ETV Bharat / sports

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಈ ಬಾರಿ ದಾಖಲೆಯ ಪದಕ ಗೆಲ್ಲಲಿದೆ : ದೀಪಾ ಮಲಿಕ್​ - ಭಾರತೀಯ ಪ್ಯಾರಾ ಕ್ರೀಡಾಪಟು

ಈ ವರ್ಷ ನಾವು ಕಳೆದ ಆವೃತ್ತಿಯಲ್ಲಿ ತೆರಳಿದ್ದ ಕ್ರೀಡಾಪಟುಗಳ ಮೂರರಷ್ಟು ಹೆಚ್ಚು ಮಂದಿಯನ್ನು ಕಳುಹಿಸಿದ್ದೇವೆ. 2016-21ರ 4-5 ವರ್ಷಗಳಲ್ಲಿ ಹೆಚ್ಚುವರಿ 4 ಆಟಗಳನ್ನು ಸೇರಿಸಿದ್ದೇವೆ. ಎರಡು ವರ್ಷಗಳ ಕೋವಿಡ್​ ಸಾಂಕ್ರಾಮಿಕ ರೋಗದ ಸಮಯದ ಹೊರತಾಗಿಯೂ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ..

Deepa Malik
ಭಾರತ ಪ್ಯಾರಾಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆ ದೀಪಾ ಮಲಿಕ್
author img

By

Published : Aug 23, 2021, 5:56 PM IST

ನವದೆಹಲಿ : ಟೋಕಿಯೊದಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯ ಪ್ಯಾರಾ ಕ್ರೀಡಾಪಟುಗಳು ದಾಖಲೆಯ ಪದಕಗಳನ್ನು ತಂದು ಕೊಡಲಿದ್ದಾರೆ ಎಂದು ಭಾರತ ಪ್ಯಾರಾಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆ ದೀಪಾ ಮಲಿಕ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಈ ಬಾರಿ ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಶೂಟಿಂಗ್, ಸ್ವಿಮ್ಮಿಂಗ್, ಪವರ್​ಲಿಫ್ಟಿಂಗ್, ಟೇಬಲ್ ಟೆನಿಸ್​ ಮತ್ತು ಟೇಕ್ವಾಂಡೋ ಸೇರಿದಂತೆ 9 ಕ್ರೀಡೆಗಳಿಂದ ಒಟ್ಟು 54 ಕ್ರೀಡಾಪಟುಗಳನ್ನು ಕಳುಹಿಸಿದೆ.

ನನ್ನ ನಿರೀಕ್ಷೆಗಳು ಈಗಾಗಲೇ ನಾನು ನಿರೀಕ್ಷಿಸಿದ್ದನ್ನು(ಕ್ರೀಡಾಪಟುಗಳ ಸಂಖ್ಯೆ) ಮೀರಿವೆ. ಈ ವರ್ಷ ಭಾರತ ತನ್ನ ಅತ್ಯಂತ ದೊಡ್ಡ ಬಳಗವನ್ನು ಟೋಕಿಯೊ ಪ್ಯಾರಾಲಿಂಪಿಕ್ಸ್​ಗೆ ಕಳುಹಿಸಿದೆ. ಈ ಬಾರಿ ನಾವು ಇತಿಹಾಸ ನಿರ್ಮಿಸಲಿದ್ದೇವೆ ಎಂದು ನನಗೆ ವಿಶ್ವಾಸವಿದೆ ಎಂದು ಮಲಿಕ್ ತಿಳಿಸಿದ್ದಾರೆ.

ಈ ವರ್ಷ ನಾವು ಕಳೆದ ಆವೃತ್ತಿಯಲ್ಲಿ ತೆರಳಿದ್ದ ಕ್ರೀಡಾಪಟುಗಳ ಮೂರರಷ್ಟು ಹೆಚ್ಚು ಮಂದಿಯನ್ನು ಕಳುಹಿಸಿದ್ದೇವೆ. 2016-21ರ 4-5 ವರ್ಷಗಳಲ್ಲಿ ಹೆಚ್ಚುವರಿ 4 ಆಟಗಳನ್ನು ಸೇರಿಸಿದ್ದೇವೆ. ಎರಡು ವರ್ಷಗಳ ಕೋವಿಡ್​ ಸಾಂಕ್ರಾಮಿಕ ರೋಗದ ಸಮಯದ ಹೊರತಾಗಿಯೂ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

2016ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ 4 ಪದಕಗಳೊಂದಿಗೆ ಹಿಂತಿರುಗಿತ್ತು. ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿತ್ತು. ಈ ಬಾರಿಯೂ ಚಿನ್ನ ಗೆದ್ದ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸ್ವತಃ ದೀಪಾ ಮಲಿಕ್ ಶಾಟ್​ಪುಟ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಇದನ್ನು ಓದಿ:ಪ್ಯಾರಾಲಿಂಪಿಕ್ಸ್​ನಲ್ಲಿ ಕನ್ನಡಿಗ ಸೇರಿದಂತೆ ಭಾರತಕ್ಕೆ ಪದಕ ತಂದುಕೊಟ್ಟಿರುವ ವಿಜೇತರ ವಿವರ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.