ಬೆಂಗಳೂರು: ಪುಣೇರಿ ಪಲ್ಟನ್ಸ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡ 40-29ರಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಆರಂಭದಲ್ಲಿ ಸ್ವಲ್ಪಮಟ್ಟಿಗೆ ಪರದಾಡಿದ ಬೆಂಗಳೂರು ತಂಡ ಮೊದಲಿಗೆ ಆಲೌಟ್ ಆಗಿದ್ದಲ್ಲದೆ ಮೊದಲಾರ್ಧದಲ್ಲಿ 13-18ರ ಅಂತರದಿಂದ ಹಿನ್ನಡೆಗೆ ಒಳಗಾಯಿತು. ಆದರೆ ದ್ವಿತೀಯಾರ್ಧದಲ್ಲಿ ಆರ್ಭಟಿಸಿದ ಬುಲ್ಸ್ ಎರಡು ಬಾರಿ ಪುಣೆ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಕೊನೆಯ ಐದು ನಿಮಿಷವಿರುವಾಗಲೇ 10 ಅಂಕ ಲೀಡ್ ಪಡೆದುಕೊಂಡಿದ್ದ ಪವನ್ ಪಡೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಅಂತರವನ್ನು ಕೊನೆಯ ಸೆಕೆಂಡ್ವರೆಗೂ ಕಾಪಾಡಿಕೊಂಡಿತು. ಕೊನೆಗೆ 11 ಅಂಕಗಳ ಅಂತರದಿಂದ ಗೆದ್ದು ಅಗ್ರಸ್ಥಾನಕ್ಕೇರಿತು.
-
Haar ke jeetne wale ko humare yahaan @BengaluruBulls kehte hai! 😎
— ProKabaddi (@ProKabaddi) January 2, 2022 " class="align-text-top noRightClick twitterSection" data="
Bengaluru Bulls script a brilliant comeback to win against Puneri Paltan! 💥#PUNvBLR #SuperhitPanga #vivoProKabaddi pic.twitter.com/tGiwgsw9p2
">Haar ke jeetne wale ko humare yahaan @BengaluruBulls kehte hai! 😎
— ProKabaddi (@ProKabaddi) January 2, 2022
Bengaluru Bulls script a brilliant comeback to win against Puneri Paltan! 💥#PUNvBLR #SuperhitPanga #vivoProKabaddi pic.twitter.com/tGiwgsw9p2Haar ke jeetne wale ko humare yahaan @BengaluruBulls kehte hai! 😎
— ProKabaddi (@ProKabaddi) January 2, 2022
Bengaluru Bulls script a brilliant comeback to win against Puneri Paltan! 💥#PUNvBLR #SuperhitPanga #vivoProKabaddi pic.twitter.com/tGiwgsw9p2
ಪವನ್ ಶೆರಾವತ್ 11, ಚಂದ್ರನ್ ರಂಜಿತ್ 6 ಮತ್ತು ಭರತ್ 5 ರೈಡಿಂಗ್ ಅಂಕ ಪಡೆದರೆ, ಸೌರಭ್ ನಂಡಲ್ 4, ಅಮನ್ 3(4) ಮತ್ತು ಮೋಹಿತ್ ಶೆರಾವತ್ 3 ಟ್ಯಾಕಲ್ ಅಂಕ ಗಿಟ್ಟಿಸಿಕೊಂಡರು.
ಪುಣೆ ಪರ ಅಸ್ಲಾಮ್ ಇನಾಮ್ದಾರ್ 6, ಮೋಹಿತ್ ಗೋಯಟ್ 6, ಪವನ್ ಕುಮಾರ್ ಕಡಿಯಾನ್ 5 ರೈಡಿಂಗ್ ಅಂಕ, ವಿಶಾಲ್ ಭಾರದ್ವಜ್ 4 , ಅಬಿನೇಶ್ ನಡರಾಜನ್ ಮತ್ತು ಬಲ್ದೇವ್ ಸಿಂಗ್ ತಲಾ 2 ಟ್ಯಾಕಲ್ ಅಂಕ ಪಡೆದರು.
ಈ ಗೆಲುವಿನ ಮೂಲಕ ಬೆಂಗಳೂರು ಬುಲ್ಸ್ 6 ಪಂದ್ಯಗಳಲ್ಲಿ 4 ಜಯ ,ತಲಾ ಒಂದು ಗೆಲುವು ಮತ್ತು ಟೈ ನೆರವಿನಿಂದ 23 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.
ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಗುಜರಾತ್ ಲಯನ್ಸ್ ವಿರುದ್ಧ 38-36 ರೋಚಕ ಕದನದಲ್ಲಿ ಗೆದ್ದು ಬೀಗಿತು.
ಇದನ್ನೂ ಓದಿ:2024ರ ಪ್ಯಾರಿಸ್ ಒಲಿಂಪಿಕ್ಸ್ವರೆಗೆ ನೀರಜ್ ಚೋಪ್ರಾಗೆ ಬಾರ್ಟೊನೀಜ್ ಕೋಚ್: AFI