ETV Bharat / sports

ಪಿಕೆಎಲ್ 8: ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಬುಲ್ಸ್​ಗೆ ಇಂದು ಗುಜರಾತ್ ಜೈಂಟ್ಸ್​ ಎದುರಾಳಿ - ಬೆಂಗಳೂರು ಬುಲ್ಸ್​ vs ಗುಜರಾತ್ ಲಯನ್ಸ್

ಸೋಮವಾರ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್​ ವಿರುದ್ಧ ಯುಪಿ ಯೋಧ ಕಣಕ್ಕಿಳಿಯಲಿದೆ. ಯೋಧ 68 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದ್ದರೆ, ಪಲ್ಟನ್ಸ್​ 66 ಅಂಕ ಪಡೆದು ಕೊನೆಯ ಸ್ಥಾನಿಯಾಗಿ ಪ್ಲೇ ಆಫ್​ ಪ್ರವೇಶಿಸಿದೆ.

Gujarat Giants take Bengaluru Bulls
ಗುಜರಾತ್ ಜೈಂಟ್ಸ್​ vs ಬೆಂಗಳೂರು ಬುಲ್ಸ್
author img

By

Published : Feb 21, 2022, 4:17 PM IST

ಬೆಂಗಳೂರು: ಸೆಮಿಫೈನಲ್​ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್​ ಇಂದು ನಡೆಯುವ 2ನೇ ಎಲಿಮಿನೇಟರ್​ನಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ ಕಣಕ್ಕಿಳಿಯುತ್ತಿದೆ. ಟೂರ್ನಿಯಲ್ಲಿ ಅಮೋಘ ಆರಂಭ ಪಡೆದಿದ್ದ ಬೆಂಗಳೂರು ಬುಲ್ಸ್​ 22 ಪಂದ್ಯಗಳಿಂದ 11 ಗೆಲುವು 9 ಸೋಲು ಮತ್ತು 2 ಟೈ ಸಾಧಿಸಿ ಒಟ್ಟು 66 ಅಂಕ ಪಡೆದುಕೊಂಡು 5ನೇ ಸ್ಥಾನದಲ್ಲಿದ್ದರೆ, ಎದುರಾಳಿ ಗುಜರಾತ್​ 22 ಪಂದ್ಯಗಳನ್ನಾಡಿ 10 ಗೆಲುವು, 8 ಸೋಲು ಮತ್ತು 4 ಟೈ ಸಾಧಿಸಿ ಒಟ್ಟು 67 ಅಂಕ ಪಡೆದು 4ನೇ ಸ್ಥಾನ ಪಡೆದುಕೊಂಡಿದೆ.

ಲೀಗ್​ನಲಲ್ಲಿನ 2 ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ ಒಂದು ಜಯ ಮತ್ತು ಸೋಲು ಕಂಡಿವೆ. ಮೊದಲ ಮುಖಾಮುಖಿಯಲ್ಲಿ ಬುಲ್ಸ್​ 46-37ರಲ್ಲಿ ಜಯ ಸಾಧಿಸಿದರೆ, 2ನೇ ಮುಖಾಮುಖಿಯಲ್ಲಿ ಜೈಂಟ್ಸ್​ 40-36ರಲ್ಲಿ ಗೆಲುವಿನ ನಗೆ ಬೀರಿತ್ತು.

ಬೆಂಗಳೂರು ಪರ ನಾಯಕ ಪವನ್​ ಶೆರಾವತ್ ಅದ್ಭುತ ಫಾರ್ಮ್​ನಲ್ಲಿದ್ದು, ಟೂರ್ನಿಯಲ್ಲಿ 289 ಅಂಕ ಪಡೆದಯ ಅತಿ ಹೆಚ್ಚು ಅಂಕ ಪಡೆದ ಆಟಗಾರರಾಗಿದ್ದಾರೆ. ಇವರಿಗೆ ಸಾಥ್​ ನೀಡುತ್ತಿರುವ ಯುವ ರೈಡರ್​ ಭರತ್​ 119 ಅಂಕ ಪಡೆದಿದ್ದಾರೆ. ಇನ್ನು ಡಿಫೆಂಡಿಗ್​ನಲ್ಲಿ ಗರಿಷ್ಠ ಅಂಕ ಪಡೆದ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಸೌರಭ್ ನಂಡಲ್(66) ​ ಮತ್ತು ಕಳೆದ ಪಂದ್ಯದಲ್ಲಿ ಮಿಂಚಿದ ಅಮನ್(47)​ ತಂಡದ ಬಲವಾಗಿದ್ದಾರೆ.

ಇತ್ತ ಗುಜರಾತ್​ ಲಯನ್ಸ್​ನಲ್ಲಿ ಅನುಭವಿ ಪರ್ವೇಶ್​ ಬೈನ್​ಸ್ವಾಲ್, ಗಿರೀಶ್​ ಎರ್ನಾಕ್​ ನಾಯಕ ಸುನೀಲ್ ಕುಮಾರ್ ತಂಡದ ಡಿಫೆಂಡಿಂಗ್ ಬಲವಾಗಿದ್ದರೆ, ರಾಕೇಶ್​, ರಾಕೇಶ್ ನರ್ವಾಲ್, ಅಜಯ್​ ಮತ್ತು ಪರ್​ದೀಪ್ ಕುಮಾರ್​ ಸ್ಟಾರ್​ ರೈಡರ್​ಗಳಾಗಿದ್ದಾರೆ.

ಸೋಮವಾರ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್​ ವಿರುದ್ಧ ಯುಪಿ ಯೋಧ ಕಣಕ್ಕಿಳಿಯಲಿದೆ. ಯೋಧ 68 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದ್ದರೆ, ಪಲ್ಟನ್ಸ್​ 66 ಅಂಕ ಪಡೆದು ಕೊನೆಯ ಸ್ಥಾನಿಯಾಗಿ ಪ್ಲೇ ಆಫ್​ ಪ್ರವೇಶಿಸಿದೆ.

ಇನ್ನು ಮೊದಲ ಎರಡು ಸ್ಥಾನಗಳನ್ನು ಪಡೆದಿರುವ ಪಾಟ್ನಾ ಪೈರೇಟ್ಸ್(86)​ ಮತ್ತು ದಬಾಂಗ್​ ಡೆಲ್ಲಿ(75) ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ. ಫೆಬ್ರವರಿ 23ರಂದು ಮೊದಲ ಎಲಿಮಿನೇಟರ್​ ಪಂದ್ಯ ಗೆದ್ದ ತಂಡ ಪಾಟ್ನಾವನ್ನು 2ನೇ ಎಲಿಮಿನೇಟರ್​ ಪಂದ್ಯ ಗೆದ್ದ ತಂಡ ಡೆಲ್ಲಿಯನ್ನು ಎದುರಿಸಲಿದೆ. ಫೆ.25ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಏರ್​ಥಿಂಗ್ಸ್​ ಮಾಸ್ಟರ್ಸ್​ ಚೆಸ್​ : ವಿಶ್ವ ನಂ.1 ಮ್ಯಾಗ್ನಸ್​ ಕಾರ್ಲಸನ್​ರನ್ನು ಮಣಿಸಿದ ಭಾರತದ 16ರ ಪೋರ ಪ್ರಗ್ನಾನಂದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.