ಸಿಂಗಾಪುರ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ 21-9, 11-21, 21-15 ಸೆಟ್ಗಳಿಂದ ಚೀನಾದ ವಾಂಗ್ ಝಿ ಯಿ ವಿರುದ್ಧ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ಮೂಲಕ ಮೊದಲ ಬಾರಿಗೆ ಸೂಪರ್ 500 ಟ್ರೋಫಿ ಜಯಿಸುವಲ್ಲಿ ಸಫಲರಾದರು. ಅಲ್ಲದೇ, ಈ ವರ್ಷದ ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಟ್ರೋಫಿ, ಸ್ವಿಸ್ ಓಪನ್ ಪ್ರಶಸ್ತಿ ಜಯಿಸಿದ್ದ ಸಿಂಧು ಇದೀಗ ಸಿಂಗಾಪುರ ಓಪನ್ ಮೂಲಕ 3ನೇ ಪ್ರಶಸ್ತಿಗೆ ಮುತ್ತಿಟ್ಟರು.
-
All Hail the CHAMPION!! @Pvsindhu1 🇮🇳 ✨#Sindhu 🇮🇳 clinches her 1️⃣st ever #SingaporeOpen title! 🏆 after putting a brilliant performance in the deciding 3rd game 21-9, 11-21, 21-15 to defeat #WangZhi 🇨🇳
— SAI Media (@Media_SAI) July 17, 2022 " class="align-text-top noRightClick twitterSection" data="
Absolutely amazing 💯 for Sindhu as this marks her 3️⃣rd Title in 2022🤩 pic.twitter.com/n97YElTGPO
">All Hail the CHAMPION!! @Pvsindhu1 🇮🇳 ✨#Sindhu 🇮🇳 clinches her 1️⃣st ever #SingaporeOpen title! 🏆 after putting a brilliant performance in the deciding 3rd game 21-9, 11-21, 21-15 to defeat #WangZhi 🇨🇳
— SAI Media (@Media_SAI) July 17, 2022
Absolutely amazing 💯 for Sindhu as this marks her 3️⃣rd Title in 2022🤩 pic.twitter.com/n97YElTGPOAll Hail the CHAMPION!! @Pvsindhu1 🇮🇳 ✨#Sindhu 🇮🇳 clinches her 1️⃣st ever #SingaporeOpen title! 🏆 after putting a brilliant performance in the deciding 3rd game 21-9, 11-21, 21-15 to defeat #WangZhi 🇨🇳
— SAI Media (@Media_SAI) July 17, 2022
Absolutely amazing 💯 for Sindhu as this marks her 3️⃣rd Title in 2022🤩 pic.twitter.com/n97YElTGPO
ಮೊದಲ ಗೇಮ್ನಲ್ಲಿ ಆಕ್ರಮಣಕಾರಿ ಆಟವಾಡಿದ ಸಿಂಧು 21-9 ರಲ್ಲಿ ಗೆಲುವು ಪಡೆದರು. ಬಳಿಕ 2ನೇ ಸೆಟ್ನಲ್ಲಿ ಭಾರತೀಯ ಆಟಗಾರ್ತಿಗೆ ಸವಾಲೊಡ್ಡಿದ ವಾಂಗ್ ಝಿ ಯಿ 21-11 ರಲ್ಲಿ ವಶಪಡಿಸಿಕೊಂಡರು. 3ನೇ ಮತ್ತು ನಿರ್ಣಾಯಕ ಗೇಮ್ನಲ್ಲಿ ಎಚ್ಚರಿಕೆಯಿಂದ ಆಟವಾಡಿದ ಸಿಂಧು ಚೀನಾ ಆಟಗಾರ್ತಿಯನ್ನು 21-15 ರಲ್ಲಿ ಸೋಲಿಸಿ ಪ್ರಶಸ್ತಿಯನ್ನು ಜಯಿಸಿದರು. ಈ ಪಂದ್ಯ 1 ಗಂಟೆ 2 ನಿಮಿಷಗಳ ಕಾಲ ನಡೆಯಿತು.
ಸೈನಾ ಬಳಿಕ ಸಾಧನೆ: ಚೊಚ್ಚಲ ಬಾರಿಗೆ ಸಿಂಗಾಪುರ ಓಪನ್ ಗೆದ್ದ ಪಿ.ವಿ.ಸಿಂಧು, ಪ್ರಶಸ್ತಿ ಗೆದ್ದ ಭಾರತದ 2ನೇ ಮಹಿಳಾ ಶಟ್ಲರ್ ಆಗಿದ್ದಾರೆ. ಇದಕ್ಕೂ ಮೊದಲು ಹಿರಿಯ ಶಟ್ಲರ್ ಸೈನಾ ನೆಹ್ವಾಲ್ 2010 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. ಪುರುಷರ ವಿಭಾಗದಲ್ಲಿ ಸಾಯಿ ಪ್ರಣೀತ್ 2017 ರಲ್ಲಿ ಚಾಂಪಿಯನ್ ಆಗಿದ್ದರು.
ಕಾಮನ್ವೆಲ್ತ್ ಚಿನ್ನದ ಗುರಿ: ಈ ವರ್ಷ ಮೂರು ಪ್ರಶಸ್ತಿ ಗೆಲ್ಲುವ ಮೂಲಕ ಅದ್ಭುತ ಲಯದಲ್ಲಿರುವ ಭಾರತದ ತಾರಾ ಶಟ್ಲರ್ ಮುಂದೆ ನಡೆಯವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದಾರೆ.
ಇದನ್ನೂ ಓದಿ: ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಬೆಳ್ಳಿಗೆದ್ದ ಬೆಣ್ಣೆ ನಗರಿಯ ಅರ್ಜುನ್ ಹಲಕುರ್ಕಿ