ETV Bharat / sports

ಲಾಕ್​​​ಡೌನ್​​ನಲ್ಲಿ ಹಸೆಮಣೆ ಏರಿದ ಕನ್ನಡ ನಟ, ಚಿನ್ನದ ಪದಕ ವಿಜೇತ ಪ್ಯಾರಾ ಸ್ವಿಮ್ಮರ್ ..! - Para swimmer Vishwas got married

ಚಿಕ್ಕ ವಯಸ್ಸಿನಲ್ಲೇ ತಮ್ಮ ಎರಡೂ ಕೈಗಳನ್ನೂ ಕಳೆದುಕೊಂಡು ಛಲ ಬಿಡದೆ ಸ್ವಿಮ್ಮಿಂಗ್​​​​ನಲ್ಲಿ ಸಾಧನೆ ಮಾಡಿರುವ ಪ್ಯಾರಾ ಸಿಮ್ಮರ್ ಕೆ.ಎಸ್. ವಿಶ್ವಾಸ್,​​ ಮೇ 10 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿಶ್ವಾಸ್ 'ಅರಬ್ಬೀ' ಎಂಬ ಕನ್ನಡ ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ.

Para swimmer Vishwas got married in lock down
ಲಾಕ್​​​ಡೌನ್​​ನಲ್ಲಿ ಹಸೆಮಣೆ ಏರಿದ ಪ್ಯಾರಾ ಸ್ವಿಮ್ಮರ್
author img

By

Published : May 26, 2020, 11:10 PM IST

ಕೊರೊನಾ ಲಾಕ್​ಡೌನ್​​​​ ನಡುವೆ ಸಾಕಷ್ಟು ಸೆಲಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ಧಾರೆ. ಅದೇ ರೀತಿ ಲಾಕ್​​​​​​​ಡೌನ್ ವೇಳೆ ವಿಶೇಷ ವ್ಯಕ್ತಿಯೊಬ್ಬರು ಸರಳವಾಗಿ ಸಪ್ತಪದಿ ತುಳಿದಿದ್ದು ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Para swimmer Vishwas got married in lock down
ಲಾಕ್​​​ಡೌನ್​​ನಲ್ಲಿ ಹಸೆಮಣೆ ಏರಿದ ಪ್ಯಾರಾ ಸ್ವಿಮ್ಮರ್

ಪ್ಯಾರಾ ಸ್ವಿಮ್ಮಿಂಗ್​​​ನಲ್ಲಿ ದೇಶ ವಿದೇಶ ಮಟ್ಟದಲ್ಲಿ ಹಲವು ಚಿನ್ನದ ಪದಕಗಳನ್ನು ಬಾಚಿ ದೇಶಕ್ಕೆ ಕೀರ್ತಿ ತಂದ ಕನ್ನಡಿಗ ಪ್ಯಾರಾ ಸ್ವಿಮ್ಮರ್ ವಿಶ್ವಾಸ್, ಮೇ 10 ರಂದು ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿಹಸೆಮಣೆ ಏರಿದ್ದಾರೆ‌. ಆದರೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವಾಸ್ ಬಹುಮುಖ ಪ್ರತಿಭೆ. ಕ್ರೀಡೆ, ಶಿಕ್ಷಣ ಮಾತ್ರವಲ್ಲ ಸಿನಿಮಾದಲ್ಲೂ ವಿಶ್ವಾಸ್ ನಟಿಸುತ್ತಿದ್ದಾರೆ. 'ಅರಬ್ಬೀ' ಎಂಬ ಚಿತ್ರದಲ್ಲಿ ವಿಶ್ವಾಸ್​ ನಾಯಕನಾಗಿ ನಟಿಸುತ್ತಿದ್ದು ಚೈತ್ರಾ ರಾವ್ ಇವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ವಿಶ್ವಾಸ್ ನಿಜಜೀವನದ ಕಥೆ ಹೊಂದಿದೆ. ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ವರ್ಷದ ಅಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

ವಿಶ್ವಾಸ್ 10 ವರ್ಷದವರಿರುವಾಗಲೇ ಹೈ ಟೆನ್ಷನ್ ವೈರ್ ಮೇಲೆ ಬಿದ್ದು ಎರಡೂ ಕೈಗಳನ್ನೂ ಕಳೆದುಕೊಂಡಿದ್ದಾರೆ. ಎರಡು ತಿಂಗಳ ಕಾಲ ಅವರು ಕೋಮಾದಲ್ಲಿದ್ದರು. ಆದರೆ ಆತ್ಮವಿಶ್ವಾಸದಿಂದ ವಿಶ್ವಾಸ್​ ಗುಣಮುಖರಾದರು. ಏನಾದರೂ ಸಾಧಿಸಬೇಕೆಂದು ಹಠ ಸಾಧಿಸಿ ಈಜು ಕಲಿತು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಕೂಡಾ ಗೆದ್ದರು.

ವಿಶ್ವಾಸ್ ಅವರ ವೈವಾಹಿಕ ಜೀವನ ಸುಖಮಯವಾಗಿರಲಿ. ಅವರು ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸೋಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.