ETV Bharat / sports

ಬೆಳ್ಳಿ ತೃಪ್ತಿ ತಂದಿಲ್ಲ, ದೇಶ ಹೆಮ್ಮೆ ಪಡುವಂತೆ ಚಿನ್ನ ಗೆಲ್ಲಲು ಭವಿಷ್ಯದಲ್ಲಿ ಪ್ರಯತ್ನಿಸುತ್ತೇನೆ: ರವಿ ದಹಿಯಾ - ಕುಸ್ತಿಯಲ್ಲಿ 2ನೇ ಬೆಳ್ಳಿ ಪದಕ

ರಷ್ಯಾದ ಜೌರ್ ಉಗೆವ್​ ವಿರುದ್ಧ ರೋಚಕ ಹೋರಾಟದಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿರುವ ಭಾರತದ ರವಿಕುಮಾರ್ ದಹಿಯಾ ಚಿನ್ನದ ಪದಕ ಗೆಲ್ಲಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ರವಿಕುಮಾರ್ ದಹಿಯಾ
ರವಿಕುಮಾರ್ ದಹಿಯಾ
author img

By

Published : Aug 5, 2021, 9:42 PM IST

ಟೋಕಿಯೋ: ಕುಸ್ತಿಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿರುವ ರವಿ ಕುಮಾರ್ ದಹಿಯಾ ತಮ್ಮ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ಇದು ತಮಗೆ ತೃಪ್ತಿ ಕೊಟ್ಟಿಲ್ಲ, ಖಂಡಿತಾ ಮುಂದಿನ ಬಾರಿ ದೇಶ ಗರ್ವ ಪಡುವಂತೆ ಚಿನ್ನ ಗೆಲ್ಲಲು ಪ್ರಯತ್ನಿಸುವೆ ಎಂದು ತಿಳಿಸಿದ್ದಾರೆ.

ಗುರುವಾರ 57ಕೆಜಿ ವಿಭಾಗದಲ್ಲಿ ರಿವಿ ಕುಮಾರ್ ದಹಿಯಾ ರಷ್ಯನ್ ಒಲಿಂಪಿಕ್ ಸಮಿತಿಯ ಜೌರ್​ ಉಗೆವ್​ ವಿರುದ್ಧ 4-7ರ ಅಂತರದಲ್ಲಿ ರೋಚಕ ಸೋಲು ಕಂಡರು. ಆದರೆ ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ 5ನೇ ಪದಕ ಖಚಿತ ಪಡಿಸಿದರು. ಇದಲ್ಲದೇ ಒಟ್ಟಾರೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದ 2ನೇ ಕುಸ್ತಿಪಟು ಎನಿಸಿಕೊಂಡರು. ಈ ಹಿಂದೆ 2012ರಲ್ಲಿ ಸುಶೀಲ್ ಕುಮಾರ್​ ಲಂಡನ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು.

" ನನಗಾಗಿ ಪ್ರಾರ್ಥಿಸಿದ ದೇಶಕ ಜನತೆಗೆ, ನನ್ನ ಯಶಸ್ಸಿಗೆ ಬೆಂಬಲವಾಗಿ ನಿಂತ ಕುಸ್ತಿ ಫೆಡರೇಷನ್ ಮತ್ತು ನನ್ನ ಕೋಚ್​ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬೆಳ್ಳಿ ಪದಕ ಗೆದ್ದಿರುವುದು ನನಗೆ ಸಂತೋಷವೇನೋ ಇದೆ. ಆದರೆ, ಇದರಿಂದ ನನಗೆ ತೃಪ್ತಿಯಾಗಿಲ್ಲ. ನಾನು ಚಿನ್ನ ಗೆಲ್ಲಬೇಕೆಂದು ಗುರಿ ಹೊಂದಿದ್ದೆ. ಆದರೆ, ಮುಂದೆ ಉತ್ತಮ ಪ್ರದರ್ಶನ ತೋರಿ, ದೇಶ ಹೆಮ್ಮೆ ಪಡುವಂತೆ ಮಾಡುತ್ತೇನೆ " ಎಂದು ಕುಸ್ತಿಪಟು ರವಿ ಕುಮಾರ್ ದಹಿಯಾ ಪಂದ್ಯ ಗೆದ್ದ ನಂತರ ಹೇಳಿದ್ದಾರೆ.

ಇದನ್ನು ಓದಿ:Tokyo Olympics: ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.