ETV Bharat / sports

ಲೆಜೆಂಡ್ಸ್ ಆಫ್‌ ಚೆಸ್‌ ಟೂರ್ನಿ: 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ವಿಶ್ವನಾಥನ್​ ಆನಂದ್​ - ಆನ್​ಲೈನ್​ ಟೂರ್ನಿಯಲ್ಲಿ 9ನೇ ಸ್ಥಾನ ಪಡೆದ ಆನಂದ್​

ಇಂದು ನಡೆದ ಕೊನೆಯ ಸುತ್ತಿನ ಪಂದ್ಯದಲ್ಲಿ ಉಕ್ರೇನಿನ ವಾಸಿಲ್​ ಇವಾಂಚುಕ್​ ವಿರುದ್ಧ ಸೋಲು ಕಾಣುವ ಮೂಲಕ ವಿಶ್ವನಾಥನ್‌ ಆನಂದ್‌ ಟೂರ್ನಿಯಲ್ಲಿ 9ನೇ ಸ್ಥಾನ ಪಡೆದರು. ಹಂಗೇರಿಯಾದ ಪೀಟರ್​ ಲೇಕೊ ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

ವಿಶ್ವನಾಥನ್​ ಆನಂದ್​
ವಿಶ್ವನಾಥನ್​ ಆನಂದ್​
author img

By

Published : Jul 30, 2020, 4:58 PM IST

ನವದೆಹಲಿ: ಭಾರತದ ಗ್ರ್ಯಾಂಡ್​ ಮಾಸ್ಟರ್​ ವಿಶ್ವನಾಥನ್​ ಆನಂದ್​ 1,50,000 ಅಮೆರಿಕನ್ ಡಾಲರ್​ ಬಹುಮಾನ ಮೊತ್ತದ ಲೆಜೆಂಡ್ಸ್​ ಆಫ್​ ಚೆಸ್​ ಆನ್​ಲೈನ್​ ಟೂರ್ನಮೆಂಟ್​ನಲ್ಲಿ 8 ಸೋಲುಗಳೊಂದಿಗೆ ಟೂರ್ನಿಯಲ್ಲಿ 9ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದ್ದಾರೆ.

ವಿಶ್ವನಾಥನ್​ ಆನಂದ್​ ಮತ್ತು ಇವಾಂಚುಕ್ ನಾಲ್ಕು ಸುತ್ತಿನ ಗೇಮ್​ಗಳು ಡ್ರಾನಲ್ಲಿ ಅಂತ್ಯಗೊಂಡವು. ಕೊನೆಗೆ ಅರ್ಮಗೆಡ್ಡೊನ್ ​(ಟೈ ಬ್ರೇಕರ್​)ನಲ್ಲೂ ಡ್ರಾ ಆಗಿದ್ದರಿಂದ ಕಪ್ಪು ಕಾಯಿಗಳನ್ನು ನಡೆಸುವವರಿಗೆ ಇವಾಂಚುಕ್​ ಅವರನ್ನು ವಿಜಯಿ ಎಂದು ಘೋಷಿಸಲಾಯಿತು. ಅರ್ಮಗೆಡ್ಡೊನ್​ನಲ್ಲಿ ಬಿಳಿಕಾಯಿ ನಡೆಸುವವರಿಗೆ ಆಲೋಚಿಸಲು ಹೆಚ್ಚು ಕಾಲಾವಕಾಶ ನೀಡಲಾಗುತ್ತದೆ. ಆದರೆ ಪಂದ್ಯ ಡ್ರಾ ಆದರೆ ಕಪ್ಪು ಕಾಯಿ ನಡೆಸಿದವರೇ ವಿಜೇತರೆಂದು ನಿರ್ಧರಿಸಲಾಗುತ್ತದೆ.

ಈ ಮೂಲಕ 50 ವರ್ಷದ ಭಾರತದ ಚೆಸ್‌ ಮಾಂತ್ರಿಕ ಆನಂದ್,​ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 8 ಸೋಲು ಹಾಗೂ ಒಂದು ಗೆಲುವು ಸಹಿತ ಕೇವಲ 7 ಅಂಕಗಳೊಡನೆ 9ನೇ ಸ್ಥಾನ ಪಡೆದು ತಮ್ಮ ಅಭಿಯಾನ ಮುಗಿಸಿದರು.

ಜರ್ಮನಿಯ ಮ್ಯಾಗ್ನಸ್​ ಕಾರ್ಲ್ಸನ್​ (25 ಅಂಕ) ಮೊದಲ ಸ್ಥಾನ, ರಷ್ಯಾದ ಇಯಾನ್​ ನೆಪೊಮ್ನಿಯಾಚ್ಚಿ (20) 2ನೇ ಸ್ಥಾನ, ನೆದರ್ಲೆಂಡ್​ನ ಅನೀಸ್​ ಗಿರಿ (18) 3 ಹಾಗೂ ರಷ್ಯಾದ ಪೀಟರ್​ ಸ್ವಿಡ್ಲರ್ (14)​ 4 ನೇ ಸ್ಥಾನ ಪಡೆದು ಸೆಮಿಫೈನಲ್​ ಪ್ರವೇಶ ಪಡೆದಿದ್ದಾರೆ. ಟೂರ್ನಿಯಲ್ಲಿ 1 ಮತ್ತು 4 ಹಾಗೂ 2 ಮತ್ತು 3 ಸ್ಥಾನ ಪಡೆದವರ ಮಧ್ಯೆ ಸೆಮಿಫೈನಲ್​ ಕಾದಾಟ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.