ETV Bharat / sports

ವಿಂಬಲ್ಡನ್​: ಕಾರ್ಲೋಸ್‌ ಮಣಿಸಿ ಜೊಕೊವಿಕ್ ವಿರುದ್ಧದ ಹಣಾಹಣಿಗೆ ಸಜ್ಜಾದ ಸಿನ್ನರ್ - ಅಲ್ಕರಾಜ್​ನನ್ನು ಸೋಲಿಸಿದ ಸಿನ್ನರ್​ ಸುದ್ದಿ

ಪ್ರತಿಷ್ಠಿತ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನಲ್ಲಿ ಜಾನಿಕ್ ಸಿನ್ನರ್​, ಟಾಪ್​ ರ‍್ಯಾಂಕ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರ​ನ್ನು ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಈಗ ಸಿನ್ನರ್​ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್​ ಅವರನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ.

Sinner beats Alcaraz to reach quarters in Wimbledon  Sinner beats Alcaraz in Wimbledon  Wimbledon 2022 news  ಅಲ್ಕರಾಜ್​ ವಿರುದ್ಧ ಗೆದ್ದು ಜೊಕೊವಿಕ್ ಎದುರಾಡಲು ಸಜ್ಜಾದ ಸಿದ್ದರ್  ಅಲ್ಕರಾಜ್​ನನ್ನು ಸೋಲಿಸಿದ ಸಿನ್ನರ್​ ಸುದ್ದಿ  ವಿಂಬಲ್ಡನ್​ 2022 ಸುದ್ದಿ
ಅಲ್ಕರಾಜ್​ ವಿರುದ್ಧ ಗೆದ್ದು ಜೊಕೊವಿಕ್ ಎದುರಾಡಲು ಸಜ್ಜಾದ ಸಿದ್ದರ್​
author img

By

Published : Jul 4, 2022, 12:05 PM IST

ವಿಂಬಲ್ಡನ್‌ನಲ್ಲಿ ಆರು ಬಾರಿ ಚಾಂಪಿಯನ್​ ಆಗಿರುವ ನೊವಾಕ್ ಜೊಕೊವಿಕ್ ವಿರುದ್ಧ ಕ್ವಾರ್ಟರ್‌ಫೈನಲ್​ನಲ್ಲಿ ಆಡಲು ಜಾನಿಕ್ ಸಿನ್ನರ್‌ ತನ್ನ ಎದುರಾಳಿ ಅಲ್ಕರಾಜ್​ನನ್ನು ಪ್ರಿ-ಕ್ವಾರ್ಟರ್​ ಫೈನಲ್​ನಲ್ಲಿ ಸೋಲಿಸಿದ್ದಾರೆ. ಮೂರನೇ ಸೆಟ್‌ನ ಟೈಬ್ರೇಕ್‌ನಲ್ಲಿ ಕಾರ್ಲೋಸ್ ಅಲ್ಕರಾಜ್ ಎರಡು ಸೆಟ್​ಗಳಿಂದ ಹಿನ್ನಡೆ ಅನುಭವಿಸಿದರು. ಬಳಿಕ ಮೂರನೇ ಸೆಟ್​ ಅನ್ನು ಅಲ್ಕರಾಜ್​ ಗೆದ್ರೂ ಸಹ ಇಟಾಲಿಯನ್ ಆಟಗಾರ ಸಿನ್ನರ್​ ಎದೆಗುಂದಲಿಲ್ಲ. ತಮ್ಮ ಆಟವನ್ನು ದಿಟ್ಟತನದಿಂದ ಮುಂದುವರಿಸುತ್ತಲೇ ಬಂದರು.

ನಾಲ್ಕನೇ ಸೆಟ್‌ ಕುತೂಹಲ ಕೆರಳಿಸಿತ್ತು. ಆದ್ರೆ ಈ ಸೆಟ್​ನಲ್ಲಿ ಮೊದಲನಿಂದಲೂ ಸಿನ್ನರ್‌ ಮುನ್ನಡೆ ಸಾಧಿಸುತ್ತಲೇ ಬಂದರು. ಸ್ಪ್ಯಾನಿಷ್ ಆಟಗಾರ ಅಲ್ಕರಾಜ್​ ವಿರುದ್ಧ 6-1 6-4 6-7 (8) 6-3 ಸೆಟ್​ಗಳನ್ನು ಗಳಿಸುವ ಮೂಲಕ ಸಿನ್ನರ್​ ರೋಚಕ ಜಯ ಗಳಿಸಿದರು.

ಇದನ್ನೂ ಓದಿ: ವಿಂಬಲ್ಡನ್ 2022: ಸೆರುಂಡೊಲೊ ಭೀತಿಯಿಂದ ನಡಾಲ್ ಬಚಾವ್​, ಎರಡನೇ ಸುತ್ತಿಗೆ ಲಗ್ಗೆ

"ಈ ಪಂದ್ಯದಲ್ಲಿ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಮುಂದಿನ ಪಂದ್ಯವನ್ನು ಆಡಲು ತುಂಬಾ ಉತ್ಸುಹಕನಾಗಿರುವೆ. ನನ್ನ ಎದುರಾಳಿ ಜೊಕೊವಿಕ್​ ವಿರುದ್ಧ ಉತ್ತಮ ಆಟ ಪ್ರದರ್ಶಿಸಬಹುದೆಂದು ತಿಳಿದಿದ್ದೇನೆ" ಎಂದು ಪಂದ್ಯ ಗೆದ್ದ ಬಳಿಕ ಸಿನ್ನರ್ ಪ್ರತಿಕ್ರಿಯಿಸಿದರು.

ಇದೇ ವೇಳೆ, ಸೆಂಟರ್ ಕೋರ್ಟ್‌ನ 100ನೇ ವರ್ಷದ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ 20 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿ ಗುರುತಿಸಲ್ಪಟ್ಟ ರೋಜರ್ ಫೆಡರರ್ ಭೇಟಿ ನೀಡಿದ್ದರು. ಲಂಡನ್‌ನ SW19 ನಲ್ಲಿ ಭದ್ರತಾ ಅಧಿಕಾರಿಗಳೊಂದಿಗೆ ರೋಜರ್ ಫೆಡರರ್ ಕಪ್ಪು ಸೂಟ್ ಧರಿಸಿಕೊಂಡು ಸ್ಟೈಲಿಶ್​ ಆಗಿ ಕಂಡುಬಂದರು. ಫೆಡರರ್ ಕಳೆದ ವರ್ಷ ವಿಂಬಲ್ಡನ್‌ ಟೆನಿಸ್ ಆಡಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಕಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.