ಹೈದರಾಬಾದ್ : 2020ರ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ವಿನೇಶ್ ಪೋಗಟ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ರಾಹುಲ್ ಅವರೆ ಮತ್ತು ಒಲಿಂಪಿಕ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಕುಸ್ತಿಪಟುವಾದ ದೀಪಕ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿ ಮತ್ತಿಬ್ಬರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಡಬ್ಲ್ಯೂಎಫ್ಐ(ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ) ನಾಮನಿರ್ದೇಶನ ಮಾಡಿದೆ.
2020ರ ಟೊಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದ ಏಕೈಕ ಮಹಿಳಾ ಕುಸ್ತಿಪಟುವಾಗಿರುವ ವಿನೇಶ್ ಪೋಗಟ್ ಸತತ 2ನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. 5 ಮಂದಿ ಅರ್ಜುನ ಪ್ರಶಸ್ತಿಗೂ ತಲಾ 4 ಮಂದಿಯ ಹೆಸರು ದ್ರೋಣಾಚಾರ್ಯ ಹಾಗೂ ಧ್ಯಾನ್ಚಂದ್ ಪ್ರಶಸ್ತಿಗೆ ಡಬ್ಲ್ಯೂಎಫ್ಐ ಶಿಫಾರಸು ಮಾಡಿದೆ.
ಪ್ರತಿವರ್ಷ ಕೇಂದ್ರ ಸರ್ಕಾರ ಈ ಪ್ರಶಸ್ತಿಗಳನ್ನು ನೀಡಲಿದೆ. ಖೇಲ್‌ರತ್ನ ಪ್ರಶಸ್ತಿಗೆ 7 ಲಕ್ಷ ರೂ. ನಗದು ಹಾಗೂ ಅರ್ಜುನ್ ಪ್ರಶಸ್ತಿಗೆ 5 ಲಕ್ಷ ರೂ. ದ್ರೋಣಾಚಾರ್ಯ ಪ್ರಶಸ್ತಿಗೆ 5 ಲಕ್ಷ ರೂ. ಹಾಗೂ ದ್ಯಾನ್ಚಂದ್ ಪ್ರಶಸ್ತಿಗೆ 5 ಲಕ್ಷ ರೂ. ಬಹುಮಾನ ಮೊತ್ತ ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಿದೆ.
ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕುಸ್ತಿಪಟುಗಳು
ರಾಜೀವ್ ಗಾಂಧಿ ಖೇಲ್ ರತ್ನ: ವಿನೇಶ್ ಪೋಗಟ್
ಅರ್ಜುನ್ ಪ್ರಶಸ್ತಿ : ದೀಪಕ್ ಪೂನಿಯಾ, ರಾಹುಲ್ ಅವರೆ, ಸಾಕ್ಷಿ ಮಲಿಕ್, ಸಂದೀಪ್ ತೋಮರ್, ನವೀನ್
ದ್ರೋಣಾಚಾರ್ಯ ಪ್ರಶಸ್ತಿ : ವೀರೇಂದರ್ ಕುಮಾರ್, ಕುಲ್ದೀಪ್ ಮಲಿಕ್, ಒಪಿ ಯಾದವ್, ಸುಜಿತ್ ಮನ್
ಧ್ಯಾನ್ಚಂದ್ ಪ್ರಶಸ್ತಿ : ಜೈಪ್ರಕಾಶ್, ಅನಿಲ್‌ಕುಮಾರ್, ದುಶ್ವಂತ್ ಶರ್ಮಾ, ಮುಖೇಶ್ ಖಾತ್ರಿ