ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ಆಲ್ ಇಂಗ್ಲೆಂಡ್ ಕ್ಲಬ್ ಖಂಡಿಸಿದ್ದು, ಈ ವರ್ಷದ ವಿಂಬಲ್ಡನ್ ಚಾಂಪಿಯನ್ಶಿಪ್ಗೆ ರಷ್ಯಾ ಮತ್ತು ಬೆಲಾರಸಿಯನ್ ಟೆನಿಸ್ ಆಟಗಾರರನ್ನು ಪ್ರತಿಷ್ಠಿತ ವಿಂಬಲ್ಡನ್ ಟೂರ್ನಮೆಂಟ್ನಿಂದ ನಿಷೇಧ ಹೇರಲಾಗಿದೆ. ಜೂನ್ 27ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ 2022ರ ಗ್ರ್ಯಾಂಡ್ ಸ್ಲಾಮ್ನಲ್ಲಿ ಈ ಎರಡೂ ರಾಷ್ಟ್ರಗಳ ಆಟಗಾರರು ಆಡುವುದು ಅಸಾಧ್ಯವಾಗಿದೆ.
ವಿಂಬಲ್ಡನ್ ಪ್ರಸ್ತುತ ಉಕ್ರೇನ್ನಲ್ಲಿ ಯುದ್ದ ಆರಂಭವಾದ ಮೇಲೆ ರಷ್ಯಾ ಮತ್ತು ಬೆಲಾರಸ್ನ ಆಟಗಾರರಿಗೆ ಸಂಪೂರ್ಣ ನಿಷೇಧ ಹೇರಿದ ಮೊದಲ ಟೂರ್ನಮೆಂಟ್ ಆಗಿದೆ. ಇದರರ್ಥ ವಿಶ್ವದ ನಂ.2 ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಕೂಡ ಗ್ರ್ಯಾಸ್ಕೋರ್ಟ್ ಟೂರ್ನಮೆಂಟ್ ಆಡುವ ಅವಕಾಶ ತಪ್ಪಿಸಿಕೊಳ್ಳಲಿದ್ದಾರೆ.
ರಷ್ಯಾ ಮತ್ತು ಬೆಲಾರಸ್ ಟಿನಿಸಿಗರನ್ನು ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್ ಎಟಿಪಿ ಮತ್ತು ಡಬ್ಲ್ಯೂಟಿಎ ಟೂರ್ನಿಗಳಲ್ಲಿ ತಮ್ಮ ರಾಷ್ಟ್ರಧ್ವಜವನ್ನು ತೋರಿಸದೆ ಮತ್ತು ರಾಷ್ಟ್ರೀಯ ಗೀತೆಯನ್ನು ಹಾಡದೆ ಸ್ಪರ್ಧಿಸಲು ಅವಕಾಶ ನೀಡಿದೆ. ಆದರೆ ವಿಂಬಲ್ಡನ್ ಇಂಗ್ಲೆಂಡ್ ಟಿನಿಸ್ ಫೆಡರೇಷನ್ ಆಯೋಜಿಸುತ್ತಿರುವುದರಿಂದ ಈ ರಾಷ್ಟ್ರಗಳ ಆಟಗಾರರನ್ನು ಸರ್ಕಾರದ ನಿರ್ದೇಶನದಂತೆ ನಿಷೇಧಿಸಿದೆ.
ಡೇನಿಯಲ್ ಮೆಡ್ವೆಡೆವ್ ಅಲ್ಲದೆ ಪುರುಷರ ನಂ. 8 ಆಂಡ್ರೆ ರುಬ್ಲೆವ್, 2021ರಲ್ಲಿ ವಿಂಬಲ್ಡನ್ ಸೆಮಿಫೈನಲಿಸ್ಟ್ ಆಗಿದ್ದ ಮತ್ತು WTA ಶ್ರೇಯಾಂಕದಲ್ಲಿ 4ನೇ ಶ್ರೇಯಾಂಕದಲ್ಲಿರುವ ಅರಿನಾ ಸಬಲೆಂಕಾ, ವಿಕ್ಟೋರಿಯಾ ಅಜರೆಂಕಾ, ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಮಾಜಿ ಮಹಿಳಾ ನಂ. 1 ಆಟಗಾರ್ತಿ ಅನಸ್ತಾಸಿಯಾ ಪಾವ್ಲ್‌ಯುಚೆಂಕೋವಾ ವಿಂಬಲ್ಡನ್ನಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ಸೋತವರ ನಡುವೆ ಕಾಳಗ: ಟೂರ್ನಿಯಲ್ಲಿ ಉಳಿದುಕೊಳ್ಳಲು ಇತ್ತಂಡಗಳಿಗೂ ಗೆಲುವು ಅನಿವಾರ್ಯ