ETV Bharat / sports

ಕೋವಿಡ್​ನಿಂದ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಒಲಿಂಪಿಕ್ ನಡೆಸುವುದಾಗಿ ಜಪಾನ್ ಪ್ರಧಾನಿ ಪ್ರತಿಜ್ಞೆ - ಒಲಿಂಪಿಕ್ ನಡೆಸುವುದಾಗಿ ಜಪಾನ್ ಪ್ರಧಾನಿ ಪ್ರತಿಜ್ಞೆ

ತುರ್ತು ಪರಿಸ್ಥಿತಿಯ ಹೊರತಾಗಿಯೂ ಟೋಕಿಯೋ ಒಲಿಂಪಿಕ್​ ಅನ್ನು ಈ ಬೇಸಿಗೆಯಲ್ಲಿ ನಡೆಸಲಾಗುವುದು ಎಂದು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಹೇಳಿದ್ದಾರೆ.

Japan declares state of emergency in Tokyo
ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ
author img

By

Published : Jan 8, 2021, 9:55 AM IST

ಟೋಕಿಯೊ: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರು ಈ ಬೇಸಿಗೆಯಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವ ಪ್ರತಿಜ್ಞೆ ಮಾಡಿದ್ದಾರೆ.

ಜಪಾನ್‌ನಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳು ಗುರುವಾರ ಮೊದಲ ಬಾರಿಗೆ 7,000 ದಾಟಿದೆ. ಅರ್ಧದಷ್ಟು ಪ್ರಕರಣಗಳು ಟೋಕಿಯೊದಲ್ಲಿ ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.

"ದೇಶಾದ್ಯಂತ ಕೋವಿಡ್-19 ವೇಗವಾಗಿ ಹರಡುವುದು ಜನರ ಜೀವನ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಆದ್ದರಿಂದ, ನಾನು ಈ ಮೂಲಕ ವೈರಸ್ ವಿರೋಧಿ ಕಾನೂನಿನ ಆಧಾರದ ಮೇಲೆ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತೇನೆ" ಎಂದು ಯೋಶಿಹಿಡೆ ಸುಗಾ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದಾಗ್ಯೂ, ವಿಶ್ವಾಸ ವ್ಯಕ್ತಪಡಿಸಿದ ಜಪಾನ್ ಪ್ರಧಾನಿ ತುರ್ತು ಪರಿಸ್ಥಿತಿಯ ಹೊರತಾಗಿಯೂ ಟೋಕಿಯೋ ಒಲಿಂಪಿಕ್ಸ್ ಅನ್ನು ಈ ಬೇಸಿಗೆಯಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ.

ಫೆಬ್ರವರಿ ಅಂತ್ಯದ ವೇಳೆಗೆ ವ್ಯಾಕ್ಸಿನೇಷನ್ ಪ್ರಾರಂಭಿಸಲು ಜಪಾನ್ ಸರ್ಕಾರ ಆಶಿಸುತ್ತಿದೆ ಎಂದು ಸುಗಾ ಹೇಳಿದ್ದಾರೆ. ಈ ವರ್ಷಕ್ಕೆ ಮುಂದೂಡಲ್ಪಟ್ಟ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಡೆಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೊ ಒಲಿಂಪಿಕ್ ಅನ್ನು ಕಳೆದ ವರ್ಷ ಮುಂದೂಡಲಾಗಿತ್ತು. 2021ರ ಜುಲೈ 23 ರಿಂದ ಆಗಸ್ಟ್ 8, ರವರೆಗೆ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದ್ದು, ಪ್ಯಾರಾಲಿಂಪಿಕ್ಸ್ ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.