ETV Bharat / sports

Olympics: ಸಿಂಗಲ್ಸ್​ ಟೇಬಲ್​ ಟೆನಿಸ್​ನಲ್ಲಿ ಶುಭಾರಂಭ ಮಾಡಿದ ಸುತಿರ್ಥ, ಮನಿಕಾ

ಶನಿವಾರ ಮಧ್ಯಾಹ್ನ ಟೋಕಿಯಾ ಮೆಟ್ರೋಪಾಲಿಟನ್ ಜಿಮ್​ನಲ್ಲಿ ನಡೆದ ಪಂದ್ಯದಲ್ಲಿ ಮುಖರ್ಜಿ ಸ್ವೀಡನ್​ನ ಲಿಂಡಾ ಬರ್ಗ್​ಸ್ಟೋರ್ಮ್ ವಿರುದ್ಧ 4-3ರ ಗೇಮ್​ಗಳ ಅಂತರದಿಂದ ಗೆಲುವು ಸಾಧಿಸಿದರು. ಮುಖರ್ಜಿ 5-11, 11-9, 11-13, 9-11, 11-3, 11-9, 11-5 ಗೇಮ್ಸ್​ಗಳ ಅಂತರದಿಂದ ಗೆಲುವು ಸಾಧಿಸಿದರು.

Paddler Sutirtha Mukherjee wins thriller
ಸುತೀರ್ಥ ಮುಖರ್ಜಿ
author img

By

Published : Jul 24, 2021, 5:00 PM IST

ಟೋಕಿಯೋ: ಭಾರತದ ಟೇಬಲ್​ ಟೆನಿಸ್​ ಆಟಗಾರ್ತಿಯರಾದ ಸುತೀರ್ಥ ಮುಖರ್ಜಿ ಮತ್ತು ಮನಿಕಾ ಬಾತ್ರಾ ಟೋಕಿಯೋ ಒಲಿಂಪಿಕ್ಸ್​ನ ಮಹಿಳೆಯರ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.

ಶನಿವಾರ ಮಧ್ಯಾಹ್ನ ಟೋಕಿಯಾ ಮೆಟ್ರೋಪಾಲಿಟನ್ ಜಿಮ್​ನಲ್ಲಿ ನಡೆದ ಪಂದ್ಯದಲ್ಲಿ ಮುಖರ್ಜಿ ಸ್ವೀಡನ್​ನ ಲಿಂಡಾ ಬರ್ಗ್​ಸ್ಟೋರ್ಮ್ ವಿರುದ್ಧ 4-3ರ ಗೇಮ್​ಗಳ ಅಂತರದಿಂದ ಗೆಲುವು ಸಾಧಿಸಿದರು. ಮುಖರ್ಜಿ 5-11, 11-9, 11-13, 9-11, 11-3, 11-9, 11-5 ಗೇಮ್ಸ್​ಗಳ ಅಂತರದಿಂದ ಗೆಲುವು ಸಾಧಿಸಿದರು.

ಮೊದಲ ಗೇಮ್​ನಲ್ಲಿ ಸುಲಭವಾಗಿ ಸೋಲುಕಂಡ ಮುಖರ್ಜಿ 2ನೇ ಗೇಮ್​ ಗೆದ್ದು 1-1ರಲ್ಲಿ ಸಮಬಲ ಸಾಧಿಸಿದರು. ಆದರೆ, ಸ್ವೀಡನ್​ ಆಟಗಾರ್ತಿ 3 ಮತ್ತು 4ನೇ ಗೇಮ್​ ಗೆದ್ದು 3-1ರಲ್ಲಿ ಮುನ್ನಡೆ ಸಾಧಿಸಿದರು. ಸೋಲುವ ಅಂತದಲ್ಲಿದ್ದ ಭಾರತೀಯ ಆಟಗಾರ್ತಿ ನಂತರ ತಿರುಗಿ ಬಿದ್ದು ಸತತ ಮೂರು ಗೇಮ್ ಗೆದ್ದು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಇದಕ್ಕೂ ಮುನ್ನ ಭಾರತದ ಸ್ಟಾರ್ ಪ್ಯಾಡ್ಲರ್​ ಮನಿಕಾ ಬಾತ್ರ ಬ್ರಿಟನ್​ನ ಟಿನ್ ಟಿನ್ ಹೋ ಅವರನ್ನು 4-0ಯಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು. ಮನಿಕಾ 11-7, 11-6, 12-10, 11-9 ರಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯಯುತ ಗೆಲುವು ಸಾಧಿಸಿದರು.

ಇಂದು ಬೆಳಗ್ಗೆ ಮಿಶ್ರ ಡಬಲ್ಸ್​ನಲ್ಲಿ ಶರತ್​ ಕಮಲ್​ ಜೊತೆಗೂಡಿ ಮೊದಲ ಸುತ್ತಿನಲ್ಲಿ 0-4ರ ಗೇಮ್​ ಅಂತರದಲ್ಲಿ ಸೋಲು ಕಂಡಿದ್ದರು. ಆದರೆ ಸಿಂಗಲ್ಸ್​ನಲ್ಲಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಗೆಲುವು ಪಡೆದರು.

ಇದನ್ನು ಓದಿ:ಮನೆಗೆ ಹೋಗಿ ಎರಡ್ಮೂರು ವರ್ಷ ಆಯ್ತು: ಮೀರಾಬಾಯಿ ಚಾನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.