ETV Bharat / sports

ಪ್ರೋ ಕಬ್ಬಡ್ಡಿ ಸೀಸನ್​ 8: ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್​​ - ಬೆಂಗಳೂರು ಬುಲ್ಸ್ ಯೂ ಮುಂಬಾ ಪಂದ್ಯ

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಯೂ ಮುಂಬಾ ಮೊದಲಾರ್ಧದಲ್ಲೇ ಬೆಂಗಳೂರು ತಂಡವನ್ನು 1 ಬಾರಿ ಆಲೌಟ್​ ಮಾಡಿ 24-17 ರಲ್ಲಿ ಮುನ್ನಡೆ ಕಾಪಾಡಿಕೊಂಡಿತು. ಆದರೆ, ದ್ವಿತೀಯಾರ್ಧದಲ್ಲಿ ಪವನ್​ ಆಕ್ರಮಣಕಾರಿ ಆಟ ತೋರಿಸಿ ಅಂತಿಮವಾಗಿ 46-30ಕ್ಕೆ ತಂದು ನಿಲ್ಲಿಸಿದರು.

ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್​​

author img

By

Published : Dec 22, 2021, 8:42 PM IST

ಬೆಂಗಳೂರು: ಇಂದಿನಿಂದ ಪ್ರೋ ಕಬ್ಬಡ್ಡಿ 8ನೇ ಸೀಸನ್​ ಆರಂಭಗೊಂಡಿದೆ. ಇಂದು ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಮತ್ತು ಯೂ ಮುಂಬಾ ತಂಡಗಳು ಅಖಾಡಕ್ಕಿಳಿದಿದ್ದವು. ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ 46-30 ಅಂತರದಿಂದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನ ಆರಂಭಿಸಿದೆ.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಯೂ ಮುಂಬಾ ಮೊದಲಾರ್ಧದಲ್ಲೇ ಬೆಂಗಳೂರು ತಂಡವನ್ನು 1 ಬಾರಿ ಆಲೌಟ್​ ಮಾಡಿ 24-17 ರಲ್ಲಿ ಮುನ್ನಡೆ ಕಾಪಾಡಿಕೊಂಡಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಪವನ್​ ಆಕ್ರಮಣ ಆಟ ತೋರಿ ಅಂತಿಮವಾಗಿ 46-30 ಅಂಕಗಳಿಗೆ ತಂದು ನಿಲ್ಲಿಸಿದರು.

ಎಂದಿನಂತೆ ಏಕಾಂಗಿ ಹೋರಾಟ ನಡೆಸಿದ ಪವನ್​ಗೆ ಬೆಂಗಳೂರು ಬುಲ್ಸ್​ ತಂಡದಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಅದ್ಭುತ ರೈಡಿಂಗ್​ ನಡೆಸಿದ ಪವನ್​ 12 ಅಂಕಗಳಿಸಿದರು. ಇನ್ನೂ ​ಚಂದ್ರನ್ ರಂಜಿತ್ 12 ಅಂಕ ಗಳಿಸಿದರು. ಇನ್ನು, ಯೂ ಮುಂಬಾ ಪರ ಉತ್ತಮ ಆಟ ಪ್ರದರ್ಶನ ತೋರಿದ ರೈಡರ್​ ಅಭಿಷೇಕ್​ ಸಿಂಗ್​ 16 ಅಂಕ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.