ಅಬುಧಾಬಿ : ಭಾರತದ ಪ್ರಸಿದ್ಧ ಈಜುಗಾರ ಕನ್ನಡಿಗ ಶ್ರೀಹರಿ ನಟರಾಜ್ 50 ಮೀಟರ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಆದರೆ, FINA ಶಾರ್ಟ್ ಕೋರ್ಸ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
20 ವರ್ಷದ ಬೆಂಗಳೂರಿನ ನಟರಾಜ್, ಪುರುಷರ 50 ಮೀಟರ್ ಬ್ಯಾಕ್ಸ್ಟ್ರೋಕ್ಲ್ಲಿ 24.40 ಸೆಕೆಂಡ್ಗಳಲ್ಲಿ ಗುರಿ ತಲುಪಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಆದರೆ, 26ನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ಸ್ ಪ್ರವೇಶಿಸುವಲ್ಲಿ ವಿಫಲರಾದರು.
2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸ್ವಿಮ್ಮಿಂಗ್ನಲ್ಲಿ ಅವಕಾಶ ಪಡೆದ ಎರಡನೇ ಸ್ವಿಮ್ಮರ್ ಎನಿಸಿಕೊಂಡಿದ್ದ ಶ್ರೀಹರಿ ನಟರಾಜ್, ಇದೇ ಕೂಟದಲ್ಲಿ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲೂ ತಮ್ಮ ದಾಖಲೆ ಉತ್ತಮ ಪಡಿಸಿಕೊಂಡಿದ್ದರು. ಆರಂಭದ ದಿನ 100 ಮೀಟರ್ನ ಅವರು 52.81 ಸೆಕೆಂಡ್ಗಳಲ್ಲಿ ತಲುಪಿದ್ದರು.