ಪಟಿಯಾಲ: ಶಾಟ್‌ಪುಟ್‌ನಲ್ಲಿ ಏಷ್ಯಾ ದಾಖಲೆಯೊಂದಿಗೆ ತಜಿಂದರ್ ಸಿಂಗ್ ತೂರ್ 11ನೇ ಫೀಲ್ಡ್ ಆಥ್ಲೀಟ್ ಆಗಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಟಿಯಾಲದಲ್ಲಿ ನಡೆಯುತ್ತಿರುವ ಇಂಡಿಯನ್ ಗ್ರ್ಯಾನ್ ಪ್ರಿಕ್ಸ್ 4ರಲ್ಲಿ ತೂರ್ 21.49 ಮೀಟರ್ ಎಸೆಯುವ ಮೂಲಕ ತಮ್ಮ ಹೆಸರಿನಲ್ಲಿದ್ದ ಏಷ್ಯಾದ ಅತ್ಯುತ್ತಮ ದಾಖಲೆ ಬ್ರೇಕ್ ಮಾಡಿದ್ದಲ್ಲದೆ ಒಲಿಂಪಿಕ್ಸ್ಗೂ ಅರ್ಹತೆ ಪಡೆದುಕೊಂಡರು. ಈ ಹಿಂದೆ ಅವರು 2019ರಲ್ಲಿ 20.92 ಮೀ ಎಸೆದಿದ್ದರು. ಇದಲ್ಲದೇ ಒಲಿಂಪಿಕ್ಸ್ ಅರ್ಹತೆಗೆ 21.10 ಮೀಟರ್ಸ್ ನಿಗದಿ ಮಾಡಲಾಗಿದೆ.
ತೋರ್ ತಮ್ಮ ಮೊದಲ ಅವಕಾಶದಲ್ಲಿ 21.49 ಮೀಟರ್ ದೂರ ಎಸೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ನಂತರದ 3 ಅವಕಾಶಗಳಲ್ಲಿ ಕ್ರಮವಾಗಿ 21.28, 21.13, 21.13 ದೂರ ಎಸೆದರು.
ಮಹಿಳೆಯರ ಡಿಸ್ಕಸ್ ಥ್ರೋದಲ್ಲಿ ಕಮಲ್‌ಪ್ರೀತ್ ಕೌರ್ 66.59 ಮೀಟರ್ಸ್ ದೂರ ಎಸೆದು ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು. ಈಗಾಗಲೇ ಒಲಿಂಪಿಕ್ಸ್ ಅರ್ಹತೆ ಪಡೆದಿರುವ ಅವರು ರಿಯೋ ಒಲಿಂಪಿಕ್ಸ್ನಲ್ಲಿ ಕಂಚು ಸಾಧನೆ ಮಾಡಿದ್ದ ಅಥ್ಲೀಟ್ಗಿಂತ ಹೆಚ್ಚು ದೂರ ಎಸೆದಿರುವುದರಿಂದ ಭಾರತ ಈ ವರ್ಷ ಫೀಲ್ಡ್ ಟ್ರ್ಯಾಕ್ ವಿಭಾಗದಲ್ಲಿ ಮತ್ತೊಂದು ಪದಕದ ನಿರೀಕ್ಷೆ ಇಡುವಂತೆ ಮಾಡಿದೆ.
ಇದನ್ನು ಓದಿ:ಡಿಸ್ಕಸ್ ಥ್ರೋನಲ್ಲಿ ರಾಷ್ಟ್ರೀಯ ದಾಖಲೆ ಬರೆದ ಕಮಲ್‌ಪ್ರೀತ್ ಕೌರ್ : ಒಲಿಂಪಿಕ್ಸ್ ಪದಕದ ಭರವಸೆ