ನವದೆಹಲಿ : ಇತ್ತೀಚೆಗೆ ಪೋಲೆಂಡ್ನಲ್ಲಿ ನಡೆದ ಕಿರಿಯರ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಯುವ ಆರ್ಚರ್ಗಳನ್ನು ಮಂಗಳವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿ ಅಭಿನಂದನೆ ಸಲ್ಲಿದ್ದಾರೆ.
ಪೋಲೆಂಡ್ ರಾಜಧಾನಿ ರೋಕ್ಲಾದಲ್ಲಿ ನಡೆದ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 8 ಚಿನ್ನ, 2 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 15 ಪದಕ ಬಾಚಿತ್ತು. ತಳಮಟ್ಟದಿಂದಲೇ ದೇಶದಲ್ಲಿ ಪ್ರತಿಭೆಗಳ ಅನ್ವೇಷಣೆಗೆ ಕಾರಣವಾದ ಖೇಲೋ ಇಂಡಿಯಾ ಯೋಜನೆಗೆ ಕಾರಣರಾದ ಪಿಎಂ ನರೇಂದ್ರ ಮೋದಿಗೆ ಇದೇ ಸಂದರ್ಭದಲ್ಲಿ ಠಾಕೂರ್ ಧನ್ಯವಾದ ತಿಳಿಸಿದರು.
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಅಡಿಯಲ್ಲಿ ಖೇಲೋ ಇಂಡಿಯಾದಂತಹ ಯೋಜನೆಯಿಂದ ತಳಮಟ್ಟದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಜೊತೆಗೆ ಅವರನ್ನು ಅಭಿವೃದ್ಧಿಪಡಿಸುತ್ತಿರುವ ಉಪಕ್ರಮಗಳು ಈ ರೀತಿಯ ಚಾಂಪಿಯನ್‌ಶಿಪ್‌ನಲ್ಲಿ ಫಲಿತಾಂಶಗಳನ್ನು ತೋರಿಸುತ್ತಿವೆ "ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ನಮ್ಮ ಯುವಕರು ಎಲ್ಲಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿರುವುದು ನಮಗೆ ಹೆಚ್ಚಿನ ಭರವಸೆ ನೀಡುತ್ತಿದೆ ಎಂದಿರುವ ಅವರು, ಪೋಲೆಂಡ್ನಲ್ಲಿ ಪದಕ ಗೆದ್ದಂತಹ ಈ ಎಲ್ಲಾ ಯುವ ಆರ್ಚರ್ಗಳನ್ನು ಅಭಿನಂದಿಸುತ್ತೇನೆ ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಸುತ್ತೇನೆ.
ಅಲ್ಲದೆ ಇವರೆಲ್ಲರೂ ಹಿರಿಯರ ತಂಡಕ್ಕೆ ಪರಿವರ್ತನೆಯಾಗುತ್ತಿದ್ದಂತೆ, ಅವರು ಕಾರ್ಯಕ್ಷಮತೆಯ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದ್ದೇವೆ "ಎಂದು ಠಾಕೂರ್ ತಿಳಿಸಿದ್ದಾರೆ.
ಇದನ್ನು ಓದಿ:ಒಲಿಂಪಿಕ್ಸ್ ನಂತರ ಏಷ್ಯನ್ ಗೇಮ್ಸ್ ಪದಕದ ಮೇಲೆ ಕಣ್ಣಿಟ್ಟ ಮೀರಾಬಾಯಿ