ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಋತುವಿನಲ್ಲಿ ಅತ್ಯುತ್ತಮ ಥ್ರೋ ಮಾಡಿದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಶುಕ್ರವಾರ ದೋಹಾದ ಕತಾರ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಮೊದಲ ಪ್ರಯತ್ನದಲ್ಲೇ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದಾರೆ. ನೀರಜ್ ಅವರ ಥ್ರೋ ಸ್ಪರ್ಧೆಯ ಅತ್ಯುತ್ತಮ ದಾಖಲೆಯಾಗಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಜೆಕ್ ಆಟಗಾರ ಜಾಕುಬ್ ವಡ್ಲೆಜ್ ಎರಡನೇ ಸ್ಥಾನ ಹಾಗೂ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಮೂರನೇ ಸ್ಥಾನ ಪಡೆದರು. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಆಂಡರ್ಸನ್ ಪೀಟರ್ಸ್ ಚಿನ್ನ ಗೆದ್ದಿದ್ದರು. ಇದೀಗ ಈ ಗೆಲುವಿನ ಮೂಲಕ ನೀರಜ್ ಚೋಪ್ರಾ ಹಿಂದಿನ ಸೋಲಿಗೆ ಪೀಟರ್ಸ್‌ನಿಂದ ಸೇಡು ತೀರಿಸಿಕೊಂಡಿದ್ದಾರೆ.
-
Neeraj Chopra wins 🥇 at the Wanda Diamond League in Doha on Friday with a throw of 88.67m 🇮🇳
— Athletics Federation of India (@afiindia) May 5, 2023 " class="align-text-top noRightClick twitterSection" data="
#IndianAthletics pic.twitter.com/6PP5thpcNR
">Neeraj Chopra wins 🥇 at the Wanda Diamond League in Doha on Friday with a throw of 88.67m 🇮🇳
— Athletics Federation of India (@afiindia) May 5, 2023
#IndianAthletics pic.twitter.com/6PP5thpcNRNeeraj Chopra wins 🥇 at the Wanda Diamond League in Doha on Friday with a throw of 88.67m 🇮🇳
— Athletics Federation of India (@afiindia) May 5, 2023
#IndianAthletics pic.twitter.com/6PP5thpcNR
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೋಪ್ರಾ: ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ನೀರಜ್ ಚೋಪ್ರಾ ಅರ್ಹತೆ ಪಡೆದಿದ್ದಾರೆ. ಜಾವೆಲಿನ್ ಸ್ಪರ್ಧೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಮಾನದಂಡವು 85.50 ಮೀಟರ್ ಆಗಿದೆ. ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಆ ಅಂತರವನ್ನು ದಾಖಲಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಥ್ರೋ :
- ಮೊದಲ ಪ್ರಯತ್ನ - 88.67 ಮೀ.
- 2ನೇ ಪ್ರಯತ್ನ - 86.04 ಮೀ.
- 3ನೇ ಪ್ರಯತ್ನ - 85.47 ಮೀ.
- 4ನೇ ಪ್ರಯತ್ನ - ಫೌಲ್
- ಐದನೇ ಪ್ರಯತ್ನ - 84.37 ಮೀ.
- 6ನೇ ಪ್ರಯತ್ನ - 86.52 ಮೀ.
ಡೈಮಂಡ್ ಲೀಗ್ನ ಅಗ್ರ 8 ಥ್ರೋ :
- ನೀರಜ್ ಚೋಪ್ರಾ (ಭಾರತ) - 88.67 ಮೀ.
- ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) - 88.63 ಮೀ.
- ಆಂಡರ್ಸನ್ ಪೀಟರ್ಸ್ (ಗ್ರೆನಡಾ) - 85.88 ಮೀ.
- ಜೂಲಿಯನ್ ವೆಬರ್ (ಜರ್ಮನಿ) - 82.62 ಮೀ.
- ಆಂಡ್ರಿಯನ್ ಮರ್ಡೇರ್ (ಮಾಲ್ಡೊವಾ) - 81.67 ಮೀ.
- ಕೀಶೋರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ) - 81.27 ಮೀ.
- ರೋಡ್ರಿಕ್ ಜಿ. ಡೀನ್ (ಜಪಾನ್) - 79.44 ಮೀ.
- ಕರ್ಟಿಸ್ ಥಾಂಪ್ಸನ್ (ಯುಎಸ್ಎ) - 74.13 ಮೀ.
ಇದೇ ಕೂಟದಲ್ಲಿ ಭಾರತದ ಅಥ್ಲೀಟ್ ಎಲ್ಡೋಜ್ ಪಾಲ್ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಸ್ಪರ್ಧಿಸಿದ್ದರು. 15.84 ಮೀಟರ್ ದೂರ ಜಿಗಿದು ಹತ್ತನೇ ಸ್ಥಾನ ಗಳಿಸಿದರು. ಈ ಟ್ರಿಪಲ್ ಜಂಪ್‌ನಲ್ಲಿ ಪೆಡ್ರೊ ಪಿಚರ್ಡ್ (ಪೋರ್ಚುಗಲ್) ಚಿನ್ನದ ಪದಕ, ಜಾಂಗೊ (ಬುರ್ಕಿನಾ ಫಾಸೊ) ಬೆಳ್ಳಿ ಪದಕ ಮತ್ತು ಆಂಡಿ ಡಯಾಜ್ (ಕ್ಯೂಬಾ) ಬ್ರಾಂಡ್ ಪದಕ ಗೆದ್ದರು. ಈ ಡೈಮಂಡ್ ಲೀಗ್‌ನಲ್ಲಿ ಒಟ್ಟು 14 ಸರಣಿಗಳು ನಡೆಯಲಿವೆ. ಗ್ರ್ಯಾಂಡ್ ಫೈನಲ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಟಿ20ಯಲ್ಲಿ ತ್ರಿವಳಿ ಸ್ಪಿನ್ನರ್ ಬಳಸುವ ಸಂಜು: ಸ್ಯಾಮ್ಸನ್ ನಾಯಕತ್ವ ಮೆಚ್ಚಿದ ಮಾಜಿ ಕೋಚ್ ರವಿ ಶಾಸ್ತ್ರಿ