ಬೆಂಗಳೂರು : 2021-22ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಡಿಸೆಂಬರ್ 22 ರಿಂದ ಆರಂಭಗೊಳ್ಳಲಿದ್ದು, ಇಡೀ ಟೂರ್ನಮೆಂಟ್ ಬೆಂಗಳೂರಿನಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ. 8ನೇ ಆವೃತ್ತಿಯ ಟೂರ್ನಮೆಂಟ್ನಲ್ಲಿ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಸೆಣಸಾಡಲಿವೆ.
ರೂಪಾಂತರಿ ಕೊರೊನಾ ವೈರಸ್ ಭೀತಿ ಇರುವುದರಿಂದ ಈ ಬಾರಿ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ. ಸಂಪೂರ್ಣ ಟೂರ್ನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯಲಿದೆ. ರಾಜ್ಯ ಸರ್ಕಾರದ ಕೋವಿಡ್ ನಿಯಮಾವಳಿ, ಮಾರ್ಗಸೂಚಿಗಳ ಅಡಿ ಟೂರ್ನಮೆಂಟ್ ನಡೆಯಲಿದೆ. ಈ ಟೂರ್ನಮೆಂಟ್ಗೆ ಅಗತ್ಯವಾಗಿರುವ ಎಲ್ಲ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ ಎಂದು ಪ್ರೊ ಕಬಡ್ಡಿ ಟೂರ್ನಿ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಹೇಳಿದೆ.
-
🚨#vivoProKabaddiIsBack 🚨
— ProKabaddi (@ProKabaddi) December 1, 2021 " class="align-text-top noRightClick twitterSection" data="
Save the dates for the first half of #vivoProKabaddi Season 8 🗓️@Vivo_India #Fixtures pic.twitter.com/atozdVijIj
">🚨#vivoProKabaddiIsBack 🚨
— ProKabaddi (@ProKabaddi) December 1, 2021
Save the dates for the first half of #vivoProKabaddi Season 8 🗓️@Vivo_India #Fixtures pic.twitter.com/atozdVijIj🚨#vivoProKabaddiIsBack 🚨
— ProKabaddi (@ProKabaddi) December 1, 2021
Save the dates for the first half of #vivoProKabaddi Season 8 🗓️@Vivo_India #Fixtures pic.twitter.com/atozdVijIj
ಜನವರಿ 22ರವರೆಗಿನ ಲೀಗ್ನ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಮೊದಲ ನಾಲ್ಕು ದಿನ ತಲಾ ಮೂರು ಪಂದ್ಯಗಳು ನಡೆಯಲಿವೆ. ನಂತರ ಪ್ರತಿ ಶನಿವಾರ ಮಾತ್ರ 3 ಪಂದ್ಯಗಳು ನಡೆಯಲಿವೆ. 7:30, 8:30 ಮತ್ತು 9:30ಗೆ ಮೂರು ಪಂದ್ಯಗಳಿರುವ ದಿನ ನೇರ ಪ್ರಸಾರ ಇರಲಿದೆ. 2 ಪಂದ್ಯಗಳಿದ್ದರೆ 7:30 ಮತ್ತು8:30ಕ್ಕೆ ನಡೆಯಲಿದೆ.
ಮಾರ್ಷಲ್ ಸ್ಪೋರ್ಟ್ಸ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲಾರ್ಧದ ವೇಳಾಪಟ್ಟಿ(Schedule) ಪ್ರಕಟಿಸಿದೆ. ನಾವೆಲ್ಲ ಡಬಲ್ ಹೆಡರ್ ಪಂದ್ಯ ಸಾಮಾನ್ಯಾಗಿ ನೋಡಿದ್ದೇವೆ. ಈ ಬಾರಿ ಟ್ರಿಪಲ್ ಹೆಡರ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಆರಂಂಭಿಕ ನಾಲ್ಕು ದಿನಗಳು ಪ್ರತಿ ದಿನ ಮೂರು ಮೂರು ಪಂದ್ಯಗಳು ನಡೆಯಲಿದೆ. ಬಳಿಕ ಪ್ರತಿ ಶನಿವಾರ ತ್ರಿಪಲ್ ಪಂಗಾ ಪಂದ್ಯ ಆಯೋಜಿಸಲಾಗಿದೆ.
ಇದನ್ನೂ ಓದಿ:ರಿಟೈನ್ನಲ್ಲಿ ಕೋಟ್ಯಧಿಪತಿಗಳಾದ ಟಾಪ್ 5 ಕ್ರಿಕೆಟಿಗರು ಇವರೇ ನೋಡಿ