ETV Bharat / sports

ಆಸ್ಟ್ರೇಲಿಯನ್ ಓಪನ್: ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲೆ ಬಾರ್ಟಿ ಶುಭಾರಂಭ - ಸೋಫಿಯಾ ಕೆನಿನ್​ಗೆ ಸೋಲು

ಮಾಜಿ ನಂ 1 ಜಪಾನ್​ನ ನವೋಮಿ ಒಸಾಕ 6-3, 6-3ರಲ್ಲಿ ಕೊಲಂಬಿಯಾದ ಕ್ಯಾಮಿಲಾ ಒಸಾರಿಯೋ ವಿರುದ್ಧ, 5ನೇ ಶ್ರೇಯಾಂಕದ ಗ್ರೀಕ್​ನ ಮರಿಯಾ ಸಕ್ಕರಿ ಜರ್ಮನಿಯ ತಟ್ಯಾನ ಮರಿಯಾ ವಿರುದ್ಧ 6-4, 7-6ರಲ್ಲಿ ಗೆಲುವು ಸಾಧಿಸಿದರು.

No. 1 Ashleigh Barty
ಆಸ್ಟ್ರೇಲಿಯನ್ ಓಪನ್,ಆ್ಯಶ್ಲೆ ಬಾರ್ಟಿ
author img

By

Published : Jan 17, 2022, 10:29 PM IST

ಮೆಲ್ಬೋರ್ನ್​: ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಆಸ್ಟ್ರೇಲಿಯನ್ ಓಪನ್​ನ ತಮ್ಮ ಮೊದಲ ಪಂದ್ಯದಲ್ಲಿ ಕೇವಲ ಒಂದು ಗೇಮ್​ ಅಂಕ ಕಳೆದುಕೊಂಡು ನೇರ ಸೆಟ್​ಗಳ ಜಯ ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

ಬಾರ್ಟಿ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6-0, 6-1ರ ನೇರ ​ಸೆಟ್​ಗಳ ಅಂತರದಲ್ಲಿ ಉಕ್ರೇನ್​ನ ಲೆಸಿಯಾ ತ್ಸುರೆಂಕೊ ವಿರುದ್ಧ ಕೇವಲ 54 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡರು. ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್​ ಮೇಲೆ ಕಣ್ಣಿಟ್ಟಿರುವ ಬಾರ್ಟಿ ತಮ್ಮ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೂಸಿಯಾ ಬ್ರೊಂಜೆಟ್ಟಿ ವಿರುದ್ಧ ಸೆಣಸಾಡಲಿದ್ದಾರೆ.

ಸೋಫಿಯಾ ಕೆನಿನ್​ಗೆ ಸೋಲು:

ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್​ ಅಮೆರಿಕಾದ ಸೋಫಿಯಾ ಕೆನಿನ್​ ತಮ್ಮದೇ ದೇಶದ ಮ್ಯಾಡಿಸನ್​ ಕೀಸ್​ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದರು. ಶ್ರೇಯಾಂಕರಹಿತ ಕೀಸ್​ ವಿಶ್ವದ 11ನೇ ಶ್ರೇಯಾಂಕದ ಆಟಗಾರ್ತಿಯನ್ನು 7-6, 7-5 ರೋಚಕ ಕದನದಲ್ಲಿ ಸೋಲಿಸಿದರು.

ಜಪಾನ್​ ಮಾಜಿ ನಂ 1 ನವೋಮಿ ಒಸಾಕ 6-3, 6-3ರಲ್ಲಿ ಕೊಲಂಬಿಯಾದ ಕ್ಯಾಮಿಲಾ ಒಸಾರಿಯೋ ವಿರುದ್ಧ, 5ನೇ ಶ್ರೇಯಾಂಕದ ಗ್ರೀಕ್​ನ ಮರಿಯಾ ಸಕ್ಕರಿ ಜರ್ಮನಿಯ ತಟ್ಯಾನ ಮರಿಯಾ ವಿರುದ್ಧ 6-4, 7-6ರಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ:'ನೋ ವ್ಯಾಕ್ಸಿನ್​, ನೋ ಫ್ರೆಂಚ್ ಓಪನ್'​: ಜೊಕೊವಿಕ್​ಗೆ ಫ್ರಾನ್ಸ್ ಸರ್ಕಾರದ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.