ETV Bharat / sports

ಪ್ರಧಾನಿ ನರೇಂದ್ರ ಮೋದಿಗೆ ಬಾಕ್ಸಿಂಗ್ ಗ್ಲೌಸ್ ಉಡುಗೊರೆ ಕೊಟ್ಟ ನಿಖತ್ ಜರೀನ್ - boxing gloves

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನ ಚಿನ್ನದ ಪದಕ ವಿಜೇತೆ, ಬಾಕ್ಸರ್​​ ನಿಖತ್ ಜರೀನ್ ಬಾಕ್ಸಿಂಗ್ ಗ್ಲೌಸ್​ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

nikhat-zareen-presents-boxing-gloves-to-pm-modi
ಪ್ರಧಾನಿ ನರೇಂದ್ರ ಮೋದಿಗೆ ಬಾಕ್ಸಿಂಗ್ ಗ್ಲೌಸ್ ಉಡುಗೊರೆ ಕೊಟ್ಟ ನಿಖತ್ ಜರೀನ್
author img

By

Published : Aug 14, 2022, 6:49 PM IST

ನವದೆಹಲಿ: ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್​​ ನಿಖತ್ ಜರೀನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಕ್ಸಿಂಗ್ ಗ್ಲೌಸ್​ನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾ ಪಟುಗಳು ಪ್ರಧಾನಿ ಮೋದಿ ಅವರನ್ನು ಶನಿವಾರ ಭೇಟಿ ಮಾಡಿದ್ದರು. ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಸಾಧಕ ಪಟುಗಳಿಗೆ ಆತಿಥ್ಯ ನೀಡಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಬಾಕ್ಸರ್​​ ನಿಖತ್ ಜರೀನ್ ಪ್ರಧಾನಿಗೆ ಗ್ಲೌಸ್​ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಈ ಬಗ್ಗೆ ಬಾಕ್ಸರ್ ನಿಖತ್ ಟ್ವಿಟ್ ಮಾಡಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ಬಾಕ್ಸರ್‌ಗಳು ಸಹಿ ಮಾಡಿದ ಬಾಕ್ಸಿಂಗ್ ಗ್ಲೌಸ್​ಗಳನ್ನು ಉಡುಗೊರೆಯಾಗಿ ನೀಡಿರುವುದಕ್ಕೆ ಗೌರವವಿದೆ. ಈ ಅದ್ಭುತ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು. ದೇಶಕ್ಕೆ ಹೆಮ್ಮೆ ತಂದ ನನ್ನ ಸಹ ಆಟಗಾರರೊಂದಿಗೆ ಅದ್ಭುತ ದಿನವನ್ನು ಕಳೆದಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

  • Honoured to gift the boxing gloves signed by all the pugilists to our honorable Prime Minister @narendramodi sir. Thank you for this amazing opportunity.🙏

    A great day spent with my fellow athletes who have made the country proud. 🇮🇳 pic.twitter.com/A0YtlOujUA

    — Nikhat Zareen (@nikhat_zareen) August 14, 2022 " class="align-text-top noRightClick twitterSection" data=" ">

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ ಆಗಿರುವ ನಿಖತ್ ಜರೀನ್, ಬರ್ಮಿಂಗ್‌ಹ್ಯಾಮ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬಾಕ್ಸಿಂಗ್​ನ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಬಂಗಾರದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಒಟ್ಟಾರೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಸೇರಿದಂತೆ 61 ಪದಕಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಮೋದಿ ಕೊರಳಿಗೆ ಸಾಂಪ್ರದಾಯಿಕ ಅಸ್ಸಾಂ ಗಮ್ಚಾ ತೊಡಿಸಿದ ಓಟಗಾರ್ತಿ ಹಿಮಾ ದಾಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.