ಹೈದರಾಬಾದ್: ಚೀನಾದಲ್ಲಿ ಕಾಣಿಸಿಕೊಂಡು ಇಡೀ ಜಗತ್ತಿಗೆ ಹಬ್ಬಿರುವ ಕೊರೋನಾ ವೈರಸ್ ಸೋಂಕು ಸಾವಿರಾರು ಜನರನ್ನು ಬಲಿಪಡೆದಿದ್ದು, ಇದೀಗ ಜಗತ್ತಿನ ಅತಿದೊಡ್ಡ ಕ್ರೀಡಾಕೂಟಕ್ಕೂ ತಲೆ ನೋವು ತಂದಿದೆ.
-
Tokyo Olympics 2020 would be canceled and not postponed or moved, if the #Coronavirus is not under control by late May, reports The Associated Press quoting Senior International Olympic Committee member
— ANI (@ANI) February 26, 2020 " class="align-text-top noRightClick twitterSection" data="
">Tokyo Olympics 2020 would be canceled and not postponed or moved, if the #Coronavirus is not under control by late May, reports The Associated Press quoting Senior International Olympic Committee member
— ANI (@ANI) February 26, 2020Tokyo Olympics 2020 would be canceled and not postponed or moved, if the #Coronavirus is not under control by late May, reports The Associated Press quoting Senior International Olympic Committee member
— ANI (@ANI) February 26, 2020
2020ರ ಟೋಕಿಯೋ ಒಲಿಂಪಿಕ್ಸ್ಗೆ ಕೊರೋನಾ ಸೋಂಕಿನ ಭೀತಿ ಶುರುವಾಗಿದ್ದು, ಕ್ರೀಡಾಕೂಟ ರದ್ದಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಹಿರಿಯ ಸದಸ್ಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೇ ತಿಂಗಳೊಳಗಾಗಿ ಕೊರೋನಾ ಸೋಂಕು ಹತೋಟಿಗೆ ಬಾರದಿದ್ದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ರದ್ದಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೊರೋನಾ ಭೀತಿಯಿಂದ ಕ್ರೀಡಾಪಟುಗಳಿಗೆ ಆಯೋಜಿಸಿದ್ದ ತರಬೇತಿಯನ್ನೂ ಮುಂದೂಡಲಾಗಿದೆ.
'ಕ್ರೀಡಾಕೂಟದ ಸಮಯ ಹತ್ತಿರವಾಗುತ್ತಿದ್ದಂತೆ ಊಟ, ವಸತಿ, ತರಬೇತಿ ಒಲಿಂಪಿಕ್ ಗ್ರಾಮ, ಭದ್ರತೆ ಸೇರಿದಂತೆ ಹಲವಾರು ಸಿದ್ಧತೆಗಳು ನಡೆಯಬೇಕಿದೆ. ಹೀಗಾಗಿ ಈ ಸೋಂಕು ಹತೋಟಿಗೆ ಬಾರದಿದ್ದಲ್ಲಿ ಕ್ರೀಡಾಕೂಟ ರದ್ದಾಗಲಿದೆ' ಎಂದಿದ್ದಾರೆ.