ಬೆಂಗಳೂರು: ಗುಜರಾತ್ ಜೈಂಟ್ಸ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 49 - 29ರ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿ ಪ್ರೊ ಕಬಡ್ಡಿ ಲೀಗ್ನಲ್ಲಿ ಸತತ 3ನೇ ಬಾರಿ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪ್ರವೇಶಿಸುವ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಬುಲ್ಸ್ ಸಂಪೂರ್ಣ ತಂಡವಾಗಿ ಅತ್ಯುತ್ತಮ ಪ್ರದರ್ಶನ ತೋರಿತು. ಮೊದಲಾರ್ಧದ ಕೆಲವು ನಿಮಿಷಗಳಲ್ಲಿ ಚಂದ್ರನ್ ರಂಜಿತ್ ಉತ್ತಮ ರೈಡಿಂಗ್ ಮಾಡಿ ಅಂಕಗಳನ್ನು ಕಲೆ ಹಾಕಿದರೆ, ನಂತರ ದಾಳಿಗಿಳಿದ ಪವನ್ ಗುಜರಾತ್ ಡಿಫೆಂಡರ್ಗಳನ್ನು ಧ್ವಂಸಗೊಳಿಸಿದರು. ಕೊನೆಯ ನಿಮಿಷಗಳಲ್ಲಿ ರೈಡಿಂಗ್ ಮಾಡಿದ ಯುವ ರೈಡರ್ ಭರತ್ ಕೂಡ 6 ಅಂಕಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲಾರ್ಧದಲ್ಲಿ 24-17ರಲ್ಲಿ ಮುನ್ನಡೆ ಪಡೆದುಕೊಂಡಿತ್ತು. ತಂಡದಲ್ಲಿ ಕೇವಲ 3 ಆಟಗಾರರು ಉಳಿದುಕೊಂಡಿದ್ದರು. ಆದರೆ, ಆಲೌಟ್ ಬಿಟ್ಟಕೊಡದ ಬುಲ್ಸ್ ಸತತವಾಗಿ 2 ಸೂಪರ್ ಟ್ಯಾಕಲ್ಗಳನ್ನು ಮಾಡುವಲ್ಲಿ ಮಹೇಂದರ್ ಸಿಂಗ್ ಯಶಸ್ವಿಯಾದರು. ದ್ವಿತೀಯಾರ್ಧದ ಆರಂಭದಲ್ಲಿ 2ನೇ ಬಾರಿಗೆ ಗುಜರಾತ್ ಜೈಂಟ್ಸ್ ಆಲೌಟ್ ಮಾಡುವಲ್ಲಿ ಪವನ್ ಪಡೆ ಸಫಲವಾಯಿತು.
-
Hi-Flyer & co. have taken the last 💺 in the semi-finals and how! 😎#GGvBLR #SuperhitPanga #VIVOProKabaddi pic.twitter.com/OMnoMe1DSB
— ProKabaddi (@ProKabaddi) February 21, 2022 " class="align-text-top noRightClick twitterSection" data="
">Hi-Flyer & co. have taken the last 💺 in the semi-finals and how! 😎#GGvBLR #SuperhitPanga #VIVOProKabaddi pic.twitter.com/OMnoMe1DSB
— ProKabaddi (@ProKabaddi) February 21, 2022Hi-Flyer & co. have taken the last 💺 in the semi-finals and how! 😎#GGvBLR #SuperhitPanga #VIVOProKabaddi pic.twitter.com/OMnoMe1DSB
— ProKabaddi (@ProKabaddi) February 21, 2022
ಕೊನೆಯ 10 ನಿಮಿಷಗಳ ಆಟದ ವೇಳೆ 14 ಅಂಕಗಳ ಮುನ್ನಡೆ ಪಡೆದುಕೊಂಡಿದ್ದ ಬೆಂಗಳೂರು ಬುಲ್ಸ್ ಜಾಣ್ಮೆಯ ಆಟ ಪ್ರದರ್ಶಿಸಿ ಸಮಯ ವ್ಯರ್ಥ ಮಾಡಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಅದಾಗಿಯೂ ಕೊನೆಯ ನಿಮಿಷದಲ್ಲಿ 3ನೇ ಬಾರಿ ಜೈಂಟ್ಸ್ ತಂಡವನ್ನು ಆಲೌಟ್ ಮಾಡಿ 20 ಅಂಕಗಳಿಂದ ಗೆದ್ದು ಬೀಗಿತು. ಪವನ್ ಶೆರಾವತ್ 13, ಚಂದ್ರನ್ ರಂಜಿತ್ 7, ಭರತ್ 6 ಅಂಕ ಪಡೆದರೆ, ಡಿಫೆಂಡರ್ಗಳಾದ ಮಹೇಂದರ್ ಸಿಂಗ್ 5, ಸೌರಭ್ ನಂಡಲ್ 4 ಮತ್ತು ಅಮನ್ 4 ಅಂಕ ಪಡೆದು ಮಿಂಚಿದರು.
ಜೈಂಟ್ಸ್ ಪರ ರಾಕೇಶ್ 8, ಮಹೇಂದರ್ ರಜಪೂತ್ 5, ಪರ್ವೇಶ್ 3, ಸುನಿಲ್ ಕುಮಾರ್ 2, ಅಜಯ್ ಕುಮಾರ್ 2 ಅಂಕ ಪಡೆದರು. ಪವನ್ ಶೆರಾವತ್ ಬಳಗ ಸೆಮಿಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ. ಲೀಗ್ನಲ್ಲಿನ 2 ಮುಖಾಮುಖಿಯಲ್ಲಿ ಮೊದಲ ಪಂದ್ಯದಲ್ಲಿ 61-22ರಲ್ಲಿ ಗೆದ್ದರೆ, 2ನೇ ಪಂದ್ಯದಲ್ಲಿ 36-36 ರಲ್ಲಿ ಸಮಬಲ ಸಾಧಿಸಿತ್ತು.
ಇದನ್ನೂ ಓದಿ:ಎಲಿಮಿನೇಟರ್ ಪಂದ್ಯದಲ್ಲಿ ಪರ್ದೀಪ್ ಅಬ್ಬರ: ಪುಣೇರಿ ಪಲ್ಟನ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಯುಪಿ ಯೋಧ