ಹ್ಯಾಂಗ್‌ಝೌ (ಚೀನಾ): 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಸೆ.23 ರಿಂದ ಆರಂಭವಾಗಿದ್ದು ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನ ಮರುಪಂದ್ಯದಲ್ಲಿ ಭಾರತದ ಅಗ್ರ ಬಾಕ್ಸರ್ ಆಗಿ ಹೊರಹೊಮ್ಮಿದ ನಿಖತ್ ಜರೀನ್ ಅವರು ವಿಯೆಟ್ನಾಂನ ಥಿ ಟಾಮ್ ನ್ಗುಯೆನ್ ಅವರನ್ನು 5-0 ಅಂತರದಿಂದ ಸೋಲಿಸಿ ಮಹಿಳೆಯರ 50 ಕೆಜಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದರೆ, ಪ್ರೀತಿ ಪವಾರ್ 54 ಕೆಜಿ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.
ಎರಡು ಬಾರಿಯ ವಿಶ್ವ ಚಾಂಪಿಯನ್ ಜರೀನ್, ಎರಡು ಬಾರಿಯ ಏಷ್ಯನ್ ಚಾಂಪಿಯನ್ ನ್ಗುಯೆನ್ ಅವರಿಗೆ ಒಂದು ಅಂಕದ ಅವಕಾಶ ಕೊಡದೆ ಮಣಿಸಿದರು. ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಜರೀನ್ 50 ಕೆಜಿ ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೈ ಪಡೆದರು. "ನಾನು ಏಕಪಕ್ಷೀಯ ಪಂದ್ಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ನನ್ನ ಯೋಜನೆಯಂತೆ ಆಟವನ್ನು ಮುಂದುವರಿಸಿದೆ. ಎದುರಾಳಿಗೆ ಅವಕಾಶ ಕೊಡದೇ ಮುಂದುವರೆಯುವುದು ನನ್ನ ಯೋಜನೆಯಾಗಿತ್ತು, ಅದರಂತೆ ಯಶಸ್ವಿಯಾದೆ" ಎಂದು ಜರೀನ್ ಸಂತಸ ಹಂಚಿಕೊಂಡರು.
-
Bang on @nikhat_zareen!!🥊
— SAI Media (@Media_SAI) September 24, 2023 " class="align-text-top noRightClick twitterSection" data="
🇮🇳's boxing queen is on 🔥as she moves into the R16 in the women's 50kg category at #AsianGames2022
The #TOPSchemeAthlete scored a dominant 5-0 win over World C'ships🥈 medallist, 🇻🇳's Nguyen Thi Tam
Great going Champ!! Best wishes for the next… pic.twitter.com/M3y9LigfRV
">Bang on @nikhat_zareen!!🥊
— SAI Media (@Media_SAI) September 24, 2023
🇮🇳's boxing queen is on 🔥as she moves into the R16 in the women's 50kg category at #AsianGames2022
The #TOPSchemeAthlete scored a dominant 5-0 win over World C'ships🥈 medallist, 🇻🇳's Nguyen Thi Tam
Great going Champ!! Best wishes for the next… pic.twitter.com/M3y9LigfRVBang on @nikhat_zareen!!🥊
— SAI Media (@Media_SAI) September 24, 2023
🇮🇳's boxing queen is on 🔥as she moves into the R16 in the women's 50kg category at #AsianGames2022
The #TOPSchemeAthlete scored a dominant 5-0 win over World C'ships🥈 medallist, 🇻🇳's Nguyen Thi Tam
Great going Champ!! Best wishes for the next… pic.twitter.com/M3y9LigfRV
ಆರಂಭದ ಎರಡು ಸುತ್ತುಗಳಲ್ಲಿ ಜರೀನ್ ನಿಖರವಾದ ಪಂಚ್‌ಗಳನ್ನು ಹೊಡೆದು ಎದುರಾಳಿಯನ್ನು ಮಣಿಸಿದರು. ಅವರು ಎಷ್ಟು ವೇಗವಾಗಿ ತಮ್ಮ ಮುಷ್ಠಿಯಿಂದ ಹೊಡೆಯುತ್ತಿದ್ದರೆಂದರೆ, ಆರಂಭಿಕ ಸುತ್ತಿನಲ್ಲಿ 30 ಸೆಕೆಂಡುಗಳಲ್ಲಿ ಎರಡು ಬಾರಿ ನ್ಗುಯೆನ್‌ಗೆ ಎಂಟು ಕೌಂಟ್ಗಳನ್ನು ರೆಫರಿ ನೀಡಿದರು. ನ್ಗುಯೆನ್ ಎರಡನೇ ಸುತ್ತಿನಲ್ಲಿ ಆಕ್ರಮಣ ಮಾಡಲು ಪ್ರಯತ್ನಿಸಿದರು. ಆದರೆ ಜರೀನ್ ಬಲವಾದ ಪಂಚ್‌ಗಳೊಂದಿಗೆ ಅವರನ್ನು ಸೋಲಿಸಿದರು. ಇದರಿಂದ ವಿಯೆಟ್ನಾಂ ಬಾಕ್ಸರ್‌ನ ಮೇಲೆ ಮೂರನೇ ಬಾರಿ ಎಂಟು ಕೌಂಟ್ನ್ನು ರೆಫರಿ ನೀಡಿದರು.
ಜರೀನ್ ಅವರು ಪ್ಯಾರಿಸ್ ಒಲಂಪಿಕ್ಸ್ಗೆ ಅರ್ಹತೆ ಪಡೆಯುವತ್ತ ಗಮನಹರಿಸುತ್ತಿರುವುದಾಗಿ ಹೇಳಿದರು. "ನಾನು ಮೊದಲು ಅರ್ಹತೆಯ ಮೇಲೆ ಕೇಂದ್ರೀಕರಿಸುತ್ತಿದ್ದೇನೆ. ನಂತರ ಹಂತ ಹಂತವಾಗಿ ಅಂತಿಮ ಮತ್ತು ಚಿನ್ನದ ಬಗ್ಗೆ ಯೋಚಿಸುತ್ತೇನೆ" ಎಂದು ಜರೀನ್ ಹೇಳಿದರು. ಲೈಟ್ ಫ್ಲೈವೇಟ್ ವಿಭಾಗದಲ್ಲಿ ಎಲ್ಲಾ ನಾಲ್ಕು ಸೆಮಿಫೈನಲಿಸ್ಟ್‌ಗಳು ಒಲಿಂಪಿಕ್ ಕೋಟಾಗಳನ್ನು ಗಳಿಸುತ್ತಾರೆ.
ಪ್ರತಿಭಾನ್ವಿತ ಭಾರತೀಯ ಬಾಕ್ಸರ್ ಪ್ರೀತಿ, ಜೋರ್ಡಾನ್‌ನ ಸಿಲಿನಾ ಅಲ್ಹಾಸನಾತ್ ವಿರುದ್ಧ ರೆಫರಿ ಸ್ಟಾಪ್ಸ್ ಸ್ಪರ್ಧೆ ಗೆಲುವನ್ನು ಗಳಿಸಿದರು. ಜರೀನ್ 16 ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಚೊರೊಂಗ್ ಬಾಕ್ ಅವರನ್ನು ಎದುರಿಸಲಿದ್ದಾರೆ. ಅನುಭವಿ ಪ್ರೀತಿಗೆ ಕಠಿಣ ಹಣಾಹಣಿ ಎದುರಾಗಲಿದ್ದು, ಅವರು ಮುಂದಿನ ಹಂತದಲ್ಲಿ ಮೂರು ಬಾರಿ ವಿಶ್ವ ಪದಕ ವಿಜೇತ ಝೈನಾ ಶೆಕರ್ಬೆಕೋವಾ ವಿರುದ್ಧ ಹೋರಾಡಬೇಕಾಗುತ್ತದೆ.
ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ 19 ವರ್ಷದ ಪ್ರೀತಿ, ಇದೀಗ ಪದಕ ಮತ್ತು ಒಲಿಂಪಿಕ್ ಕೋಟಾವನ್ನು ಖಚಿತಪಡಿಸಿಕೊಳ್ಳಲು ಒಂದು ಹೆಜ್ಜೆ ಹಿಂದಿದ್ದಾರೆ. ಸ್ಟ್ರಾಟೆಜಿಕ್ ಬೌಟ್ ಆಡುತ್ತಿದ್ದ ಪ್ರೀತಿ ತಮ್ಮ ಆಕ್ರಮಣಕಾರಿ ಆಟಕ್ಕೆ ತೆರೆ ಎಳೆಯುವ ಮೊದಲು ರಕ್ಷಣಾತ್ಮಕ ಕ್ರಮದಲ್ಲಿ ಸ್ಪರ್ಧೆಯನ್ನು ಆರಂಭಿಸಿದರು.
ಇದನ್ನೂ ಓದಿ: IND vs AUS: ಗಿಲ್, ಅಯ್ಯರ್ ಶತಕ.. ರಾಹುಲ್, ಸೂರ್ಯ ಅರ್ಧ ಶತಕ.. ಆಸ್ಟ್ರೇಲಿಯಾಕ್ಕೆ 400 ರನ್ನ ಬೃಹತ್ ಗುರಿ