ಭುವನೇಶ್ವರ(ಒಡಿಶಾ): ಬಹುಭಾಷಾ ನಟ ಮಾಧವನ್ ಪುತ್ರ ವೇದಾಂತ್ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆಯುವುದರ ಜೊತೆಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಕೇವಲ 16:01.73 ಸೆಕೆಂಡ್ನಲ್ಲಿ ಗುರಿ ಮುಟ್ಟಿದ್ದು, ಈ ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ.
ಈ ಹಿಂದೆ 2017ರಲ್ಲಿ 16:06.43 ಸೆಕೆಂಡ್ಗಳಲ್ಲಿ ವೇದಾಂತ್ ಈ ಗುರಿ ತಲುಪಿದ್ದರು. ಆದರೆ, ಇದೀಗ ಆ ದಾಖಲೆ ಬ್ರೇಕ್ ಮಾಡಿದ್ದಾರೆ. ಮಹಾರಾಷ್ಟ್ರದ ಕ್ರೀಡಾಪಟುವಾಗಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವೇದಾಂತ್ ಕರ್ನಾಟಕದ ಅಮೋಘ್ ಆನಂದ್ ಹಾಗೂ ಪಶ್ಚಿಮ ಬಂಗಾಳದ ಶುಭೋಜಿತ್ ಗುಪ್ತಾ ಅವನ್ನ ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ಅಮೋಘ ಕಂಚಿನ ಪದಕ ಹಾಗೂ ಪಶ್ಚಿಮ ಬಂಗಾಳದ ಶುಭೋಜಿತ್ ಬೆಳ್ಳಿ ಪದಕ ಗೆದ್ದರು.
-
Never say never . 🙏🙏🙏❤️❤️🤗🤗 National Junior Record for 1500m freestyle broken. ❤️❤️🙏🙏@VedaantMadhavan pic.twitter.com/Vx6R2PDfwc
— Ranganathan Madhavan (@ActorMadhavan) July 17, 2022 " class="align-text-top noRightClick twitterSection" data="
">Never say never . 🙏🙏🙏❤️❤️🤗🤗 National Junior Record for 1500m freestyle broken. ❤️❤️🙏🙏@VedaantMadhavan pic.twitter.com/Vx6R2PDfwc
— Ranganathan Madhavan (@ActorMadhavan) July 17, 2022Never say never . 🙏🙏🙏❤️❤️🤗🤗 National Junior Record for 1500m freestyle broken. ❤️❤️🙏🙏@VedaantMadhavan pic.twitter.com/Vx6R2PDfwc
— Ranganathan Madhavan (@ActorMadhavan) July 17, 2022
ಇನ್ನೂ 2021ರ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಜೂನಿಯರ್ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದ ವೇದಾಂತ್ 800 ಮೀಟರ್ ಫ್ರೀಸ್ಟೈಲ್, 1500 ಮೀ ಫ್ರೀಸ್ಟೈಲ್, 4X100 ಫ್ರೀಸ್ಟೈಲ್ ರಿಲೇ, 4X200 ಫ್ರೀಸ್ಟೈಲ್ ರಿಲೇ ಮತ್ತು 100, 200, 400 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಪಾಲ್ಗೊಂಡು 7 ಪದಕ ಗೆದ್ದಿದ್ದರು. ಈ ಸ್ಪರ್ಧೆಯಲ್ಲಿ ಕರ್ನಾಟಕ ಒಟ್ಟು 31 ಪದಕ ಗೆದ್ದು ಅಗ್ರಸ್ಥಾನದಲ್ಲಿದ್ದು, 17 ಪದಕ ಗೆದ್ದ ಮಹಾರಾಷ್ಟ್ರ ಎರಡನೇ ಸ್ಥಾನ ಹಾಗೂ 8 ಪದಕಗಳೊಂದಿಗೆ ತೆಲಂಗಾಣ ಮೂರನೇ ಸ್ಥಾನದಲ್ಲಿದೆ.
ಮಗನ ಸಾಧನೆಗೆ ತಂದೆ ಹೆಮ್ಮೆ: ಪುತ್ರ ವೇದಾಂತ್ ಸಾಧನೆಗೆ ನಟ ಆರ್ ಮಾಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಪ್ರದರ್ಶನದ ವಿಡಿಯೋ ಸಹ ಹಂಚಿಕೊಂಡಿದ್ದಾರೆ. ಈ ಮೂಲಕ ಪುತ್ರನ ಸಾಧನೆ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.