡೆ ಆಶ್ರಯ ಪಡೆದ ಉಕ್ರೇನ್​ ನಿರಾಶ್ರಿತರಿಗೆ ವಿಂಬಲ್ಡನ್​ ಟೆನಿಸ್​ ಪಂದ್ಯಗಳಿಗೆ ಉಚಿತ ಟಿಕೆಟ್​ ಮತ್ತು 250,000 ಪೌಂಡ್​ ಹಣವನ್ನು ದೇಣಿಗೆಯಾಗಿ ನೀಡುವುದಾಗಿ ಇಂಗ್ಲೆಂಡ್​ ಲಾನ್​ ಟೆನಿಸ್​ ಕ್ಲಬ್​ ಪ್ರಕಟಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಇಂಗ್ಲೆಂಡ್ ಲಾನ್​ ಟೆನಿಸ್​ ಕ್ಲಬ್​ ಅಧ್ಯಕ್ಷ ಇಯಾನ್ ಹೆವಿಟ್, ರಷ್ಯಾದ ದಾಳಿಯಿಂದಾಗಿ ದೇಶ ತೊರೆದು ಬರುತ್ತಿರುವ ಉಕ್ರೇನ್​ ಜನರನ್ನು ಇಂಗ್ಲೆಂಡಿಗರು ಸ್ವಾಗತಿಸುತ್ತಿರುವ ಅಗಾಧ ಪ್ರತಿಕ್ರಿಯೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಉಕ್ರೇನ್​ ನಿರಾಶ್ರಿತ ಸಮುದಾಯಗಳ ಜೊತೆಗೆ ನಾವಿದ್ದೇವೆ ಎಂದು ಅಭಯ ನೀಡಿದರು.

ಇಂಗ್ಲೆಂಡ್ ಕ್ಲಬ್ ಮತ್ತು ಲಾನ್​ ಟೆನಿಸ್​ ಅಸೋಸಿಯೇಷನ್​ ಜಂಟಿಯಾಗಿ ವಿಂಬಲ್ಡನ್ ಪಂದ್ಯಗಳಿಗೆ ಬರುವ ಉಕ್ರೇನ್​ ನಿರಾಶ್ರಿರಿಗೆ ಉಚಿತ ಟಿಕೆಟ್​ ನೀಡಲಾಗುವುದು. ಅಲ್ಲದೇ, ಟೆನಿಸ್​ ಪ್ಲೇ ಫಾರ್​ ಪೀಸ್​ ಹೆಸರಿನಲ್ಲಿ 250,000 ಫೌಂಡ್​ ಹಣವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ರಷ್ಯಾದ ದಾಳಿಯನ್ನು ಖಂಡಿಸಿ ಈಗಾಗಲೇ ವಿಂಬಲ್ಡನ್ ಟೂರ್ನಿಯಿಂದ ರಷ್ಯಾ ಮತ್ತು ಬೆಲೋರೆಸ್​​ನ ಟೆನಿಸ್​ ಆಟಗಾರರನ್ನು ನಿಷೇಧಿಸಲಾಗಿದೆ. ಜೂನ್​ 27ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ 2022ರ ಗ್ರ್ಯಾಂಡ್​​ ಸ್ಲಾಮ್​ನಲ್ಲಿ​ ಈ ಎರಡೂ ರಾಷ್ಟ್ರಗಳ ಆಟಗಾರರು ಆಡುವುದು ಅಸಾಧ್ಯವಾಗಿದೆ.

ಓದಿ: ಏಷ್ಯನ್ ಚಾಂಪಿಯನ್ ಶಿಪ್ : ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.