ನವದೆಹಲಿ: ಟೆನಿಸ್ ಅಂಗಳಕ್ಕೆ ಇತ್ತೀಚೆಗಷ್ಟೇ ವಿದಾಯ ಹೇಳಿದ 20 ಗ್ರಾಂಡ್ಸ್ಲ್ಯಾಮ್ಗಳ ಒಡೆಯ ರೋಜರ್ ಫೆಡರರ್ ಬಗ್ಗೆ ಭಾರತದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು, ಟೆನಿಸ್ ದಂತಕಥೆ ರೋಜರ್ ಇದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ರೋಜರ್ ಫೆಡರರ್ ಅವರ ಸಾಧನೆ, ಒಡನಾಟ, ಭೇಟಿಯನ್ನು ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ನೆನೆದಿದ್ದಾರೆ. ಇದನ್ನು ಎಟಿಪಿ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ವಿಡಿಯೋದ ಆರಂಭದಲ್ಲಿ ರೋಜರ್ಗೆ ಅಭಿನಂದಿಸುವ ಮೂಲಕ ಮಾತು ಶುರುಮಾಡುವ ಕೊಹ್ಲಿ, ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುವೆ ಎಂದಿದ್ದಾರೆ.
-
Thank you for all the incredible memories, Roger 💫 @rogerfederer | #RForever | @imVkohli pic.twitter.com/VjPtVp9aq6
— ATP Tour (@atptour) September 29, 2022 " class="align-text-top noRightClick twitterSection" data="
">Thank you for all the incredible memories, Roger 💫 @rogerfederer | #RForever | @imVkohli pic.twitter.com/VjPtVp9aq6
— ATP Tour (@atptour) September 29, 2022Thank you for all the incredible memories, Roger 💫 @rogerfederer | #RForever | @imVkohli pic.twitter.com/VjPtVp9aq6
— ATP Tour (@atptour) September 29, 2022
2018 ರಲ್ಲಿ ಆಸ್ಟ್ರೇಲಿಯನ್ ಓಪನ್ ವೇಳೆ ರೋಜರ್ ಭೇಟಿಯಾದ ಬಗ್ಗೆ ಹೇಳಿಕೊಂಡಿದ್ದು, ಇದು ಎಂದಿಗೂ ಮರೆಯಲಾಗದ ದಿನ. ಟೆನಿಸ್ ಜಗತ್ತಿನ ಅಪ್ರತಿಮ ಪ್ರತಿಭೆ ನೀವು. ಅಂಗಳದಲ್ಲಿ ಮಾತ್ರವಲ್ಲ ಹೊರಗೂ ನೀವು ಸರಳ ಜೀವಿ ಎಂಬುದನ್ನು ನಿಮ್ಮ ಸ್ನೇಹ ಬಳಗವೇ ಹೇಳುತ್ತದೆ. ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುವಿನ ಜೀವನದ ಮುಂದಿನ ಹಂತವು ಅಂಗಳದಲ್ಲಿ ಸಿಕ್ಕ ಯಶಸ್ಸಿಗಿಂತಲೂ ದುಪ್ಪಟ್ಟಾಗಲಿ ಎಂದು ಕೋರಿದ್ದಾರೆ.
ವಿರಾಟ್ಗೆ ಥ್ಯಾಂಕ್ಸ್ ಹೇಳಿದ ರೋಜರ್: ವಿರಾಟ್ ಕೊಹ್ಲಿಯ ಅಭಿನಂದನೆ ವಿಡಿಯೋಗೆ ರೋಜರ್ ಫೆಡರರ್ ಧನ್ಯವಾದ ಹೇಳಿದ್ದಾರೆ. ಇದರ ತುಣುಕನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಫೆಡರರ್, "ಧನ್ಯವಾದಗಳು ವಿರಾಟ್ ಕೊಹ್ಲಿ. ಶೀಘ್ರದಲ್ಲೇ ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಸ್ವಿಸ್ ಟೆನಿಸ್ ದಂತಕಥೆಯಾದ ರೋಜರ್ ಸೆಪ್ಟೆಂಬರ್ 15 ರಂದು ಸ್ಪರ್ಧಾತ್ಮಕ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಲೇವರ್ ಕಪ್ನಲ್ಲಿ ದೈತ್ಯ ಎದುರಾಳಿ ರಾಫೆಲ್ ನಡಾಲ್ ಜೊತೆ ಮೊದಲ ಪಂದ್ಯದಲ್ಲಿ ಸೆಣಸಾಡಿ ಸೋಲುವ ಮೂಲಕ ಅಂತಿಮ ವಿದಾಯ ಹೇಳಿದರು.
ವಿದಾಯ ಪಂದ್ಯದ ಬಳಿಕ ಫೆಡರರ್ ಮತ್ತು ರಾಫೆಲ್ ನಡಾಲ್ ಕಣ್ಣೀರು ಹಾಕಿದ್ದು, ಟೆನಿಸ್ ಜಗತ್ತಿನ ಗಮನ ಸೆಳೆದಿತ್ತು. ಇದರ ವಿಡಿಯೋವನ್ನು ಹಂಚಿಕೊಂಡಿದ್ದ ಕೊಹ್ಲಿ, ಇದು ಕ್ರೀಡಾ ಸೊಬಗು ಎಂದು ವರ್ಣಿಸಿದ್ದರು.
ವೃತ್ತಿಜೀವನದಲ್ಲಿ 1251 ಪಂದ್ಯಗಳನ್ನಾಡಿರುವ ರೋಜರ್, 103 ಎಟಿಪಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇನ್ನು 20 ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದು, ಇದರಲ್ಲಿ 8 ವಿಂಬಲ್ಡನ್ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಇದು ಈವರೆಗಿನ ದಾಖಲೆಯಾಗಿದೆ.
ಓದಿ: ಗೆಳತಿ ಜೊತೆ ಡೇಟಿಂಗ್ಗಾಗಿ 300 ರೂ ಕೇಳಿದ ಅಭಿಮಾನಿ.. 500 ರೂ ಗೂಗಲ್ ಪೇ ಮಾಡಿದ ಅಮಿತ್ ಮಿಶ್ರಾ